ತಿಪಟೂರು: ಉಪ್ಪಾರ ಸಮಾಜದ ತಿಪಟೂರು ಭಗೀರಥ ಬ್ಯಾಂಕ್ ಅಧ್ಯಕ್ಷರು ಹಾಗೂ ನಿವೃತ್ತ ತಹಸೀಲ್ದಾರ್ ರಾದ ಚನ್ನಬಸಪ್ಪ.ನವರು ಹಲವು ವಿಧ್ಯಾ ಸಂಸ್ಥೆಗಳಿಂದ ಸ್ವರ್ಣ ಪದಕ ಪಡೆದಿರುವುದಕ್ಕೆ ಉಪ್ಪಾರ ಸಮಾಜದಿಂದ ಅಭಿನಂದನೆ ಸಲ್ಲಿಸಿದರು.
2022/23 ನೇ ಸಾಲಿನ ಯೋಗ ಪಿ ಜಿ ಡಿಪ್ಲೊಮೊ ಕೋರ್ಸಿನಲ್ಲಿ ಕರ್ಣಾಟಕ ಸಂಸ್ಕೃತ ವಿವಿ ಯಿಂದ ಅತೀ ಹೆಚ್ಚು ಅಂಕ ಪಡೆದು ಸ್ವರ್ಣ ಪದಕ ಪಡೆದಿರುತ್ತಾರೆ. ಮಹತರ ಸಾಧನೆ ಮಾಡಿದ ತಿಪಟೂರು ಭಗೀರಥ ಸಮಾಜ ಮತ್ತು ಭಗೀರಥ ಬ್ಯಾಂಕ್ ವತಿಯಿಂದ ವಿಶೇಷವಾಗಿ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ಉಪ್ಪಾರ ಸಮಾಜದವರು ಎಲ್ಲಾ ರಂಗದಲ್ಲಿ ಮುಂದೆ ಬಂದು ಇತರರಿಗೆ ಒಳಿತನ್ನು ಮಾಡಲಿ ಎಂದು ಆಶಿಸಿದರು. ಸಮಾಜದವರು ಎಲ್ಲರಿಗಿಂತಲೂ ಎಲ್ಲಾ ಕ್ಷೇತ್ರದಲ್ಲಿ ಹಿಂದುಳಿದಿದ್ದಾರೆ, ಹೀಗಾಗಿ ಅವರಿಗೆ ಸಾಧಕರಿಂದ ಪ್ರೇರಣೆಯಾಗಲಿ ಎಂದು ಆಶಿಸಿದರು.