ಬೆಂಗಳೂರು: ಗಾಂಧಿನಗರ ವಿಧಾನಸಭಾ ಕ್ಷೇತ್ರದ ಕಾಟನ್ ಪೇಟೆಯಲ್ಲಿ ಸಾರ್ವಜನಿಕರಿಗೆ ಗಣೇಶ ಹಬ್ಬದ ಪ್ರಯುಕ್ತ 3000ಸಾವಿರ ಗೌರಿ, ಗಣೇಶಮೂರ್ತಿಗಳ ವಿತರಣೆ ಮತ್ತು ಮಹಿಳೆಯರಿಗೆ ಬಾಗಿನ ವಿತರಣೆ ಮಾಡಿದರು. ನಾವೆಲ್ಲರೂ ಪರಿಸರ ರಕ್ಷಣೆ ಮಾಡುವ ಮೂಲಕ ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಣೆ ಮಾಡಬೇಕು ಎಂದು ಸಚಿವ ಗುಂಡೂರಾವ್ ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ರವರು ಮತ್ತು ಕಾಟನ್ ಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀನಿವಾಸಮೂರ್ತಿರವರು ಸಾರ್ವಜನಿಕರಿಗೆ ಗಣೇಶ ಮೂರ್ತಿಗಳನ್ನು ವಿತರಿಸಿದರು.
ಸಚಿವರಾದ ದಿನೇಶ್ ಗುಂಡೂರಾವ್ ರವರು ಮಾತನಾಡಿ, ನಾಡಿನ ಜನತೆಗೆ ವಿಘ್ನಗಳ ನಿವಾರಣೆಯಾಗಲಿ, ಸುಖ, ಶಾಂತಿ ಮತ್ತು ನೆಮ್ಮದ್ದಿ ಲಭಿಸಲಿ. ಪರಿಸರ ಸ್ಮೇಹಿ ಗಣೇಶ ಹಬ್ಬ ಅಚರಣೆ ಮಾಡಬೇಕು, ಪರಿಸರ ಸಂರಕ್ಷಣೆ ಮಾಡುವುದು ಅಷ್ಟೆ ಮುಖ್ಯ.ಜನರು ಸಹಕಾರದಿಂದ ಮಾತ್ರ ಪಿ.ಓ.ಪಿ.ಗಣೇಶ ಮೂರ್ತಿ ಪ್ರತಿಷ್ಠಾಪನೆ ನಿಲ್ಲುವುದು.ಪರಿಸರ ಉಳಿಯಬೇಕು ಎಂದರೆ ಎಲ್ಲರು ಮಣ್ಣಿನ ಗಣೇಶ ಪ್ರತಿಷ್ಟಾಪನೆ ಮಾಡುವ ಮೂಲಕ ಗಣೇಶ ಹಬ್ಬ ಅಚರಣೆ ಮಾಡೋಣ.ನಾಡಿನಲ್ಲಿ ಉತ್ತಮ ಮಳೆಯಾಗಿದೆ ಮತ್ತು ರಾಜ್ಯದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮಹತ್ವಪೂರ್ಣ ಕ್ರಾಂತಿ ತರಲಾಗಿದೆ ಎಂದು ಹೇಳಿದರು.
ಶ್ರೀನಿವಾಸಮೂರ್ತಿರವರು ಮಾತನಾಡಿ ಸಚಿವರಾದ ದಿನೇಶ್ ಗುಂಡೂರಾವ್ ರವರ ನೇತೃತ್ವದಲ್ಲಿ ಕಾಟನ್ ಪೇಟೆ ಬ್ಲಾಕ್ ನಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಮಾಡಲಾಗಿದೆ.ರಾಜ್ಯ ಸರ್ಕಾರದ ಜನಪ್ರಿಯ ಯೋಜನೆ 5ಗ್ಯಾರಂಟಿ ಯೋಜನೆಯನ್ನು ಕಾಟನ್ ಪೇಟೆ ಬ್ಲಾಕ್ ನಲ್ಲಿ ಪ್ರತಿ ಮನೆಗಳಿಗೆ ತಲುಪಿಸಲಾಗಿದೆ.
ಸಾರ್ವಜನಿಕರು ತಮ್ಮ ಮನೆಗಳಲ್ಲಿ ಅದ್ದೂರಿಯಾಗಿ ಅಚರಿಸಲು ಎಂದು 3000ಸಾವಿರ ಗಣೇಶಮೂರ್ತಿಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಮತ್ತು ಮಹಿಳೆಯರಿಗೆ ಬಾಗಿನ ನೀಡಲಾಗುತ್ತಿದೆ ಎಂದು ಹೇಳಿದರು.
ಗಾಂಧಿನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಜೆ.ಸರವಣನ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಶಶಿ ಮತ್ತು ಸ್ಥಳೀಯ ಕಾರ್ಯಕರ್ತರು ಭಾಗವಹಿಸಿದ್ದರು.