ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಯಾವುದಾದರೂ ಒಂದು ಕಡೆ ಸಂವಿಧಾನ ಶಿಲ್ಪಿ ಡಾ.ಬಾಬ ಸಾಹೇಬ್ ಅಂಬೇಡ್ಕರ್ ಅವರ 150 ಅಡಿ ಎತ್ತರದ ಪುತ್ಥಳಿಯನ್ನು ರಾಜ್ಯ ಸರ್ಕಾರ ನಿರ್ಮಾಣ ಮಾಡಬೇಕೆಂದು ಆನೇಕಲ್ ಡಾ. ಬಿ ಆರ್ ಅಂಬೇಡ್ಕರ್ ಯುವಕರ ಸಂಘದ ಸಂಸ್ಥಾಪಕ ಅಧ್ಯಕ್ಷ ಮರಸೂರು ಡಾ.ಎಂ ಕೃಷ್ಣಪ್ಪ ಮನವಿ ಮಾಡಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ಅಸ್ಪೃಷ್ಯತೆ, ಅಸಮಾನತೆ, ದೀನ ದಲಿತ,ಮೇಲ್ಜಾತಿ,ಕೀಳರಿಮೆ, ಓಡಿಯ ದೌರ್ಜನ್ಯ ದಬ್ಬಾಳಿಕೆಯ ವಿರುದ್ಧ ಹೋರಾಡಿದ್ದ ದೀಮಂತ. ಈ ಮೂಲಕ ಭಾರತದ ಗೌರವವನ್ನು ಎತ್ತರಿಸಿದ ಅಂಬೇಡ್ಕರ್ ಅವರಿಗೆ ಸಲ್ಲಬೇಕು. ಇಂತಹ ನಾಯಕನಿಗೆ ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದ ನಿವೇಶನದಲ್ಲಿ ತೆಲಂಗಾಣ ಮಾದರಿಯಲ್ಲಿ ನಿರ್ಮಾಣವಾಗಿರುವ ಹಾಗೆ ಅಂಬೇಡ್ಕರ ಅವರ 150 ಅಡಿ ಬೃಹತ್ ಪ್ರತಿಮೆ ನಿರ್ಮಾಣವಾಗಬೇಕು ಎಂದು ಸರ್ಕಾರಕ್ಕೆ ಆಗ್ರಹ ಮಾಡಿದರು.
ತೆಲಂಗಾಣ ಮಾದರಿಯಲ್ಲಿ ಅಂಬೇಡ್ಕರ್ ಪುತ್ತಳಿ
ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಅಗಾಧವಾದ ಸಾಧನೆಯನ್ನು ಗುರುತಿಸಿ ತೆಲಂಗಾಣದಲ್ಲಿ 120 ಅಡಿ ಎತ್ತರದ ಬೃಹತ್ ಪ್ರತಿಮೆ ನಿರ್ಮಾಣ ಮಾಡಲಾಗಿದೆ ಇದು ಭಾರತೀಯರೆಲ್ಲರೂ ಎಮ್ಮೆ ಪಡುವ ವಿಚಾರವಾಗಿದ್ದು ಬೆಂಗಳೂರಿನಿಂದ ಲೂ ಎತ್ತರದ ಪ್ರತಿಮೆ ನಿರ್ಮಿಸಬೇಕು ಎಂದು ಸಂಘಟನೆಯಿಂದ ಪ್ರತಿ ಸರ್ಕಾರಕ್ಕೆ ಅಗ್ರಹಾರ ಮಾಡಿದರು.
ಸಂಘಟನೆಯ ಮಹಿಳಾ ಘಟಕದ ರಾಜ್ಯ ಅಧ್ಯಕ್ಷರಾದ ಬೊಮ್ಮಸಂದ್ರ ರೇಣುಕಾ ಅವರು ಮಾತನಾಡಿ, ಅಂಬೇಡ್ಕರ್ ಅವರ ಪುತ್ತಳಿ ಅನಾವರಣವು ಯಾವುದೇ ರಾಜಕೀಯ ದುರುದ್ದೇಶವಿಲ್ಲದೆ ಹಾಗೂ ಯಾವುದೇ ಜಾತಿ ಭೇದಭಾವವಿಲ್ಲದೆ ಸಮಾನತೆಗಾಗಿ ಎಲ್ಲರಿಗೂ ಸೇರುವಂತಹ ಪುತ್ತಳಿ ಇದಾಗಿರಬೇಕು ಎಂದರೆ, ಎಲ್ಲಾ ಸಮುದಾಯದ ಜನರಿಗೂ ಸಹ ಇದರ ಬಗ್ಗೆ ಗೌರವವಿದೆ ಅದೇ ರೀತಿ ಸಮಾಜದ ಒಳಿತಿಗಾಗಿ ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣ ಮಾಡಬೇಕು,ಇದರಿಂದ ರಾಜ್ಯದ ಘನತೆ ಮತ್ತಷ್ಟು ಹೆಚ್ಚಿಸುತ್ತದೆ ಎಂದರು.
ಇನ್ನು ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಮಣಿಗಾನಹಳ್ಳಿ ಶ್ರೀನಿವಾಸ್ ,ರಾಜ್ಯ ಪ್ರಧಾನ ಕಾರ್ಯದರ್ಶಿ, ಉದಯ ಕವಿ, ರಾಜ್ಯ ಕಾರ್ಯದರ್ಶಿಗಳಾದ ರವಿಚಂದ್ರನ್, ಮೀಸೆ ರಾಮಣ್ಣ ಹಾಗೂ ಕನ್ನಡ ಅಧ್ಯಕ್ಷ ಪಿ ಮಂಜುನಾಥ, ಬಿಜೆಪಿ ಮುಖಂಡ ಕೊಪ್ಪ ಮುನಿರಾಜಣ್ಣ,ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಶೇಕ್ ರಿಜ್ವಾನ್ ಸೇರಿದಂತೆ ಸಮಿತಿಯ ಅನೇಕ ಸದಸ್ಯರು ಉಪಸ್ಥಿತರಿದ್ದರು.