
ಇಂದು ಲಾಲ್ ಬಾಗ್ನ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಲಾಲ್ಬಾಗ್ ಉದ್ಯಾನವನದಲ್ಲಿ ಸಸ್ಯ ಸಂಪತ್ತು ಸಮೃದ್ಧವಾಗಿದ್ದು ಮರಗಳ ಹೆಸರು, ಯಾವ ಕುಟುಂಬಕ್ಕೆ ಸೇರಿರುತ್ತದೆ, ವೈವಿಧ್ಯತೆ ಕುರಿತ ವಿವಿಧ ಮಾಹಿತಿ ಸಾರ್ವಜನಿಕರಿಗೆ ತಿಳಿಯುವುದು ಕಷ್ಟವಾಗಿತ್ತು. ಆದ್ದರಿಂದ ಆಯ್ದ ಸಸ್ಯ ಪ್ರಭೇದದ ಮರಗಳಿಗೆ ಕ್ಯೂರ್ ಕೋಡ್ ಅಳವಡಿಸಲಾಗಿದೆ ಎಂದು ತಿಳಿಸಿದರು.
ಇಂದಿನ ಕಾರ್ಯಕ್ರಮದಲ್ಲಿ ಲಾಲ್ ಬಾಗ್ ಸಸ್ಯತೋಟದ ಸುತ್ತಲಿನ ಕಾಂಪೌಂಡ್ ಗೋಡೆಯ ಒಳಭಾಗದ ಉದ್ದಕ್ಕೂ ಅಪರೂಪದ ಸ್ಥಳೀಯ ಸಸ್ಯ ಪ್ರಭೇದಗಳನ್ನು ನೆಡುವ ಕಾರ್ಯಕ್ರಮ, ಲಾಲ್ ಬಾಗ್ನ ಸಸ್ಯತೋಟದ ಆಯ್ದ ಸಸ್ಯ ಪ್ರಭೇದದ ಮರಗಳಿಗೆ ಸಸ್ಯ ಶಾಸ್ತ್ರೀಯ ವಿವರಗಳನ್ನು ಒದಗಿಸಬಲ್ಲ ಕ್ಯೂಆರ್ ಕೋಡ್ ಅಳವಡಿಕೆ, ಲಾಲ್ಬಾಗ್ಗೆ ಪ್ರಪ್ರಥಮ ಬಾರಿಗೆ ಬೈಸಿಕಲ್/ಟ್ರ್ರೈಸಿಕಲ್ಗಳ ಪರಿಚಯ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ಲಾಲ್ ಬಾಗ್ನ ಸಸ್ಯತೋಟದಲ್ಲಿ 2800ಕ್ಕೂ ಹೆಚ್ಚು ದೇಶ, ವಿದೇಶಗಳ ಅಮೂಲ್ಯ ಸಸ್ಯ ಸಂಗ್ರಹವಿದೆ. ವಿದ್ಯಾರ್ಥಿಗಳು, ಸಸ್ಯಶಾಸ್ತ್ರೀಯ ಆಸಕ್ತರು, ಪರಿಸರ ಪ್ರಿಯರು, ಸಂಶೋಧಕರು ಹಾಗೂ ಸಾಮಾನ್ಯರಿಗೆ ವೈವಿಧ್ಯಮಯ ಸಸ್ಯ ಪ್ರಭೇದಗಳ ಬಗ್ಗೆ ಅಭ್ಯಸಿಸಲು ಲಾಲ್ ಒಂದು ವೈಜ್ಞಾನಿಕ ವೇದಿಕೆಯಾಗಿದೆ.

ಲಾಲ್ ಬಾಗ್ನಲ್ಲಿ ಪ್ರಪ್ರಥಮ ಬಾರಿಗೆ ಬೈಸಿಕಲ್/ಟ್ರೈಸಿಕಲ್ಗಳ ಪರಿಚಯ:
ಹಾಲೆಂಡ್, ಜರ್ಮನಿ ಇತ್ಯಾದಿ ಪಾಶ್ಚಿಮಾತ್ಯ ದೇಶಗಳಲ್ಲಿ ವಿಫುಲವಾಗಿ ಸಾರ್ವಜನಿಕ ಬಳಕೆಯಲ್ಲಿರುವ ಎಲೆಕ್ಟ್ರಿಕ್ ಟ್ರೈಸೈಕಲ್ಲುಗಳನ್ನು ಇನ್ನು ಮುಂದೆ ಲಾಲ್ ಬಾಗ್ ಶಾಸ್ತ್ರೀಯ ತೋಟದಲ್ಲಿ ಆಸಕ್ತರು ಬಳಸುವ ಸುವರ್ಣ ಅವಕಾಶವನ್ನು ಕಲ್ಪಿಸಲಾಗಿದೆ. ಟ್ರೈಸಿಕಲ್ಲುಗಳು ಸ್ವತಂತ್ರವಾಗಿ ಚಲಿಸುವುದರೊಂದಿಗೆ ಆಹ್ಲಾದಕರವಾದ ಅನುಭವವನ್ನು ನೀಡುತ್ತದೆ. ಫೆಚ್ಮೊಬಿಲಿಟಿ ಸಂಸ್ಥೆ ವತಿಯಿಂದ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಟ್ರೈಕ್ಗಳು ಮತ್ತು ಸ್ಕೂಟರ್ಗಳನ್ನು ಸಾರ್ವಜನಿಕ ಬಳಕೆಗೆ ಪರಿಚಯಿಸಿದ್ದಾರೆ. 3 ತಿಂಗಳ ಕಾಲ ಪ್ರಾಯೋಗಿಕವಾಗಿ ಟ್ರೈಸೈಕಲ್ಲುಗಳನ್ನು ಚಾಲನೆ ಮಾಡಲಾಗುತ್ತಿದೆ. ಸಾರ್ವಜನಿಕರ ಬಳಕೆಗೆ ಮತ್ತು ಪ್ರತಿಕ್ರಿಯೆಗೆ ಅನುಗುಣವಾಗಿ ಟ್ರೈಸೈಕಲ್ಲುಗಳ ಶಾಶ್ವತ ಚಾಲನೆಗೆ ಚಿಂತಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತೋಟಗಾರಿಕೆ ನಿರ್ದೇಶಕ ಡಿ.ಎಸ್ ರಮೇಶ್, ಅಪರ ನಿರ್ದೇಶಕ ಪಿ.ಎಂ. ಸೊಬರದ, ಜಂಟಿ ನಿರ್ದೇಶಕರುಗಳಾದ ಎಂ.ಜಗದೀಶ್, ಧನರಾಜ್, ಪ್ರಸಾದ, ಡಾ.ನಂದ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.Dr. ಶಾಮ್ಲ ಇಕ್ಬಾಲ್,IAS ಸರ್ಕಾರದ ಕಾರ್ಯದರ್ಶಿಗಳು,ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ D S ರಮೇಶ್, IAS ತೋಟಗಾರಿಕೆ ನಿರ್ದೇಶಕರು, Dr. ಜಗದೀಶ್, M ತೋಟಗಾರಿಕೆ ಜಂಟಿ ನಿರ್ದೇಶಕರು, ಬಾಲಕೃಷ್ಣ H T ತೋಟಗಾರಿಕೆ ಉಪನಿರ್ದೇಶಕರು lalbagh ಸಸ್ಯತೋಟ ಹಾಗೂ ಇತರೆ ಇಲಾಖೆ ಹಿರಿಯ ಮತ್ತು ಕಿರಿಯ ಅಧಿಕಾರಿಗಳು, ಸಾರ್ವಜನಿಕರು ಮಾಧ್ಯಮ ಮಿತ್ರರು ಉಪಸ್ಥಿತರಿದ್ದರು.