ಬೆಂಗಳೂರು: ಗಾಂಧಿನಗರ ವಿಧಾನಸಭಾ ಕ್ಷೇತ್ರದ ಓಕಳಿಪುರಂನಲ್ಲಿ ಕೆಪಿಸಿಸಿ ಬೆಂಗಳೂರು ಕೇಂದ್ರ ಕಾಂಗ್ರೆಸ್ ಕಮಿಟಿ ಎಸ್ಸಿ ವಿಭಾಗದ ಅಧ್ಯಕ್ಷರಾದ ಎಪಿಎಸ್ ರಾಜ್ಕಾರ್ತಿಕ್ ಅವರು ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡರು.
ಎಪಿಎಸ್ ರಾಜ್ ಕಾರ್ತಿಕ್ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನೇಶ್ ಗುಂಡೂರಾವ್ ಹಾಗು ಪತ್ನಿ ಅವರು ಆಗಮಿಸಿ ಶುಭಾಶಯಗಳನ್ನು ಕೋರಿದರು, ನಂತರ ಮಾತನಾಡಿದವರು ರಾಜ್ ಕಾರ್ತಿಕ್ ಅವರು ಕ್ಷೇತ್ರದಲ್ಲಿ ಸಾಕಷ್ಟು ಜನಪರವಾದಂತ ಕೆಲಸಗಳನ್ನು ಮಾಡಿದ್ದಾರೆ, ಮಾಡಿಕೊಂಡು ಬರುತ್ತಿದ್ದಾರೆ.
ಬಡವರಿಗೆ ನಿರ್ಗತಿಕರಿಗೆ ಸಾಕಷ್ಟು ಸಹಾಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ ಕಾರ್ತಿಕ್ ಅವರು. ಇವರ ಜನಪರ ಕಾರ್ಯಗಳನ್ನು ಮೆಚ್ಚಿ ಬೆಂಗಳೂರು ಕೇಂದ್ರ ಕಾಂಗ್ರೆಸ್ ಸಮಿತಿ SC ವಿಭಾಗದ ಅಧ್ಯಕ್ಷ ರನ್ನಾಗಿ APS ರಾಜ್ ಕಾರ್ತಿಕ್ ಅವರನ್ನು ಆಯಾಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು. ಮುಂಬರುವ ದಿನಗಳಲ್ಲಿ ಎಪಿಎಸ್ ರಾಜ್ಕಾರ್ತಿಕ್ ಅವರು ಬಿಬಿಎಂಪಿ ಸದಸ್ಯರಾಗಲಿ ಎಂದು ಶುಭ ಕೋರಿದರು.
ಹುಟ್ಟು ಹಬ್ಬದ ಕಾರ್ಯಕ್ರಮಕ್ಕೆ ಬಿಬಿಎಂಪಿ ಸದಸ್ಯರು ಕಾಂಗ್ರೆಸ್ ಮುಖಂಡರು ಆಗಮಿಸಿ ಎಪಿಎಸ್ ರಾಜ ಕಾರ್ತಿಕ್ ಅವರು ಮುಂದಿನ ದಿನಮಾನಗಳಲ್ಲಿ ಅವರ ರಾಜಕೀಯ ಭವಿಷ್ಯ ಉಜ್ವಲವಾಗಲಿ ಹಾಗೆ ಬಿಬಿಎಂಪಿ ಸದಸ್ಯರಾಗಲಿ ಎಂದು ಶುಭ ಹಾರೈಸಿದರು.
ಓಕಲಿಪುರಂ ತಮ್ಮ ನಿವಾಸದ ಮುಂದೆ ಅಭಿಮಾನಿಗಳು ಕಾರ್ಯಕರ್ತರು ಸ್ನೇಹಿತರು ಆಪ್ತರು ಆಗಮಿಸಿ, ಎಪಿಎಸ್ ರಾಜ್ ಕಾರ್ತಿಕ್ ಅವರಿಗೆ ಸನ್ಮಾನಿಸಿ ಶುಭಾಶಯಗಳನ್ನು ಕೋರಿದರು. ಬೃಹತ್ ದಂತಹ ಕೆ ಕತ್ತರಿಸುವ ಮೂಲಕ ವಿಶೇಷವಾದಂತಹ ಹುಟ್ಟು ಹಬ್ಬವನ್ನು ಅಭಿಮಾನಿಗಳು ಸಡಗರಿಂದ ಆಚರಿಸಿದರು. ಅಲ್ಲದೆ ಅಭಿಮಾನಿಗಳಿಗೆ ಬಾಡೂಟ ಆಯೋಜನೆ ಮಾಡಿದರು.
ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ರಾಜ್ ಕಾರ್ತಿಕ್ ಮಾತನಾಡಿ, ನಾನು ಕೇವಲ ಆಡಂಬರ ವಿಚಾರವಾಗಿ ನಾನು ಹುಟ್ಟು ಹಬ್ಬವನ್ನು ಮಾಡಿಕೊಳ್ಳುತ್ತಿಲ್ಲ ಅದರ ಜೊತೆಗೆ ಯಾವುದೇ ಹಣವನ್ನು ಗಳಿಸಲು ಸಂಪಾದನೆ ಮಾಡಲು ನನಗೆ ಆಸೆ ಇಲ್ಲ ಆದರೆ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ನನ್ನ ಆದ್ಯ ಕರ್ತವ್ಯವಾಗಿದೆ ಎಂದರು. ಇನ್ನು ಇದೇ ವೇಳೆ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಸಚಿವರಾಗಿರುವ ದಿನೇಶ್ ಗುಂಡೂರಾವ್ ಅವರು ಕ್ಷೇತ್ರದಿಂದ ಗೆದ್ದು ಬಂದ ಹಿನ್ನೆಲೆ ಕ್ಷೇತ್ರದ ಜನರಿಗೆ ಭೋಜನದ ವ್ಯವಸ್ಥೆಯನ್ನು ಮಾಡಲಾಗಿರುವುದಾಗಿ ಅವರು ತಿಳಿಸಿದರು.
ನಾನೊಬ್ಬ ಕಾಂಗ್ರೆಸ್ ಕಾರ್ಯಕರ್ತನಾಗಿ ಹಲವು ವರ್ಷಗಳಿಂದ ಕ್ಷೇತ್ರದಲ್ಲಿ ಸಾಕಷ್ಟು ಜನಪರ ಕೆಲಸಗಳನ್ನು ಕಾರ್ಯನಿರ್ವಹಿಸಿಕೊಂಡು ಬಂದಿದ್ದೇನೆ ಎಂದರು. ಪ್ರತಿ ವರ್ಷವೂ ಸಹಾ ಅಂಬೇಡ್ಕರ್ ಜಯಂತಿ, ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ ಶಿಬಿರ, ಬಡವರಿಗೆ ಆಹಾರದ ಕಿಟ್ ಗಳನ್ನೂ ವಿತರಿಸಿಕೊಂಡು ಬಂದಿದ್ದೇನೆ ಎಂದರು.
ಅಂಬೇಡ್ಕರ್ ಪುತ್ತಳಿ ಅನಾವರಣ:
ಗಾಂಧಿನಗರ ವಿಧಾನಸಭಾ ಕ್ಷೇತ್ರದ ಓಕಲಿಪುರಂ ವೃತ್ತದಲ್ಲಿ ಭಾರತರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿ, ಸ್ವಾತಂತ್ರ್ಯ ನಂತರ ನೆಹರು ಸರ್ಕಾರದಲ್ಲಿ ಪ್ರಥಮ ಕಾನೂನು ಸಚಿವರಾಗಿ, ಇಡೀ ವಿಶ್ವಕ್ಕೆ ಮಾದರಿ ಸಂವಿಧಾನವನ್ನು ನೀಡಿದ ಬಾಬಾ ಸಾಹೇಬರ ವಿಚಾರಧಾರೆ, ಹೋರಾಟದ ಬದುಕು, ಚಿಂತೆನೆಗಳು ನಮಗೆಲ್ಲರಿಗೂ ಆದರ್ಶ, ಯುವಜನೆತೆಗೆ ಸ್ಫೂರ್ತಿ ಎಂದರು.
ರಾಜ್ ಕಾರ್ತಿಕ್ ಅವರ ಹುಟ್ಟು ಹಬ್ಬದ ಹಿನ್ನೆಲೆ ರಾಜ್ ಅವರ ನಿವಾಸದ ಸುತ್ತಮುತ್ತಲೂ ಸಹ ಹುಟ್ಟುಹಬ್ಬದ ಸೆಕ್ಸ್ ಬ್ಯಾನರ್ ಗಳು ದೊಡ್ಡಮಟ್ಟದಲ್ಲಿ ರಾಜಾಜಿಸುತ್ತಿರುವುದು ನೋಡಬಹುದು, ಇನ್ನು ಇದೇ ವೇಳೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿ ಅನಾವರಣದ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.