ಬೆಂಗಳೂರು: ಕೊಲ್ಕತ್ತಾ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ, ಹತ್ಯೆ, ಹಾಗೂ ಆಸ್ಪತ್ರೆ ಮೇಲೆ ಪ್ರತಿಭಟನಾಕಾರರ ದಾಳಿಗೆ ವಿ.ಸಿ.ಎನ್.ವೈದ್ಯರ ಕ್ಷೇಮಾಭಿವೃದ್ಧಿ ಸಂಘ ಖಂಡನೆ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿ ನಡೆಸಿ ಸಂಘದ ಅಧ್ಯಕ್ಷ ಡಾ.ರಾಜು ಅವರು ಮಾತನಾಡಿ, ಕೋಲ್ಕತಾ ವೈದ್ಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರಗೈದು, ಹತ್ಯೆ ಮಾಡಿದವರಿಗೆ ಉಗ್ರ ಶಿಕ್ಷೆಯಾಗಬೇಕು ಮತ್ತು ಆಸ್ಪತ್ರೆ ಮೇಲೆ ದಾಂಧಲೆ ಮಾಡಿದವರನ್ನು ತಕ್ಷಣವೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿ.ಸಿ.ಎನ್.ಡಾಕ್ಟರ್ಸ್ ವೇಲ್ ಫೇರ್ ಅಸೋಸಿಯೇಷನ್ ಆಗ್ರಹಿಸಿದೆ.
ಕೊಲ್ಕತ್ತಾ ಘಟನೆ ಅತ್ಯಂತ ಅಮಾನವೀಯವಾಗಿದ್ದು, ಈ ಷಡ್ಯಂತ್ರದ ಹಿಂದೆ ಇರುವವರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು. ವೈದ್ಯಕೀಯ ಸಮೂಹದ ಮೇಲೆ ವಿಶ್ವಾಸ ಮೂಡುವ ರೀತಿಯಲ್ಲಿ ಸರ್ಕಾರ ಹೆಜ್ಜೆ ಇಡಬೇಕು ಎಂದು ಹೇಳಿದರು. ಎಲ್ಲಾ ರೀತಿಯ ಆರೋಗ್ಯ ಸೇವಾ ಸೌಲಭ್ಯಗಳು ಮತ್ತು ಸರ್ಕಾರಿ, ಖಾಸಗಿ ಚಿಕಿತ್ಸಾಲಯಗಳು ಆರೋಗ್ಯ ಸೇವೆಯಲ್ಲಿ ನಿರತರಾಗಿರುವ ವೈದ್ಯರು, ಆರೋಗ್ಯ ಸಿಬ್ಬಂದಿಗೆ ಸೂಕ್ತ ಭದ್ರತೆ ಒದಗಿಸಬೇಕು. ವೈದ್ಯರು ದೇವರ ಸಮಾನವಾಗಿದ್ದು, ರೋಗಿಗಳ ಜೀವರ ಕ್ಷಿಸುವ ವೈದ್ಯರನ್ನು ನಿರ್ಮಾಣವಾಗಬೇಕು ಎಂದರು.
ವೈದ್ಯರಿಗೆ ಗೌರವ ಕೊಡುವ ಬದಲು ಹಲ್ಲೆ, ಹಿಂಸೆ ಮಾಡುತ್ತಿರುವುದು ವಿಪರ್ಯಾಸ
ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಮೇಲೆ ಗೌರವದಿಂದ ನೋಡುವ ಪರಿಸ್ಥಿತಿ ಬದಲಾಗಿ ಹಲ್ಲೆ, ಹಿಂಸೆ, ದಾಂಧಲೆ ನಡೆಯುತ್ತಿರುವುದು ವಿಷಾದಕರ ದಾಳಿ, ಗಲಭೆ, ಅಹಿತಕರ ಘಟನೆಗಳನ್ನು ತಡೆಯಲು ಕೇಂದ್ರ ಸರ್ಕಾರ ರಚನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪೊಲೀಸ್ ಮತ್ತು ಆರೋಗ್ಯ ಇಲಾಖೆಯಿಂದ ಆರೋಗ್ಯ ಸಂಸ್ಥೆಗಳಿಗೆ ಸೂಕ್ತ ಭದ್ರತೆ ಕಲ್ಪಿಸಬೇಕು. ಕರ್ತವ್ಯ ನಿರತ ವೈದ್ಯರನ್ನು ಗೌರವದಿಂದ ನೋಡಬೇಕು. ಆರೋಗ್ಯ ಕಾರ್ಯಕರ್ತರು ಎದುರಿಸುತ್ತಿರುವ ಅಪಾಯಗಳನ್ನು ಮತ್ತು ಸೇವೆಯಲ್ಲಿ ನಿರತರಾದವರಿಗೆ ರಕ್ಷಣೆ ನೀಡಲ ಕಠಿಣ ಕಾನೂನು ಜಾರಿಗೆಯಾಗಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ವೈದ್ಯರು ರೋಗಿಗಳ ಆರೈಕೆ ಮತ್ತು ಚಿಕಿತ್ಸೆ ನೀಡುವಾಗ ಜಾತಿ, ಧರ್ಮಗಳ ಬೇಧಭಾವವಿಲ್ಲದೇ ಕಾರ್ಯನಿರ್ವಹಿಸುತ್ತಾರೆ. ಎಂತಹ ಸಂದರ್ಭಗಳಲ್ಲೂ ತುರ್ತು ಮತ್ತು ಅಗತ್ಯ ಆರೋಗ್ಯ ಸೇವೆಗಳು ಮುಂದುವರೆಯತ್ತವೆ. ರೋಗಿಗಳ ತಕ್ಷಣ ಚಿಕಿತ್ಸೆ ನೀಡುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ, ಸಂಘದ ಪದಾಧಿಕಾರಿಗಳಾದ ಕಾರ್ಯದರ್ಶಿ ಬಿ.ಟಿ.ರಮೇಶ್,ಡಾ. ಭೋಜಮ್ಮ, ಡಾ.ವೆಂಕಟರಾಮ್, ಡಾ.ಚಂದ್ರಶೇಖರ್, ಡಾ.ಚಂದ್ರಿಕಾ ಆನಂದ್, ಡಾ.ಪ್ರೀತ್ ಶೆಟ್ಟಿ, ಡಾ.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.