ಭಾರತೀಯ ಅಂಚೆ ಇಲಾಖೆಯು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ ಮತ್ತು ವಿವಿಧ ಮಾವು ಬೆಳೆಗಾರರ ಸಹಯೋಗದೊಂದಿಗೆ ಮಾವಿನ ಹಣ್ಣುಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಈ ವರ್ಷದ ಸೇವೆಯನ್ನು ದಿನಾಂಕ 07.04.2025ರಿಂದ ಪ್ರಾರಂಭಿಸಿದೆ 2019 ರಿಂದ, ಪ್ರತಿ ಮಾವಿನ ಋತುವಿನಲ್ಲಿ, ಕರ್ನಾಟಕ ವೃತ್ತದ ಅಂಚೆ ಇಲಾಖೆಯು ಮಾವು ವಿತರಣಾ ಸೇವೆಯನ್ನು ಯಶಸ್ವಿಯಾಗಿ ವಿಸ್ತರಿಸುತ್ತಿದೆ.
ಅಂಚೆ ಇಲಾಖೆಯು BNPL (ಬುಕ್ ನೌ. ಪೇ ಲೇಟರ್) ಒಪ್ಪಂದದ ಅಡಿಯಲ್ಲಿ ಮಾವು ಬೆಳೆಗಾರರಿಗೆ ಪಾರ್ಸೆಲ್ ಸೇವೆಯನ್ನು (Business Parcel) ಒದಗಿಸುತ್ತಿದೆ. ಈ ಒಪ್ಪಂದವು ರೈತರು ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ಉತ್ತಮ ಬೆಲೆಯನ್ನು ಪಡೆಯುವುದು ಮತ್ತು ಗ್ರಾಹಕರು ಅಂಚೆ ಇಲಾಖೆಯ ಮೂಲಕ ತಮ್ಮ ಮನೆ ಬಾಗಿಲಿಗೆ ಉತ್ತಮ ಗುಣಮಟ್ಟದ ತಾಜಾ ಮಾವಿನ ಹಣ್ಣುಗಳನ್ನು ಪಡೆಯುವುದು ಎಂಬ ಎರಡು ಪ್ರಯೋಜನಗಳನ್ನು ಹೊಂದಿದೆ.
ಮಾವಿನ ಹಣ್ಣುಗಳನ್ನು ರೈತರು ತಲಾ 3 ಕೆಜಿಯ ಡಬ್ಬಗಳಲ್ಲಿ ವ್ಯಾಕ್ ಮಾಡಿ ಗ್ರಾಹಕರಿಗೆ ತಲುಪಿಸಲು ಅಂಚೆ ಇಲಾಖೆಗೆ ಸಂಜೆಯ ಒಳಗೆ ನೀಡುತ್ತಾರೆ. ಬಾರ್ ಕೋಡ್ ಸ್ಟಿಕ್ಕರ್ಗಳನ್ನು ಅಂಟಿಸುವ ಮೂಲಕ ಅವುಗಳನ್ನು ಬಿಸಿನೆಸ್ ಪಾರ್ನೆಲ್ ನಲ್ಲಿ ಬುಕ್ ಮಾಡಲಾಗುತ್ತದೆ. ಮಾವಿನಹಣ್ಣುಗಳನ್ನು ಹೊಂದಿರುವ ಪಾರ್ಸೆಲ್ಗಳನ್ನು ಬುಕ್ ಮಾಡಿದ ನಂತರ, ಮರುದಿನವೇ ಗ್ರಾಹಕರಿಗೆ ತಲುಪಿಸಲು ಬೆಂಗಳೂರಿನಾದ್ಯಂತ ವಿವಿಧ ಅಂಚೆ ಕಚೇರಿಗಳಿಗೆ ಕಳುಹಿಸಲಾಗುತ್ತದೆ. ನಂತರ ಈ ಪಾರ್ಸಲ್ ಗಳನ್ನು ಪೋಸ್ಟ್ ಮ್ಯಾನ್ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ಪ್ರಸ್ತುತ ಈ ಸೌಲಭ್ಯವು ಬೆಂಗಳೂರು ನಗರದಲ್ಲಿ ಲಭ್ಯವಿರುತ್ತದೆ.
2019 ರಿಂದ ಬುಕ್ ಮಾಡಿ ರವಾನಿಸಲಾದ ಮಾವಿನ ಪಾರ್ಸೆಲ್ಗಳ ಸಂಖ್ಯೆ ಈ ಕೆಳಗಿನಂತಿದೆ
ಈ ವರ್ಷದ ಮಾವು ಸೇವೆಯನ್ನು ಕರ್ನಾಟಕ ಅಂಚೆ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಶ್ರೀ.ಎಸ್. ರಾಜೇಂದ್ರ ಕುಮಾರ್ ಮತ್ತು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾದ ៨ 0 22.04.2025 doc 15:30 Hourt fortwedis ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮುಖ್ಯಾಲಯ ಕ್ಷೇತ್ರದ ಅಂಚೆ ಸೇವೆಗಳ ನಿರ್ದೇಶಕ ಶ್ರೀ ಸಂದೇಶ್ ಮಹದೇವಪ್ಪ, ಬೆಂಗಳೂರು ಮುಖ್ಯಾಲಯ ಕ್ಷೇತ್ರದ ಅಂಚೆ ಸೇವೆಗಳ ನಿರ್ದೇಶಕಿ ಶ್ರೀಮತಿ ವಿ.ತಾರಾ ಮತ್ತು ಬೆಂಗಳೂರು ಜಿಪಿಒ ದ ಮುಖ್ಯ ಪೋಸ್ಟ್ ಮಾನ್ಸರ್ ಶ್ರೀ.ಎಚ್.ಎಂ.ಮಂಜೇಶ ಉಪಸ್ಥಿತರಿದ್ದರು.