ಬೆಂಗಳೂರು: “ಬ್ರ್ಯಾಂಡ್ ಬೆಂಗಳೂರು” ಪರಿಕಲ್ಪನೆ ಅಡಿ ಬೆಂಗಳೂರು ನಗರದ ಸರ್ವತೋಮುಖ ಅಭಿವೃದ್ಧಿ ಕುರಿತಂತೆ ಸನ್ಮಾನ್ಯ ಉಪಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಶ್ರೀ ಡಿ.ಕೆ ಶಿವಕುಮಾರ್ ರವರು ಇಂದು ವಿಧಾನಸೌಧದ ಕೊಠಡಿ ಸಂಖ್ಯೆ: 334 ಸಮ್ಮೇಳನ ಸಭಾಂಗಣದಲ್ಲಿ ಮಾನ್ಯ ಸಚಿವರು ಹಾಗೂ ಶಾಸಕರುಗಳೊಂದಿಗೆ ಸಭೆ ನಡೆಸಿದರು.
ಇದೇ ವೇಳೆ “ಬ್ರ್ಯಾಂಡ್ ಬೆಂಗಳೂರು” ಕುರಿತ ಕಿರುಹೊತ್ತಿಗೆ ಹಾಗೂ ರಸ್ತೆ ಗುಂಡಿ ಗಮನ ಮೊಬೈಲ್ ಅಫ್ಲಿಕೇಷನ್ ಅನ್ನು ಅನಾವರಣಗೊಳಿಸಲಾಯಿತು.
ಈ ವೇಳೆ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ, ಶ್ರೀ ಜಮೀರ್ ಅಹ್ಮದ್ ಖಾನ್, ಶ್ರೀ ದಿನೇಶ್ ಗುಂಡೂರಾವ್, ವಿರೋಧ ಪಕ್ಷದ ನಾಯಕರಾದ ಶ್ರೀ ಆರ್. ಅಶೋಕ್, ಶಾಸಕರಾದ ಶ್ರೀ ಎನ್.ಎ ಹ್ಯಾರೀಸ್, ಶ್ರೀ ಶಿವಣ್ಣ, ಡಾ. ಸಿ.ಎನ್ ಅಶ್ವತ್ ನಾರಾಯಣ್, ಶ್ರೀ ಭೈರತಿ ಬಸವರಾಜು, ಶ್ರೀ ಎ.ಸಿ ಶ್ರೀನಿವಾಸ್, ಶ್ರೀ ಮುನಿರಾಜು, ಶ್ರೀ ಸತೀಶ್ ರೆಡ್ಡಿ, ಶ್ರೀ ಕೆ. ಗೋಪಾಲಯ್ಯ, ಶ್ರೀ ರವಿಸುಬ್ರಮಣ್ಯ, ಶ್ರೀ ಕೃಷ್ಣಪ್ಪ, ಶ್ರೀ ರಿಜ್ವಾನ್ ಹರ್ಷದ್, ಶ್ರೀ ಉದಯ್ ಬಿ. ಗರುಡಾಚಾರ್,
ಶ್ರೀ ಮುನಿರತ್ನ, ಶ್ರೀ ಎಸ್.ಟಿ ಸೋಮಶೇಖರ್, ಶ್ರೀಮತಿ ಮಂಜುಳಾ, ಶ್ರೀ ಸಿ.ಕೆ ರಾಮಮೂರ್ತಿ, ಶ್ರೀ ಎಸ್.ಆರ್ ವಿಶ್ವನಾಥ್, ವಿಧಾನ ಪರಿಷತ್ ಸದಸ್ಯರುಗಳು, ಆಡಳಿತಗಾರರಾದ ಶ್ರೀ ಎಸ್.ಆರ್ ಉಮಾಶಂಕರ್, ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್, ವಿಶೇಷ ಆಯುಕ್ತರು, ವಲಯ ಆಯುಕ್ತರು ಸೇರಿದಂತೆ ಪಾಲಿಕೆ, ಬಿಡಿಎ, ಮೆಟ್ರೋ, ಜಮಂಡಳಿ, ಪೊಲೀಸ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.