ಬೆಂಗಳೂರು : ಅನೇಕ ವರ್ಷಗಳಿಂದ ಹಿಂದೂ ಸಮಾಜ ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಗಣೇಶೋತ್ಸವವನ್ನು ಆಚರಿಸುತ್ತ ಬಂದಿದೆ. ಈ ಮೂಲಕ ಇಡೀ ಸಮಾಜ ಯಾವುದೇ ಬೇಧವಿಲ್ಲದೆ ಒಂದಾಗುತ್ತದೆ. ಈ ಗಣೇಶೋತ್ಸವ ಪೆಂಡಾಲುಗಳಲ್ಲಿ ತಲತಲಾಂತರಗಳಿಂದ ನಮ್ಮ ಬಂಧು ಮಿತ್ರರಿಗೆ ಪ್ರಸಾದ ಹಂಚುವುದು, ಅನ್ನ ಸಂತರ್ಪಣೆಯಂತಹ ಪುಣ್ಯಕಾರ್ಯಗಳನ್ನು ಮಾಡಲಾಗುತ್ತದೆ. ಈ ವೇಳೆ ಪೆಂಡಾಲುಗಳಲ್ಲಿ ಪ್ರಸಾದ ತಯಾರಿಸುವ ವ್ಯಕ್ತಿ FSSAI ಪ್ರಮಾಣಪತ್ರ ಪಡೆದಿರಬೇಕೆಂಬ ಕಡ್ಡಾಯ ಆದೇಶ ಜಾರಿಗೊಳಿಸಿ ಬಿಬಿಎಂಪಿ ಈ ಪುಣ್ಯಕಾರ್ಯದಲ್ಲಿ ಹುಳಿ ಹಿಂಡುವ ಕೆಲಸ ಮಾಡುತ್ತಿದೆ. ಇದನ್ನು ಹಿಂದೂ ಜನಜಾಗೃತಿ ಸಮಿತಿ ತೀವ್ರವಾಗಿ ಖಂಡಿಸುತ್ತದೆ.
ಅನೇಕ ಕಡೆಗಳಲ್ಲಿ ಗಣೇಶಭಕ್ತರು ಅತ್ಯಂತ ಶ್ರದ್ಧೆ ಭಕ್ತಿಯಿಂದ ತಮ್ಮ ತಮ್ಮ ಮನೆಗಳಲ್ಲಿ ಪ್ರಸಾದದ ತಯಾರಿ ಮಾಡಿ ಅದನ್ನು ಪೆಂಡಾಲುಗಳಲ್ಲಿ ಇತರರಿಗೆ ಹಂಚುತ್ತಾರೆ. ಹೀಗಿರುವಾಗ ಅಂಥವರು FSSAI ಸರ್ಟಿಫಿಕೇಟ್ ಎಲ್ಲಿಂದ ತರಬೇಕು ? ಇಫ್ತಾರ್ ಮತ್ತಿತರ ಸಂದರ್ಭದಲ್ಲಿ ಅಕ್ರಮವಾಗಿ ರಸ್ತೆ ಮಧ್ಯದಲ್ಲಿಯೇ ಅಡುಗೆ ಮಾಡಿ ವಿತರಣೆ ಮಾಡಲಾಗುತ್ತದೆ. ಇದರ ಗುಣಮಟ್ಟ ಪರಿಶೀಲನೆ ಬಗ್ಗೆ ಬಿಬಿಎಂಪಿ ಎಂದಾದರೂ ಪ್ರಶ್ನಿಸುವುದೇ ?
ಅನೇಕ ವರ್ಷಗಳಿಂದ ಹಿಂದೂ ಸಮಾಜ ಈ ಪ್ರಸಾದ ಸೇವೆ ಮಾಡುತ್ತಾ ಬಂದಿದೆ, ಇದುವರೆಗೆ ಇದರ ಬಗ್ಗೆ ಹಿಂದೂ ಸಮಾಜದಲ್ಲಿ ಯಾವುದೇ ಆಕ್ಷೇಪವಿಲ್ಲದಿರುವಾಗ ಬಿಬಿಎಂಪಿಗೆ ಇದರಲ್ಲಿ ಮೂಗು ತೂರಿಸುವ ಆವಶ್ಯಕತೆ ಏನಿದೆ ? ಕೇವಲ ಹಿಂದೂ ಹಬ್ಬಗಳ ಸಂದರ್ಭದಲ್ಲಿ ಇಂತಹ ಧೋರಣೆಗಳನ್ನು ತಂದು ಕಾಂಗ್ರೆಸ್ ಪನಃ ತನ್ನ ಹಿಂದೂದ್ವೇಷವನ್ನು ಎತ್ತಿ ಹಿಡಿದಿದ್ದಲ್ಲದೆ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದನ್ನು ಹಿಂದೂ ಸಮಾಜ ಎಂದಿಗೂ ಸಹಿಸುವುದಿಲ್ಲ !