ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಮೂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರಾದ ತಾವರೆಟ್ಟವರು ಸಿದ್ದರಾಮಯ್ಯ ವಿರುದ್ಧ ಕಾಸಿಕ್ಯೂಷನ್ ಲೋಟಸ್ ಜಾರಿ ಮಾಡಲಾಗಿತ್ತು ಹೈಕೋರ್ಟ್ ನಲ ವಾದ ವಿವಾದಗಳು ಸಹ ನಡೆಯುತ್ತಿವೆ, ರಾಜ್ಯಪಾಲರ ನಡೆ ವಿರುದ್ಧ ಕಾಂಗ್ರೆಸ್ ವಿಧಾನಸೌಧದಿಂದ ರಾಜಭವನ ಚಲೊ ನಡೆಸಲಾಯಿತು.
ರಾಜ್ಯಪಾಲರ ನಡು ವಿರುದ್ಧ ರಾಜಭವನ ಚಲೋ ಕಾರ್ಯಕ್ರಮದಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರ ಕೆಂಗೇರಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಮುಖಂಡರಾದ ಬಿಸಿ ಮುನಿರಾಜು ಭಾಗವಹಿಸಿ ಮಾತನಾಡಿದವರು, ರಾಜ್ಯಪಾಲರ ನಡೆ ಅ ಸಂವಿಧಾನಿಕವಾಗಿದ್ದು, ರಾಜಕೀಯ ಮಾಡುತ್ತಿದ್ದಾರೆ, ರಾಜಭವನವನ್ನು ರಾಜಕೀಯ ಮಾಡಿಕೊಳ್ಳುತ್ತಿರುವುದು ದುರದೃಷ್ಟಕರ ಸಂಗತಿಯಾಗಿದ್ದು, ಪಕ್ಷಾತೀತವಾಗಿ ಇರಬೇಕಾದ ರಾಜ್ಯಪಾಲರು ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಎನ್ನುವಂತಾಗಿದೆ ಮಾಡುತ್ತಿರುವುದು ರಾಜಕೀಯವಾಗಿ ಸರಿಯಲ್ಲ ಎಂದರು.
ರಾಜ್ಯಪಾಲರ ನಡೆ ರಾಜಕೀಯದ ಕಡೆ!
ಮುಖ್ಯಮಂತ್ರಿಗಳಿಗೆ ಉಪ ಮುಖ್ಯಮಂತ್ರಿಗಳಿಗೆ ಸಚಿವರಿಗೆ ಶಾಸಕರಿಗೆ ಅವರದ್ದೇ ಆದಂತಹ ಕಾರ್ಯ ಚಟುವಟಿಕೆಗಳಿವೆ, ಮೂಡ ವಿಚಾರದಲ್ಲಿ ರಾಜ್ಯಪಾಲರು ರಾಜಕೀಯ ಮಾಡುತ್ತಿರುವುದು ಜನರು ಮೆಚ್ಚುವಂತಹ ಮಾತೇ ಇಲ್ಲ, ಮುಖ್ಯಮಂತ್ರಿಗಳ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದು ರಾಜ್ಯದ ಜನತೆ ಸಹಿಸುವುದಿಲ್ಲ, ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಕೇಳಿಸಲು ಸಾಧ್ಯವಿಲ್ಲ, ಯಾರೇ ಬಂದರೂ ಸಹ ಅವರಿಗೆ ರಾಜಕೀಯ ದುರುದ್ದೇಶದಿಂದ, ಪಿತೂರಿಗಳಿಂದ ಷಡ್ಯಂತ್ರಗಳಿಂದ ಮಾಡುತ್ತಿದ್ದಾರೆ ಹೊರತು ಇದರಲ್ಲಿ ಯಾವುದೇ ಹುರುಳಿಲ್ಲ ಎಂದರು.
ಪ್ರಕರಣವು ಈಗಾಗಲೇ ಹೈಕೋರ್ಟ್ ನಲ್ಲಿ ನಡೆಯುತ್ತಿದ್ದು ಅದಕ್ಕೆ ಸಂಬಂಧಿಸಿದಂತೆ ಸಾಕಷ್ಟು ದಾಖಲೆಗಳನ್ನು ಸಲ್ಲಿಸಿದ್ದಾರೆ, ಅದಕ್ಕೆ ಹಿರಿಯ ವಕೀಲರು ಸಹ ವಾದವಿವಾದಗಳನ್ನು ಮಂಡನೆ ಮಾಡುತ್ತಿದ್ದಾರೆ. ಜೆಡಿಎಸ್ ಬಿಜೆಪಿ ನಾಯಕರು ಸಿದ್ದರಾಮಯ್ಯ ಅವರನ್ನು ಏನು ಮಾಡಲು ಸಾಧ್ಯವಿಲ್ಲ, ರಾಜಕೀಯವಾಗಿ ಕುಗ್ಗಿಸಲು ಹೋಗುತ್ತಾರೆ ಅದು ನಡೆಯುವುದಿಲ್ಲ ಎಂದರು.
ಇನ್ನು ಕೆಂಗೇರಿ ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಕೆ ಮಂಜುನಾಥ್ ಗೌಡ್ರು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊ ರಾಜೀನಾಮೆ ಕೊಡಲು ಬಿಡುವುದಿಲ್ಲ, ನ್ಯಾಯ ಸಿಗುವ ತನಕ ಹೋರಾಟ ಮಾಡುತ್ತೇವೆ ಎಂದರು. ಮೂಡ ಹಾಕೊಡದಲ್ಲಿ ಸಿಎಂ ಸಿದ್ದರಾಮಯ್ಯ ಪಾಲಾಗಿದ್ದಾರೆಂದು ರಾಜ್ಯದಲ್ಲಿ ಕೇಂದ್ರದಲ್ಲಿ ಜೆಡಿಎಸ್ ಬಿಜೆಪಿಯನ್ನು ಎಲ್ಲಾ ಕಡೆನೂ ಎತ್ತುಕಟ್ಟುವ ಕೆಲಸವನ್ನು ಮಾಡುತ್ತಿದ್ದಾರೆ, ಆದರೆ ಕುಮಾರಸ್ವಾಮಿ ಕಾಲದ ಅವಧಿಯಲ್ಲಿ ಮೂಡದಲ್ಲಿ 48 ಸೈಟುಗಳ ಹಗರಣವೇ ನಡೆದ ಹೋಯಿತು ಅದನ್ನು ಕೇಳುವರು ಯಾರು ಇಲ್ಲವೆ? ಇವರ ಬಗ್ಗೆ ಯಾಕೆ ಅವರು ಬಾಯಿ ಬಿಡುತ್ತಿಲ್ಲ. ಕುಮಾರಸ್ವಾಮಿ ಹಳೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯಪಾಲರು ಯಾಕೆ ನೋಟಿಸ್ ಕೊಡುತ್ತಿಲ್ಲ ನಾವು ಅದನ್ನೇ ಕೇಳುತ್ತೇವೆ ಎಂದರು.
ರಾಜ್ಯಪಾಲರು ರಾಜಕೀಯವನ್ನು ಬಿಟ್ಟು ಅವರ ಹುದ್ದೆಯನ್ನು ಹೆಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗಲಿ ಇದರಿಂದ ಅವರಿಗೆ ಶೋಭೆ ಸಿಗುತ್ತದೆ, ರಾಜ್ಯಪಾಲರ ನಡೆಯ ವಿರುದ್ಧ ಬಿಡದಿಯಿಂದ ಮೈಸೂರಿನವರೆಗೆ ಧರಣಿ ಸತ್ಯಾಗ್ರ ಪ್ರತಿಭಟನೆಗಳನ್ನು ನಡೆಸಿಕೊಂಡು ಹೋಗುತ್ತೇವೆ ಎಂದರು.