ಬೆಂಗಳೂರು: ಶ್ರೀಪಾದರು ಕೇವಲ ವೈದ್ಯಕೀಯ ವೃತ್ತಿ ಮಾಡಿದ್ದಲ್ಲದೆ ಸಮಾಜಸೇವೆ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದು ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ ವೆಂಕಟೇಶ್ ಅವರು ತಿಳಿಸಿದರು.
ಸರ್ಕಾರಿ ಹೋಮಿಯೋಪಥಿ ವಿಶ್ವ ವಿದ್ಯಾಲಯ ಹಾಗು ಆಸ್ಪತ್ರೆಯ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ. ಡಾ.ಶ್ರೀಪಾದ ಹೆಗಡೆ ಹೂಕ್ಲಮಕ್ಕಿ ಅವರ ಅಭಿನಂದನಾ ಗ್ರಂಥ ಚೈತನ್ಯ ಸಿರಿ ಬಿಡುಗಡೆ ಮಾಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಡಾ.ಶ್ರೀಪಾದ ಹೆಗಡೆ ಅವರು 1985 ರಿಂದ ಪರಿಚಯ, ಅವರ ವೈದ್ಯಕೀಯ ವೃತ್ತಿ, ಸಮಾಜಸೇವೆ ಹಾಗು ಯಕ್ಷಗಾನ ಕಲಾವಿದ ಅವರ ಬದುಕು ವಿಶೇಷವೇ ಸರಿ. ಅಲ್ಲದೆ ಅಣ್ಣ ತಮ್ಮಂದಿರು ಬದುಕು ನೋಡಿದಾಗ ಎಲ್ಲರಿಗೂ ಮಾದರಿ. ನಾನು ಅವರಲ್ಲಿ ಚಿಕಿತ್ಸೆ ಪಡೆಯಲು ಹೋಗುತ್ತೇನೆ ಆದರೆ ನನ್ನಿಂದ ಯಾವತ್ತೂ ಒಂದು ನಯಾ ಪೈಸೆಯ ತೆಗೆದುಕೊಂಡಿಲ್ಲ, ಬೇಡ ಎಂದು ಕಳಿಯಿಸುತ್ತಾರೆ. ಅವರ ನಡೆ ನುಡಿ,ಜೀವನ ಕ್ರಮ ಎಂತಹವರಿಗೂ ಪಾಠ ಕಲಿಸುತ್ತದೆ . ಅವರ ಬಗ್ಗೆ ಎಷ್ಟು ಹೇಳಿದರೂ ಸಾಲದು, ಅವರಿಗೆ ಅವರೇ ಸಾಟಿ.
ಅವರು ಪ್ರತಿ ವರ್ಷವೂ ಸಹ ಜರ್ಮನಿಗೆ ಹೋಮಿಯೋಪತಿ ಸಮ್ಮೇಳನಕ್ಕೆ ಹೋಗುತ್ತಾರೆ, ಅಲ್ಲಿನ ಹೊಸ ವಿಚಾರಗಳನ್ನು ತಂದು ಇಲ್ಲಿ ಹಂಚುವ ಕೆಲಸವನ್ನು ಮಾಡುತ್ತಾರೆ. ಅಲ್ಲದೆ ಗುರುಗಳ ಶಿಷ್ಯಂದಿರು ನಡುವಿನ ಸಂಬಂಧ ವಿಶೇಷ ವಿಭಿನ್ನ, ಅವರ ಜೀವನ ಕ್ರಮವೇ ಬೇರೆ, ವೈದ್ಯಕೀಯ ವೃತ್ತಿಯಲ್ಲಿ ಸುಮಾರು 30 ವರ್ಷಕ್ಕಿಂತ ಹೆಚ್ಚು ಸೇವೆಯನ್ನು ಮಾಡಿಕೊಂಡು ಬಂದಿದ್ದಾರೆ. ಅದರ ಜೊತೆಗೆ ಯಕ್ಷಗಾನ ಕಳೆಯು ಅವರನ್ನು ಕೈಬಿಸಿರುವುದು ಮತ್ತೊಂದು ವಿಶೇಷ ಎಂದು ಅವರಿಗೆ ಮತ್ತಷ್ಟು ಸಮಾಜಸೇವೆ ಮಾಡುವ ಶಕ್ತಿ ನೀಡಲಿ ಎಂದು ಅಭಿನಂದಿಸಿದರು.
ಕಾರ್ಯಕ್ರಮಕ್ಕೆ ಅಥಿತಿಯಾಗು ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ.ಅಹಲ್ಯಾ ಮಾತನಾಡಿ, ಹೋಮಿಯೋಪತಿ ಚಿಕಿತ್ಸೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಸಾಲಿನಲ್ಲಿ ಡಾ.ಶ್ರೀಪಾದರು ಒಬ್ಬರು ಸೇರುತ್ತಾರೆ, ವೃತ್ತಿಯ ಜೊತೆಗೆ ಪ್ರೌವೃತ್ತಿಯು ಬೆಳೆಸಿಕೊಂಡಿರುವುದು ಮತ್ತೊಂದು ಹೆಗ್ಗಳಿಕೆ, ಅವರ ಬದುಕೇ ಮತ್ತೊಬ್ಬರಿಗೆ ಮಾರ್ಗದರ್ಶಕರಾಗಿದ್ದಾರೆ ಎಂದರು.
ನಾವು ಅವರ ಬಗ್ಗೆ ಎಷ್ಟು ಹೇಳಿದರೂ ಸಾಲದು, 40 ವರ್ಷಗಳ ಸೇವೆಯ ಅವಧಿಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಮಾಡಿ ಉತ್ತಮ ವೈದ್ಯರನ್ನಾಗಿ ಮಾಡಿದ್ದಾರೆ. ಅವರ ಅಭಿನಂದನಾ ಗ್ರಂಥ 400 ಪುಟಗಳನ್ನು ಮೀರಿದೆ, ಅದರಲ್ಲಿ ಎಲ್ಲಾ ವಿಚಾರಗಳನ್ನು ತಿಳಿಸಲಾಗಿದೆ ಎಂದರು. ಪ್ರತಿಯೊಬ್ಬರೂ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಹೆಸರು ಮಾಡುವ ಕಾಯಕಕ್ಕೆ ಮುಂದಾದಾಗ ಮಾತ್ರ ಹುಟ್ಟಿದ್ದಕ್ಕೂ ಸಾರ್ಥಕ ಎಂದರು.
ಶ್ರೀಪಾದರ ಸ್ನೇಹಿತರು, ಬಂದುಗಳು, ಹಿತೈಷಿಗಳು ಅವರ ನಡುವಿನ ಒಡನಾಟದ ಬಗ್ಗೆ ಸಾಕಷ್ಟು ವಿಚಾರಗಳನ್ನು ಇದೇ ವೇಳೆ ಮೆಲುಕು ಹಾಕಿದರು.
ಕಾರ್ಯಕ್ರಮದಲ್ಲಿ ಡಾ.ಶ್ರೀಪಾದರ ಸಹೋದರ ಚಾರ್ಟೆಡ್ ಅಕೌಂಟೆಂಟ್ ಗೋಪಾಲಕೃಷ್ಣ , ಜಿಎಂ ಹೆಗಡೆ, ಶ್ರೀಮತಿ, ಸಾಹಿತಿ ಸೇರಿದಂತೆ ಶ್ರೀಪಾದರ ಸ್ನೇಹಿತರು,ಸಂಬಂಧಿಗಳು,ಕುಟುಂಬದವರು, ಬಂದು ಮಿತ್ರರು ಉಪಸ್ಥಿತರಿದ್ದರು.