ಬೆಂಗಳೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ ಉದಯವಾಗಿ 50 ವರ್ಷ ಸಂದಿರುವ ಹಿನ್ನೆಲೆ ಸುವರ್ಣ ಮಹೋತ್ಸವ ಆಚರಣೆಯ ಐತಿಹಾಸಿಕ ಸಮಾವೇಶ ಹಾಗೂ ಅಂಬೇಡ್ಕರ್, ಬಾಬು ಜಗಜೀವನ್ ರಾಮ್ ಜಯಂತಿ ಆಚರಣೆಯನ್ನು ಮಾಡಲಾಯಿತು ಎಂದು ದಸಂಸ ರಾಜ್ಯಾಧ್ಯಕ್ಷ ಹಾಗೂ ಆರ್ಪಿಐ ನ ರಾಷ್ಟ್ರೀಯ ಅಧ್ಯಕ್ಷ ಡಾ. ಎನ್ ಮೂರ್ತಿ ತಿಳಿಸಿದರು.
ಬೆಂಗಳೂರಿನ ವಸಂತನಗರದ ಅಂಬೇಡ್ಕರ ಭವನದಲ್ಲಿ ದಸಂಸ ಸುವರ್ಣ ಮಹೋತ್ಸವ, ಅಂಬೇಡ್ಕರ್, ಬಾಬು ಜಗಜೀವನ್ ರಾಂ ಅವರ ಜಯಂತಿ ಆಚರಣೆಯ ಐತಿಹಾಸಿಕ ಸಮಾವೇಶದಲ್ಲಿ. 2024 ರ ಲೋಕಸಭಾ ಚುನಾವಣೆಯಲ್ಲಿ ಬಹುಜನ ಒಲವು -ನಿಲುವು ? ರಾಷ್ಟ್ರೀಯ ವಿಚಾರ ಸಂಕಿರಣಕನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದಲಿತರು ಸಮಾಜದಲ್ಲಿ ಮುಂದೆ ಬಾರದೆ ಹಿಂದುಳಿಯುತ್ತಿದ್ದಾರೆ, ಅದಕ್ಕೆ ಸರ್ಕಾರದ ವೈಫಲ್ಯಗಳು ಕಾರಣವಾಗುತ್ತಿವೆ. ಸಂವಿಧಾನವನ್ನು ಬದಲು ಮಾಡಲು ಕೆಲ ರಾಜಕಾರಣಿಗಳು ಮಾತನಾಡುತ್ತಿದ್ದಾರೆ, ಅದು ಯಾರಿಂದಲೂ ಸಾಧ್ಯವಿಲ್ಲ, ಅಂಬೇಡ್ಕರ ಅವರೇ ಸಂವಿಧಾನ ಬದಲು ಮಾಡಲು ಮುಂದಾಗಿಲ್ಲ, ಮೊದಲು ಬಿಜೆಪಿಯವರು ತಲೆ ಸ್ವಚ್ಚ ಮಾಡಿಕೊಳ್ಳಿ, ದೇಶದಲ್ಲಿ ಎಲ್ಲರೂ ಸಮಾನರು, ಮಹಿಳೆಯರು ಸಮಾನತೆಯಿಂದ ಇರಲು ಅಂಬೇಡ್ಕರ್ ಬಯಸಿದ್ದರು, ಆದರೆ ಇದೀಗ ಅಸಮಾನತೆ ತಾಂಡವಾಡುತ್ತಿದೆ.
2024ರ ಲೋಕಸಭಾ ಚುನಾವಣೆಯಲ್ಲಿ ಆರ್ ಪಿಐ ಪಕ್ಷ ಹಾಗು ದಸಂಸ ಸಮಿತಿಯಿಂದ ಕೋಮುವಾದಿ ಪಕ್ಷ ಬಿಜೆಪಿಗೆ ಬಹುಮತ ಸೂಚಿಸದೆ, ದಸಂಸ ಹಾಗೂ ಇತರ ಸಂಘ ಸಂಸ್ಥೆಗಳ ಬೆಂಬಲ ಪಡೆದು ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಬಿ ಸ್ಪರ್ಧಿಸಿರುವ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ಬೇ ಶರತ್ತಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ನಿರ್ಣಯಿಸಲಾಯಿತು ಸಮಾವೇಶದಲ್ಲಿ ಧ್ವನಿ ಮತ ಪಡೆದು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಲು ಇದೇ ವೇಳೆ ದ್ವನಿ ವ್ಯಕ್ತವಾಯಿತು. ಇಂಡಿಯ ಒಕ್ಕೂಟದ ನೇತೃತ್ವ ವಹಿಸಿರುವ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷರು ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ಬೆಂಬಲ ವ್ಯಕ್ತ ಪಡಿಸಿದರು.
ಮೋದಿ 10 ವರ್ಷ ಮಾಡಿದ್ದು ಶೂನ್ಯ:
ಮೋದಿಯವರು 10 ವರ್ಗಳ ಕಾಲ ಆಳ್ವಿಕೆ ಮಾಡಿದ್ದಾರೆ, ಯಾವುದೇ ಅಭಿವೃದ್ಧಿಯಾಗಿಲ್ಲ, ಆದರೆ ಬೆಲೆ ಏರಿಕೆ ಯಿಂದ ಎಂದೂ ಕಂಡು ಕೇಳರಿಯದ ರೀತಿಯಲ್ಲಿ ಹೆಚ್ಚಳ ಮಾಡಿದ್ದಾರೆ, ಕೇಂದ್ರದಿಂದ 60 ಲಕ್ಷ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುತ್ತಿಲ್ಲ, ಸರ್ವಾಧಿಕಾರಿ ಧೋರಣೆ ಮಾಡುತ್ತಿದ್ದಾರೆ. ಧರ್ಮ ಸಂಸತ್ ಮಾಡಲು rss ಅಜೆಂಡಾವಾಗಿದೆ. ಹಣ, ದನ, ದೇವರು, ಮಂದಿರ, ಮಸೀದಿ, ಗುಡಿ, ಗೋಪುರ ಮೇಲೆ ರಾಜಕೀಯ ಮಾಡುತ್ತಿದ್ದಾರೆ ಎಂದು ಕೇಸರಿ ಪಡೆಯದ ವಿರುದ್ಧ ಗರಂ ಆದರು.
ಸಾರ್ವಜನಿಕರು ತಮ್ಮ ಹಕ್ಕನ್ನು ಚಾಲಯಿಸಿ, ಯಾವುದೇ ಆಮಿಷಗಳಿಗೆ ಬಲಿಯಾಗಬೇಡಿ, ಕೋಮುವಾದಿಗಳನ್ನು ಬೆಂಬಲಿಸಬೇಡಿ, ಇಂಡಿಯಾ ಒಕ್ಕೂಟಕ್ಕೆ ಬೆಂಬಲ ವ್ಯಕ್ತ ಪಡಿಸಿದರು. 9 ರಾಜ್ಯಗಳಲ್ಲಿ rpi ನಿಂದ ಸ್ಪರ್ಧೆ ಮಾಡಿದ್ದಾರೆ. ಬುದ್ಧ ಬಸವಣ್ಣ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಮುಂತಾದ ಸಮಾಜ ಸುಧಾರಕರ ಹೋರಾಟ ಮತ್ತು ಪರಿಶ್ರಮದಿಂದ ಭರತ ಸಮಾನತೆ ಸ್ವಾತಂತ್ರ್ಯ ಸಾಮಾಜಿಕ ನ್ಯಾಯ ಹಾಗೂ ಸಂವಿಧಾನವನ್ನು ಉಳಿಸಿಕೊಳ್ಳಬೇಕಾದದ್ದು ದೇಶದ ನಾಗರಿಕರು ಮತ್ತು ಸಮಸ್ತ ಜನರ ಜವಾಬ್ದಾರಿಯಾಗಿದೆ ಎಂದು ನಾಗರಿಕರಿಗೆ ಮನವರಿಕೆ ಮಾಡಿಕೊಟ್ಟರು.
ಐತಿಹಾಸಿಕ ಸಮಾವೇಶದಲ್ಲಿ ರಾಜ್ಯದ 30 ಜಿಲ್ಲೆಗಳಿಂದ ಆಗಮಿಸಿದ ದಿನಗಳು ಪಾಲ್ಗೊಂಡಿದ್ದರು ಹಲವು ರಾಜ್ಯಗಳ ಪ್ರತಿನಿಧಿಗಳು ಆಗಮಿಸಿ ಭಾಗವಹಿಸಿದರು ರಾಜ್ಯಮಟ್ಟದ ನೂರು ದಲಿತ ಮತ್ತು ಪ್ರಗತಿಪರ ಸಂಘಟನೆಗಳು ಜಂಟಿಯಾಗಿ ಸಮಾವೇಶದಲ್ಲಿ ಸಂಘಟಿಸಲಾಯಿತು.100 ಹೆಚ್ಚು ದಲಿತ, ಪ್ರಗತಿಪರ ಸಂಘಣೆ, ಹಿಂದುಳಿದ, ರೈತ ಸಂಘಟನೆಗಳು ಸಮಾವೇಶದಲ್ಲಿ ಭಾಗವಹಿಸಿದ್ದವು.
ಕಳೆದ 50 ವರ್ಷಗಳಿಂದ ದಲಿತ ಚಳುವಳಿಗೆ ಜೀವ ತುಂಬಿದ ಹಾಗೂ ತೆಗೆದು ಚಳುವಳಿಗೆ ಅಸ್ತಿತ್ವ ತಂದುಕೊಟ್ಟ ಚಳುವಳಿಯ ಮೂಲ ಸಲವಾಗಿರುವ ಪ್ರಮುಖ ಹೋರಾಟಗಾರರನ್ನು ಇದೆ ವೇಳೆ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಮುರಳಿ, ವೆಂಕಟೇಶ್, ವೀರ ಸಂಘಯ್ಯ,ಶಂಕರ್, ಸುಬ್ರಮಣ್ಯ,ರಾಜಣ್ಣ, ಪುಟ್ಟಸ್ವಾಮಿ, ಕಟ್ಟಿಮನಿ, ಮಂಜು, ಶಂಕರ್, ಆದಿಮನಿ, ಕೃಷ್ಣಪ್ಪ, ಮಹಾದೇವ ಆದಿಮನಿ, ಮಂಜುನಾಥ್, ಗೋಪಿ, ಪ್ರಕಾಶ್, ಮುನಿ ಆಂಜಿನಪ್ಪ, ಮುನಿರಾಜು, ಲಿಂಗರಾಜು, ಕೃಷ್ಣಪ್ಪ, ಚಾಂದ್ ಪಾಶ್, ರಾಜು ಕೂಳೂರು, ರಮೇಶ್, ರಾಮಯ್ಯ, ಮೂಡಲಪ್ಪ, ಕೃಷ್ಣಪ್ಪ, ಅಶೋಕ್ , ಕಟ್ಟಿಮನಿ, ಕೋದಂಡರಾಮ, ಶಿವರಾಜು, ರಮೇಶ್, ಸಿದ್ದರಾಜು ಸೇರಿದಂತೆ ಸಮಿತಿಯ ಸದಸ್ಯರು ಇದೇ ವೇಳೆಉಪಸ್ಥಿರಿದ್ದರು.