ಬೆಂಗಳೂರು: ನಗರದ ಜಯಮಾಲ್ ಪ್ಯಾಲೇಸ್ ಹೋಟೆಲ್ ನಲ್ಲಿ ಜನವರಿ 25 ರಿಂದ 28 ರ ತನಕ ಎರಡು ದಿನಗಳ ಕಾಲ ಸಾಬೂನುಗಳು, ಸೌಂದರ್ಯವರ್ಧಕಗಳು ಮತ್ತು ಮೇಣದಬತ್ತಿಗಳ ಸಮ್ಮೇಳನವನ್ನು ಭಾರತದಲ್ಲಿ ಮೊದಲ ಬಾರಿಗೆ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿಯ ಮುಖ್ಯಸ್ಥೆ ಗೀತಾ ವೇಳಾಪಿಲ್ ತಿಳಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳಾ ಉದ್ಯಮವನ್ನು ಉತ್ತೇಜಿಸುವ ಸಲುವಾಗಿ ಹಾಗೂ ಪ್ರೋತ್ಸಾಹಿಸುವ ಸಲುವಾಗಿ ನಗರದಲ್ಲಿ ಎಷ್ಟು ದಿನಗಳ ಕಾಲ ವಿಷಯ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ. ಮಹಿಳೆಯರಿಗೆ ಉದ್ಯಮವನ್ನು ಪ್ರಾರಂಭಿಸುವ ಬಗ್ಗೆ ಹಾಗೂ ತಮ್ಮ ಕಾಲ ಮೇಲೆ ತಾವು ನಿಂತುಕೊಂಡು ಸ್ವಾವಲಂಬಿ ಜೀವನ ಮಾಡುವ ಬಗ್ಗೆ ಕೆಲಸಗಳನ್ನು ಹೇಳಿಕೊಡಲಾಗುತ್ತದೆ.
ಇನ್ನು ಸಮ್ಮೇಳನದಲ್ಲಿ ವಿಶೇಷ ಮೌಲ್ಯವರ್ಧಿತ ನೈಸರ್ಗಿಕ ಮತ್ತು ಗಿಡಮೂಲಿಕೆ ಆಧಾರಿತ ಸಾಬೂನು ಮತ್ತು ಮೇಣದಬತ್ತಿಗಳ ತಯಾರಿಕೆ, ಸುಗಂಧ ದ್ರವ್ಯ ಮತ್ತು ಧೂಪದ್ರವ್ಯ ತಯಾರಿಕೆ ಕಾರ್ಯಾಗಾರಗಳು ನಡೆಯುತ್ತದೆ ಎಂದು ತಿಳಿಸಿದರು. ಕಾರ್ಯಗಾರಕ್ಕೆ ಬೆಂಗಳೂರು ಸೇರಿದಂತೆ ಪ್ರಪಂಚದಾದ್ಯಂತದ ಅಂತರರಾಷ್ಟ್ರೀಯ ಪ್ರತಿನಿಧಿಗಳು ಬರುತ್ತಿದ್ದಾರೆ! ಕೈಯಿಂದ ಮಾಡಿದ ಕಾರ್ನೀವಲ್ – ಕ್ಷೇತ್ರದಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ನೋಡಬಹುದಾಗಿದೆ ಎಂದರು.
ಮಹಿಳಾ ಉದ್ಯಮಿಗಳ ವ್ಯಾಪಾರ ಮೇಳವು ಕರಕುಶಲ ಉತ್ಪನ್ನಗಳನ್ನು ತಯಾರಿಸಿದೆ (ಸುಧಾರಿತ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ, ವ್ಯಾಪಾರ ಮೇಳ ಮತ್ತು ಸಂಸ್ಕೃತಿಕ ಕಾರ್ಯಕ್ರಮ) ಮತ್ತು ಕಾರ್ಯಾಗಾರದಲ್ಲಿ ಭಾಗವಹಿಸಲು ಭಾರತದಾದ್ಯಂತ ಪ್ರಯಾಣಿಸುವ ಕರಕುಶಲ ಮಹಿಳೆಯರು ನಮ್ಮಲ್ಲಿದ್ದಾರೆ.
ಮೇಳದಲ್ಲಿ ಕಲಿಕೆಗೆ ಅವಕಾಶ:
ಇನ್ನು ಸಮ್ಮೇಳನದಲ್ಲಿ ಉದ್ಯೋಗವನ್ನು ಕಲಿಯುವ ಸಲುವಾಗಿ ಕೌಶಲ್ಯ ಆಧಾರಿತ ತರಬೇತಿಯನ್ನು ನೀಡಲಾಗುತ್ತದೆ, ಅದಕ್ಕೆ ಬೇಕಾದಂತ ಕಚ್ಚಾ ಸಾಮಗ್ರಿಗಳನ್ನು ಸಂಸ್ಥೆಯಿಂದಲೇ ಪೂರೈಸಲಾಗುತ್ತದೆ ಎಂದರು, ಐದರಿಂದ ಒಂಬತ್ತು ಸಾವಿರ ರೂಪಾಯಿಗಳ ಶುಲ್ಕ ಇರುತ್ತದೆ, ಕೌಶಲ್ಯಗಳನ್ನು ಕಲಿಸಲು ತರಬೇತುದಾರರು ಜಪಾನ್ ಮತ್ತು ದುಬೈನಿಂದ ವಿಶ್ವಪ್ರಸಿದ್ಧರಾಗಿದ್ದಾರೆ.
ಈ ಮೆಣಸು ಕೇವಲ ನಗರದ ಜನರಿಗೆ ಮಾತ್ರವಲ್ಲದೆ ಗ್ರಾಮೀಣ ಭಾಗದ ಎಲ್ಲಾ ಮಹಿಳೆಯರಿಗೂ ಸ್ವ ಉದ್ಯೋಗವನ್ನು ನೀಡುವ ಸಲುವಾಗಿ ಈ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಭಾರತದಾದ್ಯಂತ ನಗರ ಮತ್ತು ಗ್ರಾಮೀಣ ಮಹಿಳಾ ಕುಶಲಕರ್ಮಿಗಳಿಗೆ ಭಾಗವಹಿಸಲು ಮತ್ತು ಪ್ರೋತ್ಸಾಹ, ಮಾರ್ಕೆಟಿಂಗ್ ಮಾನ್ಯತೆ ಪಡೆಯಲು ಮತ್ತು ಅವರ ವ್ಯವಹಾರಕ್ಕಾಗಿ ಸಂಪರ್ಕಗಳನ್ನು ನಿರ್ಮಿಸಲು ವೇದಿಕೆಯನ್ನು ಒದಗಿಸುವ ಅವಕಾಶ ನೀಡಲಾಗುತ್ತದೆ ಎಂದರು.
ಇನ್ನೂ ಕಾರ್ಯಗಾರದಲ್ಲಿ ಭಾಗವಹಿಸುವವರಿಗೆ ವಿಶೇಷವಾದಂತಹ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಅದರಲ್ಲಿ ಗೆದ್ದವರಿಗೆ ಮೊದಲ ಬಹುಮಾನವಾಗಿ 1,50,000 ಬಹುಮಾನ ಹಾಗೂ ಕಚ್ಚಾ ಸಾಮಗ್ರಿಗಳು ಸಿಗಲಿವೇ. ಇದರ ಜೊತೆಗೆ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದರು. ಇನ್ನು ಮೇಳವು ಬೆಳಿಗ್ಗೆ 12.30 ರಿಂದ 1 ಗಂಟೆವರೆಗೆ ನಡೆಯುತ್ತದೆ.
ಸುದ್ದಿಗೋಷ್ಠಿಯಲ್ಲಿ ದರ್ಶನ್ ರಮೇಶ್, ಪ್ರಿಯ ಜೈನ್, ಶ್ರುತಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.