ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಧಿಕ ಸೀಟುಗಳಿಂದ ಗೆದ್ದು ಮತ್ತೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಮಾಜಿ ಸಚಿವ ವಿ ಸೋಮಣ್ಣ ಆಶಯ ವ್ಯಕ್ತಪಡಿಸಿದರು.
ಬೆಂಗಳೂರಿನ ಗೋವಿಂದರಾಜನಗರ ಮಂಡಲ ಕಾರ್ಯಕಾರಿಣಿ ಸಭೆಯನ್ನು ವಿಜಯನಗರ ಬಿಜೆಪಿ ಕಛೇರಿಯಲ್ಲಿ ಆಯೋಜಿಸಲಾಗಿತ್ತು.ಮಾಜಿ ಸಚಿವರಾದ ವಿ.ಸೋಮಣ್ಣರವರು ಭಾರತಮಾತೆ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯಕಾರಿಣಿ ಸಭೆಗೆ ಚಾಲನೆ ನೀಡಿದರು.
ಮಾಜಿ ಸಚಿವರಾದ ವಿ.ಸೋಮಣ್ಣರವರು ಮಾತನಾಡಿ ನನ್ನ ಮನಸ್ಸಿನಲ್ಲಿ ಏನು ಇದೆ ಎಂಬುದು ಕಾರ್ಯಕರ್ತರಿಗೆ ಅರಿವಾಗಿದೆ.ಮತದಾರರು ಮತ್ತು ಕಾರ್ಯಕರ್ತರು ನನ್ನ ಜೊತೆಯಲ್ಲಿ ಇದ್ದಾರೆ, ನನ್ನ ತಪ್ಪಿನಿಂದ ನನಗೆ ನೋವಾಗಿದೆ.
ಕಾಂಗ್ರೆಸ್ ಪಕ್ಷ 50ವರ್ಷ ಆಡಳಿತ ನೆಡಸಿದೆ. ಪ್ರಧಾನಿ ನರೇಂದ್ರಮೋದಿರವರು 10ವರ್ಷದ ಆಡಳಿತ ವಿಶ್ವವೇ ಎದ್ದು ನೋಡುವಂತೆ ಮಾಡಿದ್ದಾರೆ.ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರು ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಸತ್ಯವನ್ನೆ ನುಡಿದಿದ್ದಾರೆ.
ನನಗೆ ಆಗಿರುವ ಅಡೆತಡೆಗಳಿಂದ ನಾನು ದೆಹಲಿಗೆ ಹೋಗಿ ಬಿಜೆಪಿ ಪಕ್ಷದ ರಾಷ್ಟ್ರ ನಾಯಕರನ್ನು ಭೇಟಿ ಮಾಡಿದ್ದೇನೆ, ಅವರಿಂದ ಉತ್ತಮ ಸ್ಪಂದನೆ ಸಿಕ್ಕಿದೆ ಎಂದರು.ಲೋಕಸಭಾ ಚುನಾವಣೆ ಭವ್ಯ ಭಾರತದ ಭವಿಷ್ಯದ ಚುನಾವಣೆಯಾಗಿದೆ.
ಸತ್ಯದ ದಾರಿಯಲ್ಲಿ ನಡಯೋಣ ಮತ್ತು ಮತದಾರರ ಅಭಿವೃದ್ದಿ ಕೆಲಸಗಳ ಕುರಿತು ಮಾಹಿತಿ ನೀಡೋಣ ಎಂದರು.ಲೋಕಸಭಾ ಚುನಾವಣೆಯಲ್ಲಿ ಕಳೆದ ಬಾರಿ 50ಸಾವಿರ ಅತ್ಯಧಿಕ ಮತಗಳು ಬಿಜೆಪಿ ಪಕ್ಷಕ್ಕೆ ಬಂದಿತ್ತು.ಈ ಬಾರಿ 1ಲಕ್ಷಕ್ಕೂ ಹೆಚ್ಚು ಮತಗಳನ್ನು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಪಡೆಯುವಂತೆ ಹಗಲಿರುಳು ಶ್ರಮಿಸೋಣ ಎಂದರು.
ಕಾಂಗ್ರೆಸ್ ಪಕ್ಷದವರೆ ಹೇಳುತ್ತಾರೆ ನರೇಂದ್ರಮೋದಿ ಗೆಲ್ಲುತ್ತಾರೆ ಎಂದು.ನಾವು ಚುನಾವಣೆ ಮೈಮರೆಯುದು ಬೇಡ ಲೋಕಸಭಾ ಚುನಾವಣೆಯಲ್ಲಿ ಸಿಪಾಯಿಗಳಂತೆ ಕೆಲಸ ಮಾಡಬೇಕು.ಯುವ ನಾಯಕ ವಿಜಯೇಂದ್ರರವರು ರಾಜ್ಯಾಧ್ಯಕ್ಷರಾದ ಮೇಲೆ ರಾಜ್ಯದಲ್ಲಿ ಮಿಂಚಿನ ಸಂಚಾರ ಮಾಡಿ ಸಂಘಟನೆ ಮಾಡುತ್ತಿದ್ದಾರೆ.ಲೋಕಸಭಾ ಚುನಾವಣೆಯಲ್ಲಿ 28ಸ್ಥಾನಗಳ ಗೆಲುವು ಸಾಧಿಸಿ ಯುವ ನಾಯಕ ಸಾರಥ್ಯಕ್ಕೆ ಜಯಸಿಗಲಿದೆ ಎಂದರು.
ಗೋವಿಂದರಾಜನಗರ ಮಂಡಲ ಬಿಜೆಪಿ ಅಧ್ಯಕ್ಷರಾದ ವಿಶ್ವನಾಥಗೌಡರನ್ನು ಲೋಕಸಭಾ ಚುನಾವಣೆ ಪ್ರಕ್ರಿಯೆ ಮುಗಿಯುವರಗೆ ಅಧ್ಯಕ್ಷರಾಗಿ ಮುಂದುವರೆಯುತ್ತಾರೆ. ರಾಷ್ಟ್ರಿಯ ಅಧ್ಯಕ್ಷರಾದ ನಡ್ಡಾರವರ ಜೊತೆಯಲ್ಲಿ ಸುಮಾರು 2ಗಂಟೆ ಉತ್ತಮ ಸಮಾಲೋಚನೆ ನಡೆಯಿತು.
ಕಾಂಗ್ರೆಸ್ ಪಕ್ಷ ಮತದಾರರಿಗೆ ಬೆದರಿಕೆ ಹಾಕುವ ಕಾರ್ಯ ಮಾಡುತ್ತಿದ್ದಾರೆ.ಕಾಂಗ್ರೆಸ್ ಪಕ್ಷ ನಗೆಪಾಟಿಲಿಗೆ ಇಡಾಗಿದ್ದಾರೆ.ಗ್ಯಾರಂಟಿ ಭಾಗ್ಯಗಳನ್ನು ಕಾಂಗ್ರೆಸ್ ಸರ್ಕಾರವೆ ನಿಲ್ಲಸಲಿದೆ ಎಂದು ಕಾಂಗ್ರೆಸ್ ಯೋಜನೆಗಳ ಬಗ್ಗೆ ವ್ಯಂಗ್ಯವಾಡಿದರು.
ಸೌದೆ ಓಲೆಯಿಂದ ಮುಕ್ತಿಪಡೆದು, ಉಜ್ವಲ ಯೋಜನೆ ಗ್ಯಾಸ್ ನಿಂದ ಅಡುಗೆ ಮಾಡುವುದರಿಂದ ಮಹಿಳೆಯರು ಅತ್ಯಂತ ಋಷಿಯಿಂದ ಇದ್ದಾರೆ 10ಕೋಟಿ ಕುಟುಂಬಗಳು ಇದರ ಫಲಾನುಭವಿಗಳು ಇದ್ದಾರೆ.ಭಾರತ್ ರೈಸ್ 29ರೂಪಾಯಿ 1 ಕೆ.ಜಿ.ನೀಡುತ್ತಿದೆ .ಫಸಲ್ ಭೀಮಾ, ವಿಶ್ವಕರ್ಮ, ಮುದ್ರ ಯೋಜನೆಗಳಿಂದ ಕೊಟ್ಯಂತರ ಜನರು ಆರ್ಥಿಕವಾಗಿ ಸಬಲರಾಗುವಂತೆ ಮಾಡಿದೆ.
500ವರ್ಷದ ಸತತ ಹೋರಾಟದ ಪ್ರತಿಫಲ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನಾ ಭವ್ಯ ಮಂದಿರ ಲೋಕರ್ಪಣೆಯಾಗಿದೆ.
ಗ್ರಾಮ ಚಲೋ ಕಾರ್ಯಕ್ರಮದ ಆನ್ವಯ ಪ್ರತಿಯೊಬ್ಬರ ಮನೆಗಳಿಗೆ ಕಾರ್ಯಕರ್ತರು ಭೇಟಿ ಮಾಡಬೇಕು.ಭವ್ಯ ಭಾರತದ ಭವಿಷ್ಯಕ್ಕೆ ನರೇಂದ್ರಮೋದಿರವರ ಕೈಬಲಪಡಿಸೋಣ ಎಲ್ಲರು ಸಂಘಟನೆ ಮಾಡಿ, ದೇಶದ ಅಭಿವೃದ್ದಿಗೆ ಸಹಕಾರ, ಬೆಂಬಲ ನಿಡೋಣ ಎಂದು ಹೇಳಿದರು.
ಸಭೆಯಲ್ಲಿ ವಿಧಾನಪರಿಷತ್ ಸದಸ್ಯರಾದ ಅ.ದೇವೇಗೌಡ, ರಾಜ್ಯ ಬಿಜೆಪಿ ಯುವ ಮುಖಂಡರಾದ ಡಾ.ಅರುಣ್ ಸೋಮಣ್ಣ, ಮಂಡಲ ಅಧ್ಯಕ್ಷರಾದ ವಿಶ್ವನಾಥಗೌಡ, ವಿಜಯನಗರ ಮಂಡಲ ಅಧ್ಯಕ್ಷ ಟಿ.ವಿ.ಕೃಷ್ಣ,ಮಹಿಳಾ ವಿಭಾಗದ ಅಧ್ಯಕ್ಷೆ ರತ್ಮಮ್ಮ,ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಮೋಹನ್ ಕುಮಾರ್ ದಾಸೇಗೌಡ, ಪಲ್ಲವಿ ಚನ್ನಪ್ಪ, ರೂಪಲಿಂಗೇಶ್ವರ್, ಬಿಜೆಪಿ ಮುಖಂಡರುಗಳಾದ ಶ್ರೀಧರ್,ನಂಜಪ್ಪ, ಸಿಎಂ.ರಾಜಪ್ಪ, ಕ್ರಾಂತಿರಾಜು, ವೇಣು, ರಮೇಶ್, ಬುಲೆಟ್ ವೆಂಕಟೇಶ್, ನಂಜಪ್ಪರವರು ಭಾಗವಹಿಸಿದ್ದರು.ಇದೇ ಸಂದರ್ಭದಲ್ಲಿ ವಿಕಲಚೇತನ ಪದ್ಮಶ್ರೀ ಪುರಸ್ಕಾತ ರಾಜಣ್ಣರವರಿಗೆ ಸನ್ಮಾನಿಸಲಾಯಿತು.