ಬೆಂಗಳೂರು: ಬೆಂಗಳೂರು ನಗರದ ಅಂತರ್ಜಲ ಮಟ್ಟವನ್ನು ನಿರಂತರಾಗಿ ಮಾನಿಟರಿಂಗ್ ಮಾಡಲು ಐಐಎಸ್ಸ್ಸಿ ವಿಜ್ಞಾನಿಗಳು, ಸಿಜಿಡಬ್ಲೂಬಿ ಜೊತೆಗೂಡಿ ಎಐ ಬೇಸ್ಡ್ ಅಡ್ವಾನ್ಸ್ಡ್ ಗ್ರೌಂಡ್ ವಾಟರ್ ಮಾನಿಟರಿಂಗ್ ಸಿಸ್ಟಮ್ (AI BASED ADVANCED GROUND WATER MONITORING SYSTEM) ಅಳವಡಿಸಿಕೊಳ್ಳಲಿದೆ ಎಂದು ಜಲಮಂಡಳಿ ಅಧ್ಯಕ್ಷರಾದ ಡಾ. ವಿ ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ಇಂದು ಜಲಮಂಡಳಿಯ ಕೇಂದ್ರ ಕಚೇರಿಯಲ್ಲಿ ಐಐಎಸ್ಸ್ಸಿ ವಿಜ್ಞಾನಿಗಳು ಮತ್ತು ಸೆಂಟ್ರಲ್ ಗ್ರೌಂಡ್ ವಾಟರ್ ಬೋರ್ಡ್ನ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ನಂತರ ಮಾತನಾಡಿ ಈ ವಿಷಯ ತಿಳಿಸಿದರು.
ಜಲಮಂಡಳಿಯಲ್ಲಿ “ಗ್ರೌಂಡ್ ವಾಟರ್ ಟಾಸ್ಕ್ ಫೋರ್ಸ್” ರಚನೆ
ಐಐಎಸ್ಸ್ಸಿ ವಿಜ್ಞಾನಿಗಳು, ಸಿಡಬ್ಲೂಜಿಬಿ ಮತ್ತು ಕರ್ನಾಟಕ ಅಂತರ್ಜಲ ಪ್ರಾಧಿಕಾರದ ಜೊತೆಗೂಡಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಗ್ರೌಂಡ್ ವಾಟರ್ ಟಾಸ್ಕ್ ಫೋರ್ಸ್ ರಚಿಸಲಾಗುವುದು. ಈ ಟಾಸ್ಕ್ ಫೋರ್ಸ್ ಮೂಲಕ ನಗರದ ಅಂತರ್ಜಲ ಮಟ್ಟವನ್ನು ನಿರಂತರವಾಗಿ ಮಾನಿಟರಿಂಗ್ ಮಾಡಲಾಗುವುದು. ನಿರಂತರವಾಗಿ ದತ್ತಾಂಶಗಳ ಕ್ರೋಢೀಕರಣ ವಿಶ್ಲೇಷಣೆ ಮೂಲಕ ಉತ್ತಮ ನಿರ್ಧಾರಗಳನ್ನು ಕೈಗೊಳ್ಳಲು ಈ ಟಾಸ್ಕ್ ಫೋರ್ಸ್ ಸಹಾಯ ಮಾಡಲಿದೆ ಎಂದು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ಎಐ ಬೇಸ್ಡ್ ಅಡ್ವಾನ್ಸ್ಡ್ ಗ್ರೌಂಡ್ ವಾಟರ್ ಮಾನಿಟರಿಂಗ್ ಸಿಸ್ಟಮ್ (AI BASED ADVANCED GROUND WATER MONITORING SYSTEM):
ಬೆಂಗಳೂರು ನಗರದಲ್ಲಿ ನೀರಿನ ಕೊರತೆ ಎದುರಾಗಲು ಅಂತರ್ಜಲ ಮಟ್ಟ ಕಡಿಮೆಯಾಗಿರುವುದೇ ಪ್ರಮುಖ ಕಾರಣ. ಅಂತರ್ಜಲ ಮಟ್ಟ ಯಾವ ಹಂತದಲ್ಲಿದೆ, ಯಾವ ಪ್ರದೇಶಗಳಲ್ಲಿ ನೀರಿನ ಲಭ್ಯತೆ ವಿಫುಲವಾಗಿದೆ. ಸಾಂಪ್ರದಾಯಿಕ ವ್ಯವಸ್ಥೆಯಿಂದ ಸರಿಯಾದ ಲಭ್ಯವಾಗದೇ ಇರುವುದರಿಂದ ಬಹಳಷ್ಟು ತೊಂದರೆಯಾಗುತ್ತಿದೆ. ಇದನ್ನ ತಪ್ಪಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ಆಧಾರಿತ ಮಾನಿಟರಿಂಗ್ ಸಿಸ್ಟಮ್ ಅಳವಡಿಕೆಯ ಅಗತ್ಯವಿದೆ. ಇದನ್ನ ಮನಗೊಂಡಿರುವ ಜಲಮಂಡಳಿ ಐಐಎಸ್ಸ್ಸಿ ವಿಜ್ಞಾನಿಗಳು, ಸಿಡಬ್ಲೂಜಿಬಿ ಮತ್ತು ಕರ್ನಾಟಕ ಅಂತರ್ಜಲ ಪ್ರಾಧಿಕಾರದ ಜೊತೆಗೂಡಿ “ಎಐ ಬೇಸ್ಡ್ ಅಡ್ವಾನ್ಸ್ಡ್ ಗ್ರೌಂಡ್ ವಾಟರ್ ಮಾನಿಟರಿಂಗ್ ಸಿಸ್ಟಮ್ (AI BASED ADVANCED GROUND WATER MONITORING SYSTEM)” ಅಳವಡಿಸಿಕೊಳ್ಳಲು ಮುಂದಾಗಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ತಂತ್ರಜ್ಞಾನದ ನಿರ್ಮಾಣ ಮತ್ತು ಅಳವಡಿಕೆಯ ಮುಂದಾಳತ್ವ ವಹಿಸಲಿರುವ ಐಐಎಸ್ಸ್ಸಿ ವಿಜ್ಞಾನಿಗಳು
ಅಂತರ್ಜಲ ಮಾನಿಟರಿಂಗ್ ವ್ಯವಸ್ಥೆ ನಿರ್ಮಾಣದಲ್ಲಿ ಅಳವಡಿಸಿಕೊಳ್ಳಲಾಗುವ ಎಐ ಮತ್ತು ಐಓಟಿ (AI & IOT) ತಂತ್ರಜ್ಞಾನ ನಿರ್ಮಾಣ ಮತ್ತು ಅಳವಡಿಕೆಯ ಮುಂದಾಳತ್ವವನ್ನು ದೇಶದ ಪ್ರಮುಖ ಸಂಸ್ಥೆಯಾಗಿರುವ ಐಐಎಸ್ಸ್ಸಿಯ ವಿಜ್ಞಾನಿಗಳು ವಹಿಸಿಕೊಳ್ಳಲಿದ್ದಾರೆ. ಮಾಹಿತಿಯ ಸಂಗ್ರಹಣೆ, ದತ್ತಾಂಶದ ವಿಶ್ಲೇಷಣೆ ಸೇರಿದಂತೆ ಅಗತ್ಯ ಮಾಹಿತಿಯ ಕ್ರೋಢೀಕರಣ ಹಾಗೂ ವರದಿಯನ್ನು ನೀಡುವ ನಿಟ್ಟಿನಲ್ಲಿ ಈ ತಂತ್ರಜ್ಞಾನ ಬಳಕೆಯಾಗಲಿದೆ.
ಸಮಸ್ಯೆಯ ನಿರ್ವಹಣೆ ಮತ್ತು ಪರಿಹಾರದಲ್ಲಿ ಟಾರ್ಗೆಟೆಡ್ ಅಪ್ರೋಚ್ಗೆ ಸಹಕಾರಿ
ಈ ಹೊಸ ತಂತ್ರಜ್ಞಾನದ ಅಳವಡಿಕೆಯ ಸಿದ್ದವಾಗುವಂತಹ ಮಾನಿಟರಿಂಗ್ ಸಿಸ್ಟಮ್, ಬೆಂಗಳೂರು ನಗರದ ಅಂತರ್ಜಲವನ್ನು ಸಮರ್ಪಕ ನಿರ್ವಹಣೆ ಮತ್ತು ಎದುರಾಗುವ ಸಮಸ್ಯೆಗಳನ್ನ ಪರಿಹರಿಸಲು ಅನುವು ಮಾಡಿಕೊಡಲಿದೆ. ಬೆಂಗಳೂರು ನಗರದ ಯಾವ ಪ್ರದೇಶದಲ್ಲಿ ಅಂತರ್ಜಲ ನೀರಿನ ಲಭ್ಯತೆಯಿದೆ. ಅಂತರ್ಜಲ ಮಟ್ಟ ಯಾವ ಹಂತದಲ್ಲಿದೆ, ಅಂತರ್ಜಲ ಮಟ್ಟದಲ್ಲಿ ಆಗುತ್ತಿರುವ ಏರು ಪೇರಿನ ಬಗ್ಗೆ ಸಮಗ್ರ ಮಾಹಿತಿ ಲಭ್ಯವಾಗಲಿದೆ. ಇದರಿಂದ ಜಲಮಂಡಳಿ ಸಮಸ್ಯೆಯ ಪರಿಹಾರಕ್ಕೆ ಟಾರ್ಗೆಟೆಡ್ ಅಪ್ರೋಚ್ ಮೂಲಕ ಪರಿಹಾರ ಮಾಡಲು ಸಾಧ್ಯವಾಗಲಿದೆ ಎಂದು ಹೇಳಿದರು.
ಅಂತರ್ಜಲ ಮಟ್ಟ ಏರಿಕೆಯ ಕಾರ್ಯಕ್ರಮಗಳ ಪರಿಣಾಮಕಾರಿ ಅಳವಡಿಕೆಗೆ ಸಹಾಯ
ಪ್ರಸ್ತುತ ಅಂತರ್ಜಲ ಮರುಪೂರಣ ವ್ಯವಸ್ಥೆಯನ್ನು ಅಳವಡಿಸುವಾಗ ಹೆಚ್ಚಿನ ತಾಂತ್ರಿಕ ಮಾಹಿತಿಯನ್ನು ಒಳಗೊಂಡ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿಲ್ಲ. ಇದಕ್ಕೆ ಮಾಹಿತಿಯ ಕೊರತೆಯೇ ಕಾರಣ. ಹೊಸ ವ್ಯವಸ್ಥೆಯ ಅಳವಡಿಕೆಯಿಂದ ನಾವು ಯಾವ ಪ್ರದೇಶದಲ್ಲಿ ಇನ್ಫಿಲ್ಟರೇಷನ್ ರೇಟ್ ಹೆಚ್ಚಾಗುತ್ತದೆ ಎನ್ನುವುದರ ಮಾಹಿತಿ ದೊರೆಯಲಿದೆ. ಇದರಿಂದ ಕಡಿಮೆ ವೆಚ್ಚದ ಮೂಲಕ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಇದೇ ರೀತಿ ಕೆರೆಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಪರಿಣಾಮಕಾರಿ ಕ್ರಮಗಳ ಬಗ್ಗೆಯೂ ಮಾಹಿತಿ ದೊರೆಯಲಿದೆ.
ಸಭೆಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೋ. ಶೇಖರ್ ಎಂ, ಅಸೋಸಿಯೇಟ್ ಪ್ರೊಫೇಸರ್ ಎಲ್.ಎನ್ ರಾವ್, ಸಿಜಿಡಬ್ಲೂಬಿ ಯ ಪ್ರಾದೇಶಿಕ ನಿರ್ದೇಶಕರಾದ ಜ್ಯೋತಿ ಕುಮಾರ್, ವಿಜ್ಞಾನಿಗಳಾದ ಹೆಚ್.ಪಿ ಜಯ ಪ್ರಕಾಶ್ ಮತ್ತು ರಾಹುಲ್ ಉಪಸ್ಥಿತರಿದ್ದರು.