ಬೆಂಗಳೂರು: ಬೆಂಗಳೂರು ರೋಟರಿ ಕ್ಲಬ್ ನ 90ನೇ ವರ್ಷದ ಸಂಭ್ರಮದಲ್ಲಿ 2024ರ ಅವಧಿಗೆ 90ನೇ ಅಧ್ಯಕ್ಷರಾಗಿ ರೋಟರಿಯನ್ ಗೌರಿ ಓಜಾ ಅವರು ಅಧಿಕಾರ ವಹಿಸಿಕೊಂಡ ಮಾತನಾಡಿದರು ಮಹಿಳೆಯರು ಮತ್ತು ಮಕ್ಕಳ ಮೇಲೆ ಉತ್ತಮ ಪರಿಣಾಮ ಬೀರುವ ಮಾರ್ಗಗಳನ್ನು RCB ಪರಿಶೀಲಿಸುತ್ತದೆ ಎಂದು 2024ರ ಅವಧಿಗೆ ಅಧ್ಯಕ್ಷೆ ಗೌರಿ ಓಜಾ ಅವರು ತಿಳಿಸಿದರು.
ಬೆಂಗಳೂರಿನ ಲ್ಯಾವೆಲ್ಲಿ ರಸ್ತೆಯ ರೋಟರಿ ಫ್ರೆಂಡ್ಶಿಪ್ ಕ್ಲಬ್ ನಲ್ಲಿ instalation ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು, ಬೆಂಗಳೂರು ರೋಟರಿ ಕ್ಲಬ್ ವರ್ಷದ ಉದ್ದಕ್ಕೂ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ, ಅದರಲ್ಲಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಸಮವಸ್ತ್ರ, ಮೆಡಿಕಲ್ ಕ್ಯಾಂಪ್, ಪರಿಸರ ಕಾಳಜಿ, ಸ್ವಚ್ಚತೆ, ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸವನ್ನು 90 ವರ್ಷಗಳಿಂದ ಮಾಡಿಕೊಂಡು ಬರಲಾಗುತ್ತಿದೆ.
ಕ್ಲಬ್ ಗೆ 90 ವರ್ಷ ತುಂಬಿದ ಹಿನ್ನೆಲೆ ಇದೀಗ 2024 ಅವಧಿಯಲ್ಲಿ ರೋಟರಿ ಕ್ಲಬ್ ಆಫ್ ಬೆಂಗಳೂರು ಕರ್ನಾಟಕ ಗ್ರಾಮಾಂತರದಲ್ಲಿರುವ 90 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೌರಶಕ್ತಿಯನ್ನು ನೀಡುತ್ತದೆ.
ಬೆಂಗಳೂರು ರೋಟರಿ ಕ್ಲಬ್ ಗೆ 90ರ ಸಂಭ್ರಮ
ರೋಟರಿ ಕ್ಲಬ್ ಆಫ್ ಬೆಂಗಳೂರು ತನ್ನ 90 ನೇ ವರ್ಷದಲ್ಲಿದ್ದು, 1934 ರಲ್ಲಿ ಚಾರ್ಟರ್ಡ್ 334 ಸದಸ್ಯರನ್ನು ಹೊಂದಿರುವ ಭಾರತದ ಅತಿದೊಡ್ಡ ರೋಟರಿ ಕ್ಲಬ್ಗಳಲ್ಲಿ ಒಂದಾಗಿದೆ. 90 ವರ್ಗಳಿಂದಲು ಅನೇಕ ಸಮಾಜಸೇವೆಗಳನ್ನು ಮಾಡಿಕೊಂಡು ಬರಲಾಗುತ್ತಿದೆ, ಮುಂದಿನ ದಿನಗಳಲ್ಲಿಯೂ ಮುಂದುವರೆಸಿಕೊಂಡು ಹೋಗಲಾಗುತ್ತದೆ.
ಈ ಪ್ರತಿಷ್ಠಿತ ಕ್ಲಬ್ನ 90 ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವ ಅಧ್ಯಕ್ಷೆ ರೋಟರಿಯನ್ ಗೌರಿ ಓಜಾ ಅವರು, “ಸಮುದಾಯಕ್ಕೆ ನಮ್ಮ 90 ವರ್ಷಗಳ ಸೇವೆಯನ್ನು ಸ್ಮರಿಸುವುದಕ್ಕಾಗಿ, ಈ ವರ್ಷ 24-25 ಸಾಲಿನಲ್ಲಿ ಕ್ಲಬ್ ನ ಸದಸ್ಯರೆಲ್ಲರೂ ನಾವು 90 ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಶಕ್ತಿ ತುಂಬಲು ನಿರ್ಧರಿಸಿದ್ದೇವೆ. ಆ ಹಿನ್ನೆಲೆ ಸೌರಶಕ್ತಿಯೊಂದಿಗೆ ಕರ್ನಾಟಕವು 2.7 ಕೋಟಿ ರೂ.ಗಳಷ್ಟಿರುತ್ತದೆ.
ರೋರಿಯನ್ಸ್, ಕುಟುಂಬಗಳು ಮತ್ತು ಹಿತೈಷಿಗಳ ದೊಡ್ಡ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷೆ ಗೌರಿ ಓಜಾ, ಮಹಿಳೆಯರು ಮತ್ತು ಮಕ್ಕಳ ಮೇಲೆ ಉತ್ತಮ ಪರಿಣಾಮ ಬೀರುವ ಮಾರ್ಗಗಳನ್ನು RCB ಪರಿಶೀಲಿಸುತ್ತದೆ ಎಂದು ಘೋಷಿಸಿದರು.
ಕಾರ್ಯಕ್ರಮದಲ್ಲಿ ರೊಟರಿಯನ್ ಡಾ ಮುಸ್ತಲಿ ವಾಘ್, ರೊಟರಿಯನ್ ರೋಹಿದಾಸ್ ಭಟ್, ರೊಟರಿಯನ್ ವಿನೀತಾ ಚಿನಪ್ಪ, ರೊಟರಿಯನ್ ಗಿರೀಶ್ ರಾಮನಾಥನ್, ರೊಟರಿಯನ್ ಸೋಹಿಲ್ ಷಾ, ರೊಟರಿಯನ್ ಗೌರಿ ಓಜಾ, ರೊಟರಿಯನ್ ನಳಿನಿ ನಂಜುಂಡಯ್ಯ, ರೊಟರಿಯನ್ ಸುಕೇನ್ ಪದ್ಮನಾಭ, ರೊಟರಿಯನ್ ಶ್ರೀಹರಿ, ರೊಟರಿಯನ್ ಕವಿತಾ ಮುತ್ತಪ್ಪ, ರೊಟರಿಯನ್ ಕವಿತಾ ಮುತ್ತಪ್ಪ ಸೇರಿದಂತೆ ಕ್ಲಬ್ ನ ಹಳೆಯ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.