ಬೆಂಗಳೂರು: ದಕ್ಷಿಣ ವಲಯ ವ್ಯಾಪ್ತಿಯಲ್ಲಿ ನಾಳೆ 6 ಕಡೆ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಚರಣೆ ನಡೆಸಲಾಗುವುದೆಂದು ದಕ್ಷಿಣ ವಲಯ ಆಯುಕ್ತರಾದ ದಿಗ್ವಿಜಯ್ ಬೋಡ್ಕೆ ರವರು ತಿಳಿಸಿದ್ದಾರೆ.
ಮಾನ್ಯ ಮುಖ್ಯ ಆಯುಕ್ತರ ನಿರ್ದೇಶನದಂತೆ ಪ್ರತಿ ತಿಂಗಳ 1ನೇ ಮತ್ತು 3ನೇ ಶನಿವಾರ ಹಾಗೂ 2ನೇ ಮತ್ತು 4ನೇ ಶುಕ್ರವಾರದಂದು ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಿರಂತರವಾಗಿ ನಡೆಸಲಾಗುವುದು.
ಅದರಂತೆ 11ನೇ ಜುಲೈ 2025 ರಂದು ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಚರಣೆ ಕೈಗೊಳ್ಳಲಿರುವ ಸ್ಥಳಗಳು ಈ ಕೆಳಕಂಡಂತಿವೆ.
*1. ಬಸವನಗುಡಿ ವಿಭಾಗ:* ಕೆ.ಆರ್. ರಸ್ತೆಯಿಂದ ಈಸ್ಟ್ ಆಂಜನೇಯ ರಸ್ತೆಯವರೆಗೆ
*2. ಬಿ.ಟಿ.ಎಂ ಲೇಔಟ್ ವಿಭಾಗ:* ಲಸ್ಕರ್ ಹೊಸೂರು ರಸ್ತೆ 20ನೇ ಮುಖ್ಯರಸ್ತೆಯ ಪೋರಂ ಮಾಲ್ನಿಂದ 80 ಅಡಿ ರಸ್ತೆಯ ಒಳಾಂಗಣ ಕ್ರೀಡಾಂಗಣದವರೆಗೆ.
*3. ಚಿಕ್ಕಪೇಟೆ ವಿಭಾಗ:* ಕನಕನಪಾಳ್ಯ ಜಯನಗರ 8ನೇ ಮುಖ್ಯರಸ್ತೆಯಿಂದ ಪಟ್ಟಾಲಮ್ಮ ಮುಖ್ಯರಸ್ತೆಯವರೆಗೆ
*4. ಜಯನಗರ ವಿಭಾಗ:*
4ನೇ ‘ಟಿ’ ಬ್ಲಾಕ್ ಜಯನಗರ 32ನೇ ‘ಇ’ ಅಡ್ಡರಸ್ತೆಯಿಂದ ಮಾರೇನಹಳ್ಳಿ ರಸ್ತೆ (ಮೆಟ್ರೋ ರಸ್ತೆ)
*5. ಪದ್ಮನಾಭನಗರ ವಿಭಾಗ:* ಕದಿರೇನಹಳ್ಳಿ ಕೆಳಸೇತುವೆಯಿಂದ ಕತ್ತರಿಗುಪ್ಪೆ ಸಿಂಗ್ನಲ್ವರೆಗೆ
*6. ವಿಜಯನಗರ ವಿಭಾಗ:* ಕಾರ್ಡ್ ರಸ್ತೆಯ ಅತ್ತಿಗುಪ್ಪೆ ಪೆಟ್ರೋಲ್ ಬಂಕ್ನಿಂದ ಸ್ಕೈಲೇನ್ ಆರ್ಪಾಟ್ಮೆಂಟ್ವರೆಗೆ
ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿರುವ ಅಂಗಡಿ ಮುಂಗಟ್ಟುಗಳು, ಬೀದಿ ಬದಿ ವ್ಯಾಪಾರಿಗಳು ಹಾಗೂ ಇನ್ನಿತರ ಅನಧಿಕೃತ ಪಾದಚಾರಿ ಮಾರ್ಗ ಒತ್ತುವರಿದಾರರು ಅತಿಕ್ರಮಿಸಿರುವ ಪಾದಚಾರಿ ಮಾರ್ಗವನ್ನು ಸ್ವಯಂ ಪ್ರೇರಿತರಾಗಿ ತೆರವುಗೊಳಿಸಲು ಈ ಮೂಲಕ ತಿಳಿಯಪಡಿಸಿದೆ.