ಬೆಂಗಳೂರು: ನಗರದ ಗರುಡ ಮಾಲ್ ನಲ್ಲಿ ಬೇಸಿಗೆ ಮಾವು ಮೇಳ ಹಾಗೂ ಪುಸ್ತಕೋತ್ಸವಕ್ಕೆ ನಟ ಡಾಲಿ ಧನಂಜಯ ಹಾಗೂ ಶಾಸಕ ಉದಯ್ ಗರುಡಾಚಾರ್ ಚಾಲನೆ ನೀಡಿದರು.
ನಂತರ ನಟ ಡಾಲಿ ಧನಂಜಯ್ ಮಾತನಾಡಿ ಮಕ್ಕಳಿಂದ ಹಿರಿಯರಿಗೆ ಅಕ್ಷರ ಜ್ಞಾನ ಸಂಪಾದನೆಗೆ ಒಂದು ಲಕ್ಷ ಉತ್ಸವಗಳು ಇಲ್ಲಿ ಲಭ್ಯವಿದೆ ನೇರವಾಗಿ ಮಾವಿನಹಣ್ಣು ಮಾರಾಟ ಮತ್ತು ಪ್ರದರ್ಶನಕ್ಕೆ ರೈತರಿಗೆ ಉತ್ತಮ ವೇದಿಕೆ ಕಲ್ಪಿಸಲಾಗಿದೆ ಇದರಲ್ಲಿ ಯಾವುದೇ ಮುದ್ದಿವರ್ತಿಗಳು ಭಾಗಿಯಾಗುವುದಿಲ್ಲ ರೈತರೇ ನೇರವಾಗಿ ತೋಟದಿಂದ ತಂದು ಮಾರಾಟ ಮಾಡಲಾಗುತ್ತದೆ ಎಂದರು.
ಮಾವಿನ ಹಣ್ಣು ಮಾರಾಟ ಮತ್ತು ಪ್ರದರ್ಶನಕ್ಕೆ ರೈತರಿಗೆ ಉತ್ತಮ ವ್ಯಕ್ತಿ ಕಲ್ಪಿಸಲಾಗಿದೆ ಕನ್ನಡ ನಾಡು ದೇಶಕ್ಕಾಗಿ ಪ್ರತಿಯೊಬ್ಬರೂ ಗಟ್ಟಿಯಾಗಿ ನಿಲ್ಲಬೇಕು ಎಂದು ಹೇಳಿದರು.
ಸಡಕ ಉದಯ್ ಗರುಡಾಚಾರ್ ಮಾತನಾಡಿ, ದೇಶದಲ್ಲಿ ರೈತ ಮತ್ತು ಸೈನಿಕ ಎರಡು ಕಣ್ಣು ಇದ್ದಂತೆ ನಮ್ಮ ಮಾವಿನ ಮೇಳದಿಂದ ರೈತರಿಗೆ ಉತ್ತಮ ಬೆಂಬಲ ಬೆಲೆ ಸಿಗಲಿದೆ ಸಾರ್ವಜನಿಕರಿಗೆ ಉತ್ತಮ ಮಾವಿನಹಣ್ಣು ಗುಣಮಟ್ಟದ ಮಾವಿನಹಣ್ಣು ಸವಿಯುವ ಅವಕಾಶ ಇಲ್ಲಿ ಮಾಡಿಕೊಡಲಾಗಿದೆ ಅಕ್ಷರ ಜ್ಞಾನ ಯಾವತ್ತು ಕಡಿಮೆಯಾಗಬಾರದು. ಪತಿದಿನ ಪುಸ್ತಕ ಓದುವುದರಿಂದ ಜ್ಞಾನ ಸಂಪಾದನೆ ಹೆಚ್ಚಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕಿವಿಮಾತು ಹೇಳಿದರು.
ಇನ್ನು ರೈತರಿಂದ ನೇರವಾಗಿ ಗುಣಮಟ್ಟದ ಮಾವುಗಳನ್ನು ಖರೀದಿಸಲು ಉಜ್ವಲ ಅವಕಾಶ ಕಲ್ಪಿಸಲಾಗಿದೆ ಮಾವು ಮೇಡಂ 8 ರಿಂದ 11ರವರೆಗೆ ಹಾಗೂ ಪುಸ್ತಕ ಮೇಳವು ಮೇಂಟರಿಂದ 18ರವರೆಗೆ ಇರಲಿದೆ ಎಂದು ಆಯೋಜಕರಾದ ವಾಸವಿ ಕಾಂಡಿಮೆಂಟ್ ನ ಮಾಲೀಕರಾದ ಸ್ವಾತಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಹೋರಾಟಗಾರರಾದ ಶಿವಕುಮಾರ್ ಸೇರಿದಂತೆ ಅನೇಕ ಸಾರ್ವಜನಿಕರು ಕನ್ನಡ ಪರ ಹೋರಾಟಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.