ಸುಪ್ರಸಿದ್ಧ ಅಮೀನಗಢದ ವಿಜಯ್ ಕರದಂಟು ಈಗ ಬೆಂಗಳೂರಿನ ಬಸವೇಶ್ವರನಗರದಲ್ಲಿ ತನ್ನ ನಾಲ್ಕನೇ ಸಿಹಿ ತಿನಿಸಿನ ಮಳಿಗೆ ಪ್ರಾರಂಭ
ಪೌಷ್ಠಿಕಯುಕ್ತ, ರುಚಿಕರ, ಬಾಯಲ್ಲಿ ನೀರೂರಿಸುವ ಸಿಹಿ ತಿಂಡಿ
ಗುಣಮಟ್ಟಕ್ಕೆ ಹೆಸರು, ಆರೋಗ್ಯ, ಪೌಷ್ಟಿಕಾಂಶ ಗಳಿಗೆ ಹೆಚ್ಚು ಹೆಸರು ಪಡೆದಿದೆ
ಯಾವುದೇ ರಾಸಾಯನಿಕ, ಕೃತಕ ಪದಾರ್ಥ ಬಳಸದೆ ನೈಸರ್ಗಿಕ ಪದಾರ್ಗಳಿಂದಲೇ ಕರದಂಟು ತಯಾರಿ
__________________________________________
ಬೆಂಗಳೂರು: ಅಮೀನಗಢ ವಿಜಯ್ ಕರದಂಟು ತನ್ನ ಸಿಹಿ ತಿನಿಸಿಗೆ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯಿಂದ ತನ್ನ ಪ್ರತಿಷ್ಠೆಯನ್ನು ಬೆಳೆಸಿಕೊಂಡಿದೆ. ಕರದಂಟಿನ ಪ್ರತಿ ತುಣುಕೂ ಅತ್ಯಂತ ಎಚ್ಚರಿಕೆಯಿಂದ ತಯಾರಿಸಲಾಗಿದ್ದು ಪ್ರತಿ ಬಾರಿ ಸೇವಿಸಿದಾಗಲೂ ಅದರ ಶ್ರೀಮಂತ ಪರಂಪರೆಯ ಸಾಕ್ಷಿಯಾಗಿರುತ್ತದೆ ಎಂದು ಶಾಸಕ ಗೋಪಾಲಯ್ಯ ತಿಳಿಸಿದರು.
ಬಸವೇಶ್ವರ ನಗರದಲ್ಲಿ ನೂತನ ಶಾಖೆಯ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಭಾರತದ ಮೊದಲ ಮತ್ತು ಅತ್ಯಂತ ಹಳೆಯ ಕರದಂಟು ಉತ್ಪಾದಕರಾದ ಅಮೀನಗಢದ ವಿಜಯ್ ಕರದಂಟು ಬೆಂಗಳೂರಿನಲ್ಲಿ ತನ್ನ ನಾಲ್ಕನೇ ಮಳಿಗೆ ಮತ್ತು ಕರ್ನಾಟಕದಲ್ಲಿ 25ನೇ ಮಳಿಗೆಯ ಪ್ರಾರಂಭವನ್ನು ಮಾಡಿದ್ದು, ಬೆಂಗಳೂರಿಗರಿಗೆ ಉತ್ತರಕರ್ನಾಟಕದ ವಿಶೇಷ ಖಾದ್ಯ ಪೌಷ್ಟಿಕ ಯುಕ್ತ ಸಿಹಿ ತಿನಿಸು ಪದಾರ್ಥಗಳನ್ನು ಪರಿಚಯಿಸಿದ್ದಾರೆ. ಹೀಗೆ ಗುಣಮಟ್ಟದ ತಿಂಡಿ ತಿನಿಸುಗಳನ್ನು ಮುಂದುವರೆಸಿಕೊಂಡು ಪ್ರಸಿದ್ಧಿ ಪಡೆದು ಉದ್ಯಮ ಕ್ಷೇತ್ರದಲ್ಲಿ ಹೆಸರುಗಳಿಸಿ, ದೊಡ್ಡ ಉದ್ಯಮಿಯಾಗಲಿ ಎಂದು ಆಶಿಸಿದರು.
ಮಾಜಿ ಶಾಸಕ ಹಾಗು ಉದ್ಯಮಿ ಮಸಾಲೆ ಜಯರಾಮ್ ಮಾತನಾಡಿ, ದೂರದ ಉತ್ತರ ಕರ್ನಾಟಕದ ವಿಶೇಷ ತಿಂಡಿ ಕರದಂಟು ಅಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದೆ, ಅದನ್ನು ಬೆಂಗಳೂರಿಂದ ಜನರಿಗೆ ಸಿಹಿಯ ಗಮ್ಮತ್ತನ್ನು ಹಂಚುವ ಸಲುವಾಗಿ ಬಸವೇಶ್ವರ ನಗರದಲ್ಲಿ ನೂತನ ಶಾಖೆ ಆರಂಭಿಸಿದ್ದು, ತರಹೇವಾರಿ ಕಾರದಂಟಿನ ಆಹಾರ ಪದಾರ್ಥಗಳು ಲಭ್ಯ ಇದೆ. ಅದರ ಜೊತೆಗೆ ಉದ್ಘಾಟನೆ ಕೊಡುಗೆಯಾಗಿ ಗ್ರಾಹಕರು 1 ಕೆಜಿ ಕರದಂಟು ಖರೀದಿ ಮಾಡಿದರೆ ಒಂದು ಇಳಕಲ್ ಸೀರೆ ಉಚಿತವಾಗಿ ನೀಡಲಾಗುತ್ತದೆ ಎಂದರು.
ಕರದಂಟು ಸಂಸ್ಥೆಯ ಪ್ರೆಪ್ರೇಟರ್ ಸಂತೋಷ್ ಐಹೊಳ್ಳಿ ಮಾತನಾಡಿ, ವಿಜಯ್ ಕರದಂಟು ಮೊತ್ತ ಮೊದಲು ದೇಶಿ ಉತ್ಪನ್ನವಾಗಿದೆ, ಇದರಲ್ಲಿ ಯಾ ಇದೆ ರಾಸಾಯನಿಕಗಳನ್ನು ಬಳಸದೆ ಸಿಹಿ ಪದಾರ್ಥಗಳನ್ನು ತಯಾರಿ ಮಾಡಲಾಗುತ್ತದೆ. ಇದು ಅಮೀನ್ ಘಡದಲ್ಲಿ ಹೆಚ್ಚು ಪ್ರಖ್ಯಾತಿ ಪಡೆದಿದೆ, ಇದರಲ್ಲಿ ಪೌಷ್ಟಿಕಾಂಶಗಳು ಕೂಡಿವೆ ಎಂದರು.
ಗ್ರಾಹಕರಿಗೆ ತನ್ನ ರುಚಿಕರ ವಿಶೇಷ ಸಿಹಿ ತಿನಿಸುಗಳಿಂದ ಗ್ರಾಹಕರಿಗೆ ಸಂತೃಪ್ತಿ ನೀಡುವುದನ್ನು ಮುಂದುವರಿಸಿದೆ. ಗುಣಮಟ್ಟಕ್ಕೆ ಈ ಬ್ರಾಂಡ್ ನ ಬದ್ಧತೆಯು ಅದರ ಅತ್ಯುತ್ತಮ ಮತ್ತು ಆರೋಗ್ಯಕರ ಉತ್ಪನ್ನಗಳ ಬಳಕೆಯಲ್ಲಿ ಮತ್ತು ಕೃತಕ ಸಿಹಿ ಪದಾರ್ಥಗಳ ಬಳಕೆ ಮಾಡದಿರುವ ಮೂಲಕ ಒಂದು ಶತಮಾನಕ್ಕಿಂತ ಹೆಚ್ಚು ಕಾಲದಿಂದ ಕಾಪಾಡಿಕೊಂಡು ಬಂದಿರುವ ಕರದಂಟಿನ ವಿಶ್ವಾಸಾರ್ಹತೆ ಮುಂದುವರಿಸಿದೆ.ವಿಜಯ್ ಬಸವೇಶ್ವರನಗರದಲ್ಲಿ ನಮ್ಮ ಹೊಸ ಮಳಿಗೆಯನ್ನು ಪ್ರಾರಂಭಿಸುವ ಮೂಲಕ ಬೆಂಗಳೂರಿನಲ್ಲಿ ನಮ್ಮ ವ್ಯಾಪ್ತಿ ವಿಸ್ತರಿಸಲು ಬಹಳ ಸಂತೋಷ ಹೊಂದಿದ್ದೇವೆ” ಎಂದು ಹೇಳಿದರು.
ಅಮೀನಗಢದ ವಿಜಯ್ ಕರದಂಟು ಕುರಿತು
1907ರಲ್ಲಿ ಪ್ರಾರಂಭವಾದ ಅಮೀನಗಢ ವಿಜಯ್ ಕರದಂಟು ಭಾರತದ ಮೊದಲ ಸಾಂಪ್ರದಾಯಿಕ ಕರದಂಟು ತಯಾರಕರು. ತನ್ನ ಅತ್ಯುತ್ತಮ ಮತ್ತು ಆರೋಗ್ಯಕರ ಉತ್ಪನ್ನಗಳ ಬಳಕೆ ಮತ್ತು ಸಾಂಪ್ರದಾಯಿಕ ವಿಧಾನಗಳಿಗೆ ಬದ್ಧತೆಯಿಂದ ಈ ಬ್ರಾಂಡ್ ಕರ್ನಾಟಕದಾದ್ಯಂತ 24 ಮಳಿಗೆಗಳನ್ನು ಹೊಂದಿದೆ ಮತ್ತು ಬೆಂಗಳೂರಿನಲ್ಲಿ ನಾಲ್ಕು ಹೊಂದಿದೆ. ಪ್ರತಿ ಸಿಹಿಯನ್ನೂ ಅತ್ಯಂತ ಎಚ್ಚರಿಕೆಯಿಂದ ತಯಾರಿಸಲಾಗುತ್ತದೆ, ಅದು ತಲೆಮಾರುಗಳ ಕಾಲ ಗ್ರಾಹಕರನ್ನು ಸಂತೃಪ್ತಿಪಡಿಸಿದ ಶ್ರೀಮಂತ ಪರಂಪರೆ ಮತ್ತು ವಿಶ್ವಾಸಾರ್ಹ ರುಚಿಯನ್ನು ಉಳಿಸಿಕೊಂಡು ಬಂದಿದೆ.
ವಿಜಯ್ ಕರದಂಟು ಶಾಖೆ ಉದ್ಘಾಟನೆ ವೇಳೆ ಸಂಸ್ಥೆಯ ಮುಖ್ಯಸ್ಥರು, ಮಾಲಿಕರು, ಸಿಬ್ಬಂದಿ ವರ್ಗ ,ಕುಟುಂಬದವರು, ಬಂದು ಬಳಗ, ಸ್ನೇಹಿತರು, ಹಿತೈಷಿಗಳು ಆಗಮಿಸಿ ಶುಭ ಕೋರಿದರು.