ಬೆಂಗಳೂರು:ವಿಶ್ವ ಕರ್ಮ ಸಮಾಜಕ್ಕೆ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ನ್ಯಾಯ ಕೋಡಿಸುವಲ್ಲಿ ನ್ಯಾಯಯುತವಾದ ಪ್ರಯತ್ನಗಳು ಯಾವ ಸರ್ಕಾರಗಳೂ ಮಾಡಲೇ ಇಲ್ಲ, ಹೀಗಾಗಿ ವಿಶ್ವಕರ್ಮ ಸಮಾಜದ ಸ್ವಾಮೀಜಿಗಳು ಹಾಗೂ ಮುಖಂಡರಿಂದ ಫ್ರೀಡಂಪಾರ್ಕ್ನಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಮಾಜದ ಆದಿಲಕ್ಷ್ಮೀ ವಿಶ್ವ ಕರ್ಮ ಮಠದ ಗೌರವ ಅಧ್ಯಕ್ಷರಾದ ಶ್ರೀ ನೀಲಕ ನೀಲ ಕಂಠಾಚರ್ಯ ಸ್ವಾಮೀಜಿ ತಿಳಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ 45 ಲಕ್ಷ ಜನಸಂಖ್ಯೆಯಷ್ಟು ವಿಶ್ವಕರ್ಮ ಸಮಾಜ ಇದೆ. ಈ ಹಿಂದಿನಿಂದಲೂ ನಮ್ಮನ್ನು ಸರಕಾರಗಳು ನಮ್ಮ ಸಮಾಜಕ್ಕೆ ಆರ್ಥಿಕವಾಗಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ನ್ಯಾಯ ಕೋಡಿಸುವಲ್ಲಿ ನ್ಯಾಯಯುತವಾದ ಪ್ರಯತ್ನ ಮಾಡಲೇ ಇಲ್ಲ. ಕಳೆದ ಹತ್ತಾರು ವರ್ಷಗಳಿಂದಲೂ ನಮ್ಮ ಸಮಾಜದ ಹಲವಾರು ಸಂಘಟನೆಗಳು ಹೋರಾಟ ಮಾಡುತ್ತಲೇ ಬಂದಿದ್ದರೂ ಸಹ ಸರ್ಕಾರಗಳು ನಮ್ಮನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ.
ಈ ಹಿಂದಿನ ಸರ್ಕಾರಗಳ ರೀತಿ ಪ್ರಸ್ತುತ ಸರ್ಕಾರವು ಸಹಾ ನಮ್ಮನ್ನು ನಿರ್ಲಕ್ಷಿಸುತ್ತಿರುವುದು ನಮಗೆ ಅತಿಯಾದ ನೋವುಂಟು ಮಾಡಿರುತ್ತದೆ. ಹಿಂದುಳಿದ ವರ್ಗದಲ್ಲಿ ನಾವು ಹುಟ್ಟಿರುವುದೇ ನಮಗೆ ಶಾಪವಾಗಿದೆ ಎಂದು ಭಾಸವಾಗುತ್ತಿದೆ. ಜಾತಿ ಧರ್ಮ ನೋಡದೆ ಎಲ್ಲರಿಗೂ ನಮ್ಮ ಪಂಚ ಕಸುಬುಗಳ ಮೂಲಕ ಸೇವೆ ಸಲ್ಲಿಸುವ ನಾವುಗಳು ಹಲವಾರು ದೇವಾಲಯಗಳನ್ನು ಕಟ್ಟಿಕೊಡುವ ಮೂಲಕ ದೇಶದ ಸಂಸ್ಕೃತಿಗೆ ಅಪಾರ ಕೊಡುಗೆಗಳನ್ನು ಕೊಟ್ಟಿರುವ ನಾವುಗಳು ವೇದಿಕೆಗಳಲ್ಲಿ ಹೊಗಳಿಕೆಗಳಿಗಷ್ಟೇ ಸೀಮಿತವಾಗಿದ್ದೇವೆ. ಯಾವ ಸರ್ಕಾರವು ನಮ್ಮನ್ನು ಮೇಲೆತ್ತುವ ಕೆಲಸವನ್ನು ಮಾಡುತ್ತಿಲ್ಲ ಎಂದು ಸಮಾಧಾನ ತೋಡಿಕೊಂಡರು.
ಸಮಾಜದ ರಾಜ್ಯಾಧ್ಯಕ್ಷ ಮಳವಳ್ಳಿ ಶ್ರೀನಿವಾಸ್ ಮಾತನಾಡಿ,ಫೆ.6ರಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರನ್ನು ಸಮಾಜದ ಸ್ವಾಮೀಜಿಗಳು ಹಾಗೂ ಮುಖಂಡರುಗಳ ನಿಯೋಗ ಸಮಾಜದ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸಣ್ಣಪುಟ್ಟ ಬೇಡಿಕೆಗಳನ್ನು ಸಲ್ಲಿಸಿದ್ದೆವು.ಅವುಗಳಲ್ಲಿ ಪ್ರಮುಖವಾಗಿ ವಿಶ್ವಕರ್ಮ ಅಭಿವೃದ್ಧಿ ನಿಗಮದ ಬಾಕಿ ಇರುವ ಸಾಲವನ್ನು ಮನ್ನಾ ಮಾಡುವುದು, ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ರೂಗಳ ಅನುದಾನವನ್ನು ನೀಡುವುದು, ಎಲ್ಲಾ ಸಾಧಕರ ಮಹನೀಯರ ಪ್ರತಿಮೆಗಳು ವಿಧಾನಸೌಧದ ಆವರಣದಲ್ಲಿರುವಂತೆ ಶಿಲ್ಪಕಲೆಯ ಮೂಲಕ ನಾಡಿಗೆ ದೇಶಕ್ಕೆ ಅಪಾರ ಕೀರ್ತಿ ತರುವಂತಹ ಅಮರಶಿಲ್ಪಿ ಜಕಣಾಚಾರಿ ರವರ ಪ್ರತಿಮೆ ಸ್ಥಾಪನೆ ಮಾಡುವುದು ಬೇಡಿಕೆಯಾಗಿದೆ.
ರಾಜ್ಯದಲ್ಲಿರುವ ವಿಶ್ವಕರ್ಮ ಬಡಮಕ್ಕಳಿಗೆ ಉತ್ತರ ಮತ್ತು ದಕ್ಷಿಣ ಕರ್ನಾಟಕದಲ್ಲಿ ವಿಶ್ವಕರ್ಮ ವಸತಿ ಶಾಲೆ ಸ್ಥಾಪಿಸಿಕೊಡುವುದು, ಹೀಗೆ ಒಟ್ಟು 12 ಬೇಡಿಕೆಗಳನ್ನು ಬಜೆಟ್ನಲ್ಲಿ ಘೋಷಣೆ ಮಾಡಿಕೊಡುವಂತೆ ಮನವಿ ಮಾಡಿದರೂ ಇವುಗಳಲ್ಲಿ ಒಂದನ್ನಾದರೂ ಮುಖ್ಯಮಂತ್ರಿಗಳು ಈಡೇರಿಸಿಕೊಟ್ಟಿಲ್ಲ.
ಸಮಾಜದ ಬಂಧುಗಳಿಗೆ ನ್ಯಾಯ ಒದಗಿಸಲು ಸ್ವಾಮೀಜಿಗಳು ಮತ್ತು ಮುಖಂಡರುಗಳ ತೀರ್ಮಾನದಂತೆ ಈ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಸಮಾಜದ ಸರ್ವ ಸ್ವಾಮಿಜಿಗಳ ನಿಯೋಗ ಮತ್ತು ಸಮಾಜದ ಮುಖಂಡರುಗಳೆಲ್ಲರೂ ಸೇರಿಕೊಂಡು ಮಾರ್ಚ್ 4 ರಂದು ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಅನಿರ್ಧಿಷ್ಟಾವಧಿ ಧರಣಿಯನ್ನು ಮಾಡುವುದಾಗಿ ತಿಳಿಸಿದರು. ಒಂದು ವೇಳೆ ಸರ್ಕಾರವು ಪುನಃ ನಮ್ಮನ್ನು ನಿರ್ಲಕ್ಷಿಸಿದರೆ ಹೋರಾಟವನ್ನು ರಾಜ್ಯಾಧ್ಯಂತ ವಿಸ್ತರಿಸುವಂತೆ ನಮ್ಮ ಸಮಾಜಕ್ಕೆ ಕರೆಕೊಟ್ಟು ಬೀದಿಗಿಳಿದು ನಮ್ಮ ಹಕ್ಕಿಗಾಗಿ ನಾವು ಹೋರಾಟವನ್ನು ತೀವ್ರಗೊಳಿಸಲು ತೀರ್ಮಾನಿಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯನ್ನು ನೀಡಿದರು.
ಸಮಾಜದ ರಾಜ್ಯ ಉಪಾಧ್ಯಕ್ಷ ಟಿಕೆ ಪುರುಶೋತ್ತಮ್, ಗುರು ವಿಶ್ವ ಕರ್ಮ, ರಾ.ಮ ಉಪಾಧ್ಯಕ್ಷರಾದ ಆಶಾ ಉಮೇಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.