ಬೆಂಗಳೂರು: ಬೆಂಗಳೂರಿನ ಆರೋಗ್ಯಸೇವೆ ವಲಯವನ್ನು ಇನ್ನಷ್ಟು ಸುಧಾರಿಸುವ ಸಲುವಾಗಿ ತಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದ್ದು, ಜೀವನದ ಪ್ರತಿ ಹಂತದಲ್ಲೂ ಕಣ್ಣಿನ ಆರೋಗ್ಯವು ಮುಖ್ಯವಾಗಿದೆ ಮತ್ತು ದೃಷ್ಟಿ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಆಗಾಗ್ಗೆ ತಪಾಸಣೆ ಮಾಡಿಸಿಕೊಳ್ಳುತ್ತಿರಬೇಕು ಎಂದು ಶಾಸಕ ಎಸ್ ಟಿ ಸೋಮಶೇಖರ್ ತಿಳಿಸಿದರು.
ಡಾ. ಅಗರ್ವಾಲ್ಸ್ ಗ್ರೂಪ್ ಆಫ್ ಐ ಹಾಸ್ಪಿಟಲ್ಸ್ ತನ್ನ ಪ್ರಥಮ ಐ ಕೇರ್ ಸೆಂಟರ್ ಡಾ. ಅಗರ್ವಾಲ್ಸ್ ಐ ಕ್ಲಿನಿಕ್ ಅನ್ನು ಬೆಂಗಳೂರಿನ ಕೆಂಗೇರಿಯಲ್ಲಿ ಉದ್ಘಾಟನೆ ಮಾಡಿ ಮಾತನಾಡಿದವರು,ಹೊಸ ಘಟಕವು ವಿಶೇಷ ಹಾಗೂ ಸಮಗ್ರ ಕಣ್ಣಿನ ಆರೈಕೆಯನ್ನು ಸ್ಥಳೀಯ ಸಮುದಾಯಕ್ಕೆ ಕೈಗೆಟಕುವ ದರದಲ್ಲಿ ಒದಗಿಸುತ್ತದೆ. ಕ್ಷೇತ್ರದ ಜನತೆ ಡಾ. ಅಗರ್ವಾಲ್ ಹೈ ಆಸ್ಪತ್ರೆ ಸೇವೆಯನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕಾಗುತ್ತದೆ. ಮಾನವನ ಅಂಗಗಳಲ್ಲಿ ಕಣ್ಣು ಅತ್ಯಂತ ಪ್ರಮುಖ ಅಂಗವಾಗಿದ್ದು ಜನರು ಇದನ್ನು ಬಹಳ ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕಾಗುತ್ತದೆ ಎಂದರು.
ಯಶವಂತಪುರ ವಿಧಾನಸಭಾ ಕ್ಷೇತ್ರದ ಜನತೆಗೆ ಡಾಕ್ಟರ್ ಆಸ್ಪತ್ರೆಯಿಂದ ಒಂದೇ ಸೂರ್ಯನಳ್ಳಿ ಎಲ್ಲಾ ಚಿಕಿತ್ಸಾ ವಿಧಾನಗಳನ್ನು ಇಲ್ಲಿ ಪಡೆಯಬಹುದಾಗಿತ್ತು ಅತ್ಯಂತ ಕಡಿಮೆ ದರದಲ್ಲಿ ಈ ಒಂದು ಕ್ಲಿನಿಕ್ ಅನ್ನು ಆರಂಭಿಸಲಾಗಿದೆ ಇದರ ಸದುಪಯೋಗವನ್ನು ಕ್ಷೇತ್ರದ ಜನಸಾಮಾನ್ಯರು ಅತ್ಯಂತ ಗುಣಮಟ್ಟದ ರೀತಿಯಲ್ಲಿ ಚಿಕಿತ್ಸೆಯನ್ನು ಪಡೆಯಬಹುದಾಗಿದೆ ಎಂದರು.
ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್ಸ್ನ ಕ್ಲಿನಿಕಲ್ ಸರ್ವೀಸಸ್ನ ಪ್ರಾದೇಶಿಕ ಮುಖ್ಯಸ್ಥ ಡಾ. ಶ್ರೀಪತಿ ಡಿ.ಕೆ ಮಾತನಾಡಿ “ಡಾ. ಅಗರ್ವಾಲ್ಸ್ ಐ ಕ್ಲಿನಿಕ್ ಅನ್ನು ಕೆಂಗೇರಿಯಲ್ಲಿ ಉದ್ಘಾಟನೆ ಮಾಡಿರುವುದು ಸಮಗ್ರ ಕಣ್ಣು ಆರೋಗ್ಯ ಸೇವೆಯನ್ನು ಜನರಿಗೆ ಒದಗಿಸಬೇಕು ಎಂಬ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ. ತರಬೇತಿ ಹೊಂದಿರುವ ನೇತ್ರ ಚಿಕಿತ್ಸಾ ತಜ್ಞರಾದ ಮತ್ತು ಪರಿಣಿತ ವೈದ್ಯರಿಂದ ಉನ್ನತ ಗುಣಮಟ್ಟದ ಸೇವೆಯನ್ನು ಒದಗಿಸುವುದು ನಮ್ಮ ಗುರಿಯಾಗಿದ್ದು, ಸಮುದಾಯದ ಕಣ್ಣಿನ ಆರೋಗ್ಯ ಸೇವೆ ಅಗತ್ಯಗಳನ್ನು ಈ ಮೂಲಕ ನಾವು ಪೂರೈಸುತ್ತೇವೆ.
ಕ್ಲಿನಿಕ್ ಕೇಂದ್ರ ಉದ್ಘಾಟನೆಯ ಕೊಡುಗೆ
ಕೆಂಗೇರಿಯಲ್ಲಿನ ಡಾ. ಅಗರ್ವಾಲ್ಸ್ ಐ ಕ್ಲಿನಿಕ್ ಸುಧಾರಿತ ತಂತ್ರಜ್ಞಾನವನ್ನು ಹೊಂದಿದೆ ಮತ್ತು ಸಮಗ್ರ ಕಣ್ಣಿನ ಆರೋಗ್ಯ ಸೇವೆಯನ್ನು ಒದಗಿಸುತ್ತದೆ. ನಿಖರ ಕಣ್ಣು ಒತ್ತಡ ಮಾಪನ, ರಿಫ್ರಾಕ್ಷನ್ ಟೆಸ್ಟಿಂಗ್, ವಿಶುವಲ್ ಆಕ್ಯೂಯಿಟಿ ತಪಾಸಣೆ, ಕ್ಯಾರ್ಯಾಕ್ಟ್ ಸಮಸ್ಯೆ ಪತ್ತೆಯನ್ನು ಇದು ಮಾಡುತ್ತದೆ. ಉದ್ಘಾಟನೆಯ ಹಿನ್ನೆಲೆಯಲ್ಲಿ ೨೦೨೪ ಅಕ್ಟೋಬರ್ ೩೧ ರ ವರೆಗೆ ಜನಸಾಮಾನ್ಯರಿಗೆ ಉಚಿತ ಕಣ್ಣಿನ ತಪಾಸಣೆಯನ್ನು ಕ್ಲಿನಿಕ್ನಲ್ಲಿ ನಡೆಸಲಾಗುತ್ತದೆ. ಆಯ್ದ ಫ್ರೇಮ್ಗಳಲ್ಲಿ ವಿಶೇಷ ಬೈ ಒನ್ ಗೆಟ್ ಒನ್ ಆಫರ್ ಅನ್ನು ನೀಡಲಾಗುತ್ತದೆ. ಯಾರು ಬೇಕಾದರೂ ಕ್ಲಿನಿಕ್ಗೆ ಬಂದು ಉಚಿತವಾಗಿ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಬಹುದಾಗಿದೆ.ಸಮಗ್ರ ಕಣ್ಣಿನ ತಪಾಸಣೆಗಳು, ಪರಿಣಿತ ವೈದ್ಯರಿಂದ ಸಮಾಲೋಚನೆ, ಕ್ಯಾರ್ಯಾಕ್ಟ್ ತಪಾಸಣೆ ಮತ್ತು ವಿವಿಧ ಬ್ರಾö್ಯಂಡೆಡ್ ಆಪ್ಟಿಕಲ್ ಉತ್ಪನ್ನಗಳು ಮತ್ತು ಸನ್ಗ್ಲಾಸ್ಗಳನ್ನು ಇದು ಒದಗಿಸುತ್ತದೆ.
ಡಾಕ್ಟರ್ ಅಗರ್ವಾಲ್ ಕ್ಲಿನಿಕ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಬೆಂಗಳೂರು ಪಶ್ಚಿಮ ವಿಭಾಗದ ಡೆಪ್ಯುಟಿ ಪೊಲೀಸ್ ಕಮೀಷನರ್ ಎಸ್ ಗಿರೀಶ್ ಭಾಗವಹಿಸಿದ್ದರು. ಅಲ್ಲದೆ, ಮಾವೆರಿಕ್ ರೋಟರಿ ಕೆಂಗೇರಿ ಉಪನಗರದ ವೊಕೇಶನಲ್ ಸರ್ವೀಸ್ ಡೈರೆಕ್ಟರ್ ಮತ್ತು ಸಿಎಸ್ಆರ್ ಎಚ್ ಸೀತಾರಾಮ ಶರ್ಮಾ, ಮಾವೆರಿಕ್ ರೋಟರಿ ಕೆಂಗೇರಿ ಉಪನಗರದ ಅಧ್ಯಕ್ಷ ಶ್ರೀ ವಾಸು ಪ್ರಸಾದ್, ಮಾವೆರಿಕ್ ರೋಟರಿ ಕೆಂಗೇರಿ ಉಪನಗರದ ಸಮುದಾಯ ಸೇವೆ ನಿರ್ದೇಶಕಿ ಸ್ನೇಹಾ ಸುರೇಶ್, ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್ಸ್ನ ಕ್ಲಿನಿಕಲ್ ಸರ್ವೀಸಸ್ನ ಪ್ರಾದೇಶಿಕ ಮುಖ್ಯಸ್ಥ ಡಾ. ಶ್ರೀಪತಿ ಡಿ.ಕೆ. ಮತ್ತು ಡಾ. ಅಗರ್ವಾಲ್ಸ್ ಗ್ರೂಪ್ ಆಫ್ ಹಾಸ್ಪಿಟಲ್ಸ್ನ ಕರ್ಯಾಚರಣೆಗಳು ಮತ್ತು ವಹಿವಾಟು ವಿಭಾಗದ ಎವಿಪಿ ಶ್ರೀ ಧೀರಜ್ ಇ.ಟಿ ಭಾಗವಹಿಸಿದ್ದರು.