ಬೆಂಗಳೂರು: ಕರ್ನಾಟಕ ಸರ್ಕಾರದ ಅಧೀನದಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಗೆ ಸೇರಿದ 48 ಕೋಟಿ ಹಣ ಭ್ರಷ್ಟಾಚಾರವೆಸಗಿದ್ದು, ವೃತ್ತದಲ್ಲಿ ಭಾಗಿಯಾಗಿರುವ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಡಾಕ್ಟರ್ ಬಿಆರ್ ಅಂಬೇಡ್ಕರ್ ದಲಿತ ಸಂಘಟನೆಗಳ ಒಕ್ಕೂಟದಿಂದ ಆಗ್ರಹ ಮಾಡಲಾಯಿತು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಒಕ್ಕೂಟದ ಸಂಸ್ಥಾಪಕ ರಾಜ್ಯ ಅಧ್ಯಕ್ಷರಾದ ಶ್ರೀಧರ ಕಲಿ ವೀರ ಮಾತನಾಡಿ,ಸದರಿ ಭ್ರಷ್ಟಾಚರ ಹಗರಣವು 2019 -2020ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಗಳಾಗಿದ್ದ ಯಡಿಯೂರುಪ್ಪನವರು ಮತ್ತು ಮಂಡಳಿ ವ್ಯಾಪ್ತಿಗೆ ಸೇರಿದ ಸಹಕಾರ ಇಲಾಖೆಗೆ ಮತ್ತು ಗೃಹ ಇಲಾಖೆಗೆ ಸಚಿವರಾಗಿದ್ದವರು. ಮಾಜಿ ಮುಖ್ಯಮಂತ್ರಿಗಳು ಮತ್ತು ಹಾಲಿ ಹಾವೇರಿ ಲೋಕಸಭಾಕ್ಷೇತದ ಬಿ.ಜೆ.ಪಿ ಸಂಸದರಾದ ಬಸವರಾಜ್ ಬೊಮ್ಮಾಯಿಯವರ ಕಾಲಘಟ್ಟದಲ್ಲಿ ದೊಡ್ಡ ಪ್ರಮಾಣದ ಹಗರಣ ನಡೆದಿದೆ ಎಂದು ಆರೋಪಿಸಿದರು.
ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಅಂದಿನ ಎಂ.ಡಿ. ಆಗಿದ್ದ ಐ.ಎ.ಎಸ್ ಅಧಿಕಾರಿ ಕರೀಗೌಡರವರು ಮಂಡಳಿಗೆ ಸೇರಿದ ಆಂದ್ರಬ್ಯಾಂಕಿನಲ್ಲಿ ಇಟ್ಟಿದ್ದ 100 ಕೋಟಿ ನಿಶ್ಚಿತ ಠೇವಣಿ ಹಣವನ್ನು ಕಾನೂನು ಬಾಹಿರವಾಗಿ ಆಗಿನ ಸಿಂಡಿಕೇಟ್ ಬ್ಯಾಂಕ್ (ಇಂದು ಕೆನರಾ ಬ್ಯಾಂಕ್) ಉತ್ತರಹಳ್ಳಿ ಶಾಖೆಗೆ ವರ್ಗಾಯಿಸುವಂತೆ 18/11/2019ರಂದು ಆದೇಶಿಸಿದ್ದರು.
20/1/2020 ರಂದು ಕರೀಗೌಡರು ಬ್ಯಾಂಕಿನಲ್ಲಿ ಈ ಕುರಿತು ವಿಚಾರಿಸಿದಾಗ ಬ್ಯಾಂಕಿನವರು 100 ಕೋಟಿ ಪೈಕಿ 52 ಕೋಟಿ ನಿಶ್ಚಿತ ಠೇವಣಿ ಸರ್ಟಿಪೀಕೇಟ್ ಅಸಲಿಯಾಗಿದೆ ಯೆಂದು, ಉಳಿದ 48 ಕೋಟಿ ನಿಶ್ಚಿತ ಠೇವಣಿ ಸರ್ಟಿಪಿಕೇಟ್ ನಕಲಿ ಎಂದು ತಿಳಿಸಿರುತ್ತಾರೆ.
22/1/2020 ರಂದು ಮಂಡಳಿಯ ಎಂ.ಡಿ. ಯವರು ಈ ಕುರಿತು ಬ್ಯಾಂಕಿನವರ ವಿರುದ್ಧ ದೂರು ಸಲ್ಲಿಸಿದ ಪರಿಣಾಮ ಎಫ್ ಐ ಆರ್ ಆಗಿದ್ದು ನಂತರ ಅಂದಿನ ಗೃಹಸಚಿವರಾಗಿದ್ದ ಬಸವರಾಜ ಬೋಮ್ಮಾಯಿಯುವರ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗಿತ್ತು. ಇದೀಗ ಚಾರ್ಜ್ ಶೀಟ್ ಆಗಿದ್ದು ಬೆಂಗಳೂರಿನ 65- ಹೆಚ್ಚುವರಿ cmm ಕೋರ್ಟನಲ್ಲಿ ವಿಚಾರಣೆ ಹಂತದಲ್ಲಿದ್ದು, ವಿಚಾರಣೆ ಆಮೆಗತಿಯಲ್ಲಿ ನಡೆಯುತ್ತಿರುವುದು ಹಲವು ಅನುಮಾನಗಳಿಗೆ ರೆಡಿ ಮಾಡಿಕೊಡಲಾಗುತ್ತದೆ ಎಂದು ತಿಳಿಸಿದರು.
ಒಕ್ಕೂಟದ ರಾಜ್ಯ ಅಧ್ಯಕ್ಷರು ಆದ ಗೋವಿಂದರಾಜು ಮಾತನಾಡಿ ರಾಜ್ಯ ಕೃಷಿ ಮಾರಾಟ ಮಂಡಳಿಯಲ್ಲಿ ನಡೆದಿರುವ 48 ಬಹುಕೋಟಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ವಿರುದ್ಧ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಬೇಕು, ಪ್ರಕರಣವನ್ನು ತ್ವರಿತ ನ್ಯಾಯಾಲಯದಲ್ಲಿ ವರ್ಗಾಯಿಸಿ ಪ್ರಕರಣದಲ್ಲಿ ಹೊಣೆಗಾರರಾಗಿರುವ ಅಂದಿನ ಮಂಡಳಿಯ ಎಂ ಡಿ ಆದಂತಹ ಕರಿಗೌಡರನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಎಂದರು.
ಮಂಡಳಿ ನಡೆದಿರುವ 48 ಕೋಟಿ ವ್ಯವಹಾರವನ್ನು ಅದರ ವಸೂಲತಿಗಾಗಿ ಎಲ್ಲಾ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕಾಗಿದೆ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಜರುಗಿರುವ ಭ್ರಷ್ಟಾಚಾರ ಕಿಂತ ಕೃಷಿ ಮಾರಾಟ ಮಂಡಳಿಯಲ್ಲಿ ಅದಕ್ಕಿಂತಲೂ ಹೆಚ್ಚಿನದಾಗಿ ಭ್ರಷ್ಟಾಚಾರ ನಡೆದಿರುವುದು ಬೆಳಕಿಗೆ ಬಂದಿದೆ ಎಂದರು.
ಸಂಘಟನೆಯ ಪ್ರಮುಖ ಹಕ್ಕೋತ್ತಾಯಗಳು:
1) ಪ್ರಕರಣವನ್ನು ಕೂಡಲೇ ತ್ವರಿತ ನ್ಯಾಯಾಲಯ( ಪಾಸ್ಟ್ ಟ್ರಾಕ್)ಕ್ಕೆ ವರ್ಗಾಯಿಸ ಬೇಕು.
2) ಭ್ರಷ್ಟಾಚಾರಕ್ಕೆ ಮುಖ್ಯ ಹೊಣೆಗಾರರಾಗಿರುವ ಸದರಿ ಮಂಡಳಿಯ ಅಂದಿನ ಎಂ.ಡಿ. ಐ ಎ ಎಸ್ ಅಧಿಕಾರಿ ಕರೀಗೌಡರನ್ನು ಬಂಧಿಸಿ ತೀವ್ರ ವಿಚಾರಣೆಗೆ ಗುರಿಪಡಿಸಬೇಕು.
3) ಅಂದಿನ ಸಹಕಾರಿ ಇಲಾಖೆಯ ಸಚಿವರು, ಮತ್ತು ಹಾಲಿ ಹಾವೇರಿ ಲೋಕಸಭಾ ಕ್ಷೇತ್ರದ ಬಿ.ಜೆ.ಪಿ. ಸಂಸದರಾಗಿರುವ ಬಸವರಾಜ ಬೊಮ್ಮಾಯಿಯುವರಿಗೆ ಈ ಹಗರಣದ ನೈತಿಕ ಹೊಣೆ ಇದ್ದು ಅವರನ್ನು ಸಹ ವಿಚಾರಣೆಗೆ ಗುರಿಪಡಿಸಿ ಎಲ್ಲ ತಪ್ಪಿಸ್ಥರಿಗೆ ಶಿಕ್ಷೆ ವಿಧಿಸಬೇಕು.
4) 48 ಕೋಟಿ ಸರ್ಕಾರದ ಹಣ ವಸೂಲಾತಿಗಾಗಿ ಎಲ್ಲಾ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು.
5) ಪ್ರಸ್ತುತ ಸರ್ಕಾರದ ಅವಧಿಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಜರುಗಿರುವ ಭ್ರಷ್ಟಾಚಾರ ಹಗರಣದ ಕುರಿತು ಪೊಲೀಸ್ ಇಲಾಖೆ ಮತ್ತು ಸರ್ಕಾರದ ಕ್ರಮಗಳನ್ನು ತ್ವರಿತಗೊಳಿಸಿ ವಿಧಿಸುವಂತೆ ಆಗ್ರಹಿಸುತ್ತೇವೆ. ಎಲ್ಲ ಅಪರಾಧಿಗಳಿಗೆ ಕಠಿಣಶಿಕ್ಷೆ
6) 2013ರಲ್ಲಿ ಹೊರಡಿಸಲಾಗಿರುವ ಸರ್ಕಾರಿ ಆದೇಶದಂತೆ ನಿಗಮ ಮತ್ತು ಮಂಡಳಿಗಳ ಠೇವಣಿಗಳನ್ನು ಸರ್ಕಾರದ ಖಜಾನೆಯಲ್ಲಿ ಮಾತ್ರ ಇಡಬೇಕು.