ಬೆಂಗಳೂರು:ಸರ್ಕಾರಿ ಶಾಲೆಯಲ್ಲಿ ಎಲ್ಲರು ಓದಬೇಕು, ಇದೊಂದು ಸರ್ಕಾರದ ಆಶಯವಾಗಿದೆ, ಶಾಲೆಯಲ್ಲಿ ಶಿಕ್ಷಣ ಜೊತೆಯಲ್ಲಿ ಕ್ರೀಡೆ ಚಟುವಟಿಕೆ ಮುಖ್ಯ ಎಂಬ ಚಿಂತನೆಯಲ್ಲಿ ರಾಜ್ಯದಲ್ಲಿರುವ ಸರ್ಕಾರಿ 100ಶಾಲೆಯ ಮಕ್ಕಳಿಗೆ ಪುಟ್ ಬಾಲ್ ತರಭೇತಿ ಮತ್ತು ದೈಹಿಕ ಶಿಕ್ಷಕರಿಗೂ ತರಭೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಬಿಟಿಎಂ ವಿಧಾನಸಭಾ ಕ್ಷೇತ್ರದ ಆಡುಗೋಡಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ITC ಸನ್ಫೀಸ್ಟ್ ಮತ್ತು STAIRS FOUNDATION ಮತ್ತು Six SSports – ಸೆಂಟರ್ ಫಾರ್ ಸ್ಪೋರ್ಟ್ಸ್ ಸೈನ್ಸ್ ಸಹಭಾಗಿತ್ವದಲ್ಲಿ ಬೌನ್ಸ್ ಆಫ್ ಜಾಯ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪರವರು ಅವರು ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ಸರ್ಕಾರಿ ಶಾಲೆಯ ಮಕ್ಕಳಿಗೆ ಶಿಕ್ಷಣದ ಜೊತೆಯಲ್ಲಿ ಕ್ರೀಡಾ ಚಟುವಟಿಕೆ ಮುಖ್ಯ, ಮಾನಸಿಕ,ದೃಹಿಕವಾಗಿ ಉತ್ತಮವಾಗಿರಲು ಕ್ರೀಡೆಯಲ್ಲಿ ಭಾಗವಹಿಸುವುದು ಸಹಕಾರಿಯಾಗಿದೆ.ಗ್ರಾಮೀಣ ಭಾಗದಲ್ಲಿ ಕ್ರೀಡೆಗಳಿಗೆ ಉತ್ತೇಜನ ನೀಡಿದರೆ ಗ್ರಾಮೀಣ ಕ್ರೀಡಾ ಪ್ರತಿಭೆಗಳು ಹೊರಹೊಮ್ಮಲು ಸಾದ್ಯ ವಾಗುತ್ತದೆ,ಸರ್ಕಾರಿ ಶಾಲೆಯ ಮಕ್ಕಳಿಗೆ ಕ್ರೀಡೆಗಳಲ್ಲಿ ಭಾಗವಹಿಸಲು ಪ್ರೋತ್ಸಹ ನೀಡಬೇಕು. ಜೊತೆಗೆ ಸರ್ಕಾರಿ ಶಾಲೆಯಲ್ಲಿ ಎಲ್ಲರು ಓದಬೇಕು ಎಂಬುದು ಸರ್ಕಾರದ ಆಶಯವಾಗಿದೆ ಎಂದರು.
ಗ್ರಾಮೀಣ ಭಾಗದಲ್ಲಿ ಮುಂದಿನ ವರ್ಷ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಲಾಗುವುದು, ಪ್ರತಿ ಶಾಲೆಯಲ್ಲಿ ದೃಹಿಕ ಶಿಕ್ಷಕರನ್ನು ನೇಮಕ ಮಾಡಲಾಗುವುದು. ಅದರ ಜೊತೆಗೆ ಮುಖ್ಯವಾಗಿ ಸರ್ಕಾರಿ ಶಾಲೆಗಳಿಗೆ ವಿದ್ಯುತ್, ಕುಡಿಯವ ನೀರಿನ ಬಿಲ್ಲು ಪಾವತಿಸುವಂತಿಲ್ಲ ಎಂದು ಸರ್ಕಾರ ಆದೇಶ ಮಾಡಲಾಗಿದೆ ಎಂದರು.
ರಾಜ್ಯದಲ್ಲಿ ಇರುವ 100ಸರ್ಕಾರಿ ಶಾಲೆಯ ಮಕ್ಕಳಿಗೆ ಪುಟ್ ಬಾಲ್ ತರಭೇತಿ, ಕ್ರೀಡಾ ಸಲಕರಣೆಯನ್ನು ಐ.ಟಿ.ಸಿ.ಸನ್ ಫೀಸ್ಟ್, ಸ್ಟಾರ್ ಫೌಂಡೇಷನ್ ಮತ್ತು ಬೌನ್ಸ್ ಆಫ್ ಜಾಯ್ ಸಂಸ್ಥೆ ಸಹಕಾರ ನೀಡುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಆಡುಗೋಡಿ ಬಿ.ಮೋಹನ್, ಸುದ್ದಗುಂಟೇ ಪಾಳ್ಯ ಮಂಜುನಾಥ್, ಚಂದ್ರಪ್ಪ, ಅಲಿ ಹ್ಯಾರಿಸ್ ಶೇರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಬಿಸ್ಕೆಟ್ಸ್ & ಕೇಕ್ಸ್, ITC ಫುಡ್ಸ್ ಲಿಮಿಟೆಡ್ ಮತ್ತು ಡಾ. ಭಾವನಾ ಶರ್ಮಾ ಉಪಸ್ಥಿತರಿದ್ದರು.