ಬೆಂಗಳೂರು: ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಾಣಿಜ್ಯ ಮತ್ತು ಕೈಗಾರಿಕೆ, ಹೊಸ ಕಂಪನಿಗಳ ಆಗಮನ, ಕ್ಷೇತ್ರಗಳಲ್ಲಿ ಕರ್ನಾಟಕ ಅಭೂತಪೂರ್ವ ಯಶಸ್ವಿ ಗೊಳಿಸಿದೆ ಅದರ ಮುಂದುವರೆದ ಭಾಗವಾಗಿ ಅದರ ಬೆಳವಣಿಗೆಯನ್ನು ವಿಸ್ತರಿಸಲು ELCIA ಟೆಕ್ ಶೃಂಗಸಭೆ ಗಾಗಿ ಸಾಕಷ್ಟು ಪೂರೈಸಿದಂತೆಗಳನ್ನು ಮಾಡಿಕೊಂಡಿದೆ ಎಂದು ಕರ್ನಾಟಕ ವಾಣೀಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮರ್ ಅವರು ತಿಳಿಸಿದರು.
ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಅಸೋಸಿಯೇಷನ್ (ELCIA) ಜುಲೈ 26 -2024 ರಂದು ನಡೆಯುವ ಬಹು ನಿರೀಕ್ಷಿತ ELCIA ಟೆಕ್ ಶೃಂಗಸಭೆಗಾಗಿ ಪೂರ್ವಸಿದ್ದತಾ ಕಾರ್ಯಕ್ರಮವನ್ನು ನಗರದ ಖಾಸಗಿ ಹೋಟೆಲ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು . ವಾಣೀಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಕಾರ್ಯಕ್ರಮಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು . ನಂತರ ಮಾತನಾಡಿದವರು, ಕರ್ನಾಟಕದಲ್ಲಿ ಬೆಂಗಳೂರು ಐಟಿ ಹಬ್ ಆಗಿ ಪರಿವರ್ತನೆಯಾಗುತ್ತದೆ. ಬೆಂಗಳೂರು ದಿನದಿಂದ ದಿನಕ್ಕೆ ಬಹದಾಕಾರವಾಗಿ ಬೆಳೆಯುತ್ತಿದ್ದು, ದೊಡ್ಡ ದೊಡ್ಡ ಕಂಪನಿಗಳು, ಸಣ್ಣಣಪುಟ್ಟ ಕಂಪನಿಗಳು ತಮ್ಮ ವಚನ ವಿಸ್ತರಿಸುತ್ತಾ ಹೋಗುತ್ತದೆ, ಅಲ್ಲದೆ ವಿವಿಧ ಕ್ಷೇತ್ರಗಳಿಗೆ ತಮ್ಮದೇ ಆದಂತಹ ಕೊಡುಗೆಗಳನ್ನು ನೀಡುತ್ತಾ ಬರುತ್ತಿದ್ದೇವೆ, ಅದರಲ್ಲಿ ಬಾಹ್ಯಾಕಾಶಕ್ಕೆ ಸಂಬಂಧಿಸಿದಂತೆ ಆಗಲಿ, ಯುದ್ಧ ನೌಕೆಗಳಿಗಾಗಲಿ ಸಾಕಷ್ಟು ಉಪಕರಣಗಳನ್ನು ತಯಾರಿಸಲಾಗುತ್ತದೆ. ಇದರಿಂದ ರಾಜ್ಯ ದೇಶಕ್ಕೆ ಬಹುದೊಡ್ಡ ಕೊಡುಗೆ ನೀಡಿದಂತಾಗುತ್ತದೆ ಎಂದರು.
ಮಾಹಿತಿ ತಂತ್ರಜ್ಞಾನ, ಜೈವಿಕ ಹಾಗೂ ತಂತ್ರಜ್ಞಾನ, ವಾಣಿಜ್ಯ ಮತ್ತು ಕೈಗಾರಿಕೆ ಕ್ಷೇತ್ರಗಳಲ್ಲಿ ಕರ್ನಾಟಕ ಸಾಧಿಸಿರುವ ಅಗಾಧ ಬೆಳವಣಿಗೆಯನ್ನು ಮತ್ತಷ್ಟು ವಿಸ್ತಾರವಾಗಿ ಪ್ರಸಾರಪಡಿಸಲು ಈ ಕಾರ್ಯಕ್ರಮ ಒತ್ತುನೀಡಲಿದೆ ಎಂದು ತಿಳಿಸಿದರು . ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ ಕ್ರಿಯಾತ್ಮಕ ಪರಿಸರ ಈಗ ರಾಜ್ಯದಲ್ಲಿ ನಿರ್ಮಾಣವಾಗಿದೆ ಎಂದು ತಿಳಿಸಿದರು . ಅಲ್ಲದೆ ಜನರಿಗೆ ಉದ್ಯೋಗ ಬುದ್ಧಿವಂತಿಕೆ ಪ್ರಮಾಣ ಹೆಚ್ಚಿಸುವುದು, ಕ್ರಿಯಾಶೀಲತೆ ತರಬೇತಿ ಇವೆಲ್ಲವನ್ನು ಸಹ ಒಂದೇ ಸೂರಿನಡಿ ನೀಡುವ ಆಲೋಚನೆಯನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸ್ಟಾರ್ಟ್ಅಪ್ಗಳಿಗೆ ಬೆಂಬಲ: “ಕರ್ನಾಟಕ ಸರ್ಕಾರವು ಸ್ಟಾರ್ಟ್ಅಪ್ಗಳು ಅಭಿವೃದ್ಧಿ ಹೊಂದಲು ಮತ್ತು ಆರ್ಥಿಕತೆಗೆ ಗಮನಾರ್ಹ ಕೊಡುಗೆಗಳನ್ನು ನೀಡಲು ಅಗತ್ಯವಾದ ಮೂಲಸೌಕರ್ಯ, ಹಣಕಾಸು ಮತ್ತು ಮಾರ್ಗದರ್ಶನವನ್ನು ಒದಗಿಸಲು ಸಿದ್ದವಾಗಿದ್ದು ಈ ಕುರಿತು ನಾವು ಉಪಕ್ರಮಗಳನ್ನು ಕೈಗೊಳ್ಳಲಾಗಿದ್ದು ಸರ್ಕಾರದಿಂದ ಒದಗಿಸಲಾದ ಸೌಲಭ್ಯಗಳು ಮತ್ತು ಬೆಂಬಲ ವ್ಯವಸ್ಥೆಗಳನ್ನು ಬಳಸಿಕೊಳ್ಳುವಂತೆ ನಾನು ಎಲ್ಲಾ ಉದ್ಯಮಿಗಳು ಮತ್ತು ನವೋದ್ಯಮಿಗಳಿಗೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.ಉದ್ಯಮದಿಂದ ಚರ್ಚೆಗಳು, ನಾವೀನ್ಯತೆಗಳು ಮತ್ತು ಪ್ರದರ್ಶನಗಳ ಒಂದು ಶ್ರೇಣಿಗೆ ವೇದಿಕೆಯನ್ನು ಹೊಂದಿಸುತ್ತದೆ.
ಕಾರ್ಯಕ್ರಮದಲ್ಲಿ ELCIA ಅಧ್ಯಕ್ಷರಾದ ರಾಮ್ ಕುಮಾರ್, ಖಜಂಚಿ ಮೀನಾ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.