ಬೆಂಗಳೂರು: ಐಎಎಸ್ ಅಧಿಕಾರಿ ದಯಾನಂದ್ ಅವರ ಹಾದಿಗಲ್ಲು ಕೃತಿ ಹಳ್ಳಿ, ಗ್ರಾಮೀಣಾ, ಬಾಲ್ಯದ ನೆನಪನ್ನು ಸೊಗಸಾಗಿ ಮಾಡಿಕೊಟ್ಟಿದೆ, ಪುಸ್ತಕದಲ್ಲಿ ಎಲ್ಲಿಯೂ ಲೋಪವಿಲ್ಲದಂತೆ ಚಿತ್ರಿಸಿರುವುದು ಸ್ವಾಗತಾರ್ಹ ಎಂದು ಮಾಜಿ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದರು.
ಹಾದಿಗಲ್ಲು ಪುಸ್ತಕದ 12ನೇ ಮುದ್ರಣದ ಅನಾವರಣ ಉದ್ಘಾಟನೆ ಮಾಡಿದ ಚಿರಂಜೀವಿ ಸಿಂಗ್, ಪುಸ್ತಕ ಬಹಳ ಚೆನ್ನಾಗಿದೆ, ಗ್ರಾಮೀಣ ಜೀವನ ,ಹಳ್ಳಿಯ, ಬಾಲ್ಯದ ವಿವರಣೆ ನೀಡಿದರು. ಕುರಿಗಳ ಸಹಾಕರು ಬಗ್ಗೆ ವಿವಸಿದ್ದರೆ, ನಕ್ಸಲ್ ಎನ್ಕೌಂಟರ್, ಸಾಕೇತ್ ರಾಜನ್ ಪ್ರಕರಣದ ಬಗ್ಗೆ ಪುಸ್ತಕದಲ್ಲಿ ಬರೆದಿದ್ದಾರೆ. ಅವರು, ಸರ್ಕಾರದ ಆಡಳಿತ ಸೇವೆಯ ಅಧಿಕಾರಿ ಕೆ ದಯಾನಂದ್ ಅವರ ಹಾದಿಗಲ್ಲು ಕೃತಿ ಹಾಲಿನಂತೆ ಸೊಗಸು, ಅವರ ಜೀವನದ ವೃತ್ತಾಂತದ ಆತ್ಮಕತನವನ್ನು ಪುಸ್ತಕದಲ್ಲಿ ಎಳೆ ಎಳೆಯಾಗಿ, ಅವರ ಜೀವನದಲ್ಲಿ ನಡೆದ ಘಟನೆಗಳನ್ನು ಬಿಚ್ಚಿಟ್ಟಿದ್ದಾರೆ.
ಮೂಡಿಗೆರೆ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಕರಣಗಳ ಬಗ್ಗೆ ಸ್ವವಿವರವಾಗಿ ಬರೆದಿದ್ದಾರೆ, 2,3 ವರ್ಷಗಳಲ್ಲಿ ಕೃತಿಗಳು 12 ನೇ ಮುದ್ರಣ ವಾಗಿರುವುದನ್ನು ನೋಡಿದರೆ ಸ್ವಾಗತಾರ್ಹ ಎಂದರು. ದಯಾನಂದ ಅವರು ಕಷ್ಟ,ಸುಖ,ಅಳಲು, ದುಃಖ, ದುಮ್ಮಾನ ಜನರಿಂದ ಎಲ್ಲವನ್ನೂ ಸ್ವೀಕರಿಸುತ್ತಾರೆ, ಮುಂದಿನ 3 ಕೃತಿಗಳು ತಂದೆ ತಾಯಿ, ಗ್ರಾಮಗಳ, ಹಳ್ಳಿಗಳ ಬಗ್ಗೆ ಬರ್ಲಿ ಎಂದು ಶುಭ ಹಾರೈಸಿದರು.
ಹಾದಿಗಲ್ಲು ಪುಸ್ತಕ ಲೋಕಾರ್ಪಣೆ ಮಾಡಿ ಸಿದ್ದರಾಮಯ್ಯ ಮಾತನಾಡಿ, ಅಂತರಂಗದಲ್ಲಿ ಬದುಕನ್ನು ಕಟ್ಟಿಕೊಟ್ಟಿದ್ದಾರೆ, ಹಾದಿಗಲ್ಲಿನಲ್ಲಿ ತಮ್ಮ ಬದುಕು, ಮೈಲುಗಲ್ಲು, ಮೂಲಕ ಆತ್ಮಾವಲೋಕನ ವನ್ನು ಚಿತ್ರಿಸಿದ್ದಾರೆ ಪುಸ್ತಕದಲ್ಲಿ, ನೋವು, ಹಸಿವು,ಅವಮಾನ, ನಿಂದನೆಗಳನ್ನು ಎಲ್ಲವನ್ನೂ ಸಹಿಸಿಕೊಂಡು ಬರೆದಿರುವ ಕೃತಿಯಾಗಿದೆ.
ದಯಾನಂದ ಅವರ ಕೃತಿ ಹಾದಿ ಗಲ್ಲು 12 ಮುದ್ರಣಗಳನ್ನು ಕಂಡಿದೆ ಎಂದರೆ ಸಾಮಾನ್ಯವಲ್ಲ, ಇವರ ಒಳಗಿರುವ ಸುಪ್ತ ಮನಸ್ಸುಗಳನ್ನು ಇನಷ್ಟು ಪುಸ್ತಕದ ರೂಪದಲ್ಲಿ ಬರೆಯಲಿ ಎಂದರು. ನೋವು, ನವಿಲು, ಸಂತ್ರಸ್ತರ ಸಮಸ್ಯೆಗಳಿಗೆ ಅವರ ಕಿವಿ ಮಿಡಿಯಲಿ ಎಂದು ದಯಾನಂದ್ ಅವರಲ್ಲಿ ಮನವಿ ಮಾಡಿಕೊಂಡರು.
ಹಾದಿಗಲ್ಲು ಕೃತಿಯಲ್ಲಿ ದಯಾನಂದ ಅವರ ಜೀವನದ ವೃತ್ತಾಂತದ ಕೆಲಸ ಕಾರ್ಯದಲ್ಲಿ ನಡೆದ ಘಟನಾವಳಿ, ಜನಸಾಮಾನ್ಯರ ಕಷ್ಟ ಕಾರ್ಪಣ್ಯಗಳು ಆಡಳಿತದಲ್ಲಿ ಎಲ್ಲೆಡೆ ಎದುರಾದ ಸಮಸ್ಯೆಗಳ ಬಗ್ಗೆ, ರಾಜಕಾರಣಿಗಳ ದಬ್ಬಾಳಿಕೆ, ಸೊಕ್ಕಿನ ನಡುವೆಯೂ ಅವರನ್ನು ಎದುರು ಹಾಕಿಕೊಂಡು ಆಡಳಿತ ಸೇವೆಯಲ್ಲಿ ಕೆಲಸ ಮಾಡುತ್ತಾ 12 ನೇ ಮುದ್ರಣದಲ್ಲಿನ ಪುಸ್ತಕದಲ್ಲಿ ಸಾಕಷ್ಟು ವಿಚಾರಗಳನ್ನು ಬಣ್ಣಿಸಿದ್ದಾರೆ, ಸರಳವಾದ ಭಾಷೆಯಲ್ಲಿ ಯಾವುದೇ ಪದಗಳಿಗೆ ಬಣ್ಣವನ್ನು ಲೇಪನ ಮಾಡದೆ ಸರಳವಾಗಿ ಈಗಿನ ಕಾಲಘಟ್ಟಕ್ಕೆ, ಜನರಿಗೆ, ದುರಹಂಕಾರದ ಅಧಿಕಾರಿಗಳಿಗೆ ತಿದ್ದಿ ತೀಡುವ ಒಂದು ಪುಸ್ತಕವಾಗಿದೆ ಎಂದು ತಿಳಿಸಿದರು.
ಐಎಎಸ್ ಮಾಜಿ ಅಧಿಕಾರಿ ಚಿರಂಜೀವಿ ಸಿಂಗ್, ಪ್ರೊ.ಸಿದ್ದರಾಮಯ್ಯ, ನಾಟಕಕಾರ ಕೆ ವೈ ನಾರಾಯಣಸ್ವಾಮಿ, ಸಾಹಿತಿ ರಾಜಶೇಖರ ಮಠಪತಿ, ಡಾ.ವಿಜಯಮ್ಮ, ನಾಟಕ ನಿರ್ದೇಶಕ ಬಸವಲಿಂಗಯ್ಯ, ವೈದ್ಯ ಡಾ.ಅಬ್ದುಲ್ ಖಾದರ್, ದಯಾನಂದ್, ಪದ ಸಂಸ್ಥೆಯ ಕಾರ್ಯದರ್ಶಿ ಪದ ನಾಗರಾಜು, ವಿಜಯ್ ಸೇರಿದಂತೆ ಅನೇಕ ಸಾಹಿತಿಗಳು, ಕವಿಗಳು ಉಪಸ್ಥಿತರಿದ್ದರು.
ಅದಕ್ಕೂ ಮುನ್ನ ಯುವ ಕವಿಗಳು, ಹಿರಿಯ ಸಾಹಿತಿಗಳಿಂದ ಐಎಎಸ್ ಅಧಿಕಾರಿ ಕೆ ದಯಾನಂದ್ ಅವರು ಬರೆದಿರುವ ಹಾದಿಗಲ್ಲು ಕೃತಿಯ ಪುಸ್ತಕದ ಬಗ್ಗೆ ಸಾಕಷ್ಟು ವಿಚಾರಗಳನ್ನು ಮಾಡಿದ್ದರು, ಅವರ ಬಗ್ಗೆ ಕವಿತೆಗಳನ್ನು ಸಹ ಬರೆದು ಅವರ ಬಗ್ಗೆ ವರ್ಣನೆಗಳನ್ನು ಮಾಡಿದರು.