ಬೆಂಗಳೂರು: ಭಾರತದ ಮುಂಚೂಣಿ ಪ್ರೀಮಿಯಮ್ ಕಣ್ಣಿನ ಸಾಧನಗಳ ರೀಟೇಲ್ ಚೈನ್ ಆದ ಜಿಕೆಬಿ ಆಪ್ಟಿಕಲ್ಸ್, ಬೆಂಗಳೂರಿನಲ್ಲಿ ತನ್ನ ಪ್ರಧಾನ ಮಳಿಗೆಯನ್ನು ಎಮ್.ಜಿ.ರಸ್ತೆಯಲ್ಲಿ ಮರು ಸ್ಥಾಪಿಸಲಾಗಿದೆ, ಆಕರ್ಷಕ ಫ್ಯಾಷನ್ ಆರೋಗ್ಯಕರವಾದಂತಹ ಮಳಿಗೆ ನಿರ್ಮಾಣ ಮಾಡಲಾಗಿದೆ ಎಂದು ಜಿಕೆಬಿ ಆಪ್ಟಿಕಲ್ಸ್ ನ ನಿರ್ದೇಶಕಿ ಪ್ರಿಯಾಂಕ ಗುಪ್ತ ತಿಳಿಸಿದರು.
ಬೆಂಗಳೂರಿನ ಎಂಜಿ ರಸ್ತೆಯಲ್ಲಿರುವ ಜಿಕೆಬಿ ಆಪ್ಟಿಕಲ್ ಪ್ರಧಾನ ಮಳಿಗೆ ನವೀಕರಣದಲ್ಲಿ ಹೇಗೆಲ್ಲಾ ಬದಲಾವಣೆ ಆಗಿವೆ ಹಾಗೂ ಪ್ರಸ್ತುತ ಕಾಲಘಟ್ಟಕ್ಕೆ ತಂತ್ರಜ್ಞಾನವನ್ನು ಬಳಸಿಕೊಂಡು ಮಳಿಗೆಯನ್ನು ಸುಂದರಗೊಳಿಸಿದ್ದಾರೆ ಎಂಬುದರ ಬಗ್ಗೆ ಅವರು ತಿಳಿಸಿದರು.ಈ ಮಳಿಗೆ ೨೪೦೦ ಚದರಡಿಗಳ ವಿಸ್ತೀರ್ಣದಲ್ಲಿದೆ. ಪ್ರಸ್ತುತದ ಮಳಿಗೆಯನ್ನು, ಆರೋಗ್ಯ, ಫ್ಯಾಶನ್ ಮತ್ತು ತಂತ್ರಜ್ಞಾನವನ್ನು ಸಂಯೋಜಿಸಿ ಹೊಸ ಯುಗದ ಆನುಭವಿಕ ರೀಟೇಲ್ ಗಮ್ಯವನ್ನಾಗಿ ದೊಡ್ಡ ರೀತಿಯಲ್ಲಿ ನವೀಕರಿಸಲಾಗಿದೆ.
ಮೂರು ವಿಶೇಷ ಸೌಲಭ್ಯಗಳು ಇದರಲ್ಲಿ ಒಳಗೊಂಡಿವೆ
ನಿರ್ದಿಷ್ಟವಾದ ಅನುಭವ ಮತ್ತು ಸರ್ವಿಸ್ಗಾಗಿಯೇ ವಿನ್ಯಾಸಗೊಳಿಸಲಾಗಿರುವ ಪ್ರತ್ಯೇಕವಾದ ಮೂರು ವಿಶೇಷ ವಲಯಗಳಿರುವ ಸ್ಮಾರ್ಟ್ ಆದ, ಅಂತರ್ಗತ ಲೇಔಟ್ ಈ ಮಳಿಗೆಯ ವಿಶಿಷ್ಟವಾಗಿವೆ. ಮಕ್ಕಳಿಗಾಗಿ ಮಯೋಪಿಯ ಕ್ಲಿನಿಕ್, ಸಮೀಪದೃಷ್ಟಿಯ ಆರಂಭಿಕ ಪತ್ತೆ ಹಾಗೂ ಪರಿಣಾಮಕಾರಿ ನಿರ್ವಹಣೆಯ ಮೇಲೆ ಒತ್ತು ನೀಡಿ, ತಜ್ಞ ಸಮಾಲೋಚನೆಗಳು ಮತ್ತು ಅಗತ್ಯಕ್ಕೆ ತಕ್ಕ ಚಿಕಿತ್ಸೆ ಮೂಲಕ ಜೀವನಪರ್ಯಂತದ ಕಣ್ಣಿನ ಆರೈಕೆ ಒದಗಿಸುತ್ತದೆ.
ವೈಡೆಕ್ಸ್ ಆಡಿಯಾಲಜಿ ಝೋನ್, ಅತ್ಯಾಧುನಿಕ ಆಡಿಯಾಲಜಿ ಕ್ಲಿನಿಕ್ ಒದಗಿಸಿ ಅತ್ಯಾಧುನಿಕ ಶ್ರವಣ ಮಾಪನಗಳು ಮತ್ತು ನಿಮ್ಮ ಅಗತ್ಯಕ್ಕೆ ತಕ್ಕ ಶ್ರವಣ ಪರಿಹಾರಗಳ ವ್ಯಾಪಕ ಆಯ್ಕೆಯನ್ನು ನೀಡುತ್ತದೆ. ಏತನ್ಮಧ್ಯೆ, ಲೆನ್ಸ್ ಎಕ್ಸ್ಪೀರಿಯೆನ್ಸ್ ಝೋನ್, ಫ್ಯಾಶನ್ ಮತ್ತು ದೃಷ್ಟಿ ಪರಿಹಾರ ಎರಡನ್ನೂ ಒದಗಿಸುವ ವೈವಿಧ್ಯಮಯ ಶೇಡ್ಗಳ ಮತ್ತು ವೈಯಕ್ತೀಕೃತ ಲೆನ್ಸ್ ಮತ್ತು ಕನ್ನಡಕಗಳನ್ನು ಶೋಧಿಸಲು ಗ್ರಾಹಕರಿಗೆ ನೆರವಾಗುತ್ತದೆ.
ಗ್ರಾಹಕ ಅನುಭವವನ್ನು ಹೆಚ್ಚಿಸಬೇಕೆನ್ನುವ ಉದ್ದೇಶದಿಂದ ಒಂದು ಪ್ರಮುಖ ಮೈಲಿಗಲ್ಲಿನ ಕ್ಷಣವಾಗಿದೆ. ಈ ಪರಿಕಲ್ಪನೆಯೊಂದಿಗೆ ನಾವು ಆರೋಗ್ಯ, ತಂತ್ರಜ್ಞಾನ ಮತ್ತು ವಿನ್ಯಾಸವನ್ನು ಸಂಯೋಜಿಸಿ, ನಮ್ಮ ಗ್ರಾಹಕರು ಒಂದು ಸಾಮಾನ್ಯ ಶಾಪಿಂಗ್ ಅನುಭವಕ್ಕಿಂತ ಹೆಚ್ಚಿನದನ್ನು ಪಡೆದುಕೊಳ್ಳುವ ಹಾಗೆ ಸ್ಥಳದ ನಿರ್ಮಾಣ ಮಾಡಿದ್ದೇವೆ. ಇದು ಅವರಿಗೆ ಅವರ ಜೀವನಶೈಲಿ, ಆರಾಮ ಮತ್ತು ಆರೈಕೆ ಮಾಡುವ ಗಮ್ಯವನ್ನು ಒದಗಿಸುವುದರ ಕುರಿತಾಗಿದೆ.” ಎಂದು ಹೇಳಿದರು.
ಜಿಕೆಬಿ ಆಪ್ಟಿಕಲ್ಸ್ನ ಚೀಫ್ ಆಪರೇಟಿಂಗ್ ಆಫಿಸರ್ ಸುಮಿತ್ ಮಾತನಾಡಿ ಗ್ರಾಹಕರು ಶ್ರವಣ ಮತ್ತು ದೃಷ್ಟಿಯ ಆರೈಕೆಯೊಡನೆ ತೊಡಗಿಕೊಳ್ಳುವ ರೀತಿಯನ್ನು ಪರಿವರ್ತಿಸುವ ಎರಡು ಅತ್ಯಾಧುನಿಕ ಅನುಭವ ವಲಯಗಳಿರುವ ನಮ್ಮ ಮಳಿಗೆಯನ್ನು ನಾವು ಮರುಪ್ರಾರಂಭಿಸುತ್ತಿರುವ ಸಂದರ್ಭದಲ್ಲಿ ಇದು ಒಂದು ಕೌತುಕಮಯವಾದ ಹೊಸ ಅಧ್ಯಾಯವಾಗಿದೆ. ವೈಡೆಕ್ಸ್ ಆಡಿಯಾಲಜಿ ಝೋನ್, ರೀಟೇಲ್ ಸೆಟ್ಟಿಂಗ್ನಲ್ಲಿ ತನ್ನ ರೀತಿಯಲ್ಲೇ ಮೊಟ್ಟಮೊದಲನೆಯದಾಗಿದ್ದು, ಜಿಕೆಬಿ ಕಣ್ಣಿನ ಸಾಧನಗಳಿಗೆ ತರುವ ಅದೇ ವಿಶ್ವಾಸ ಹಾಗೂ ನೈಪುಣ್ಯತೆಯು ಈಗ ಆಡಿಯಾಲಜಿಗೆ ವಿಸ್ತರಗೊಂಡಿದೆ.ಇದು, ಸಾಂಪ್ರದಾಯಿಕ ಕ್ಲಿನಿಕ್ ಸೆಟ್ಅಪ್ ಆಚೆ ಸಾಗುವ ಒಂದು ವಿಶಿಷ್ಟ ಅನುಭವವನ್ನು ತರುವ ಮೂಲಕ ಬೆಂಗಳೂರಿನ ಗ್ರಾಹಕರಿಗೆ ವೈಯಕ್ತೀಕೃತ ಶ್ರವಣ ಆರೈಕೆಯು ಸುಲಭವಾಗಿ ಮತ್ತು ಅಡಚಣೆಯಿಲ್ಲದೆ ಕೈಗೆ ಸಿಗುವಂತೆ ಮಾಡಿದೆ ಎಂದರು.
ಜಿಕೆಬಿ ಸಂಸ್ಥೆಯ ಸೇಲ್ಸ್ ಮತ್ತು ಆಪರೇಶನ್ಸ್ ವಿಭಾಗದ ಹಿರಿಯ ಉಪಾಧ್ಯಕ್ಷ ಅಜಯ್ ಮಿಶ್ರ ಮಾತನಾಡಿ, ಸಮೀಪದೃಷ್ಟಿಯ ಸಂದರ್ಭಗಳು, ಅದರಲ್ಲೂ ನಿರ್ದಿಷ್ಟವಾಗಿ ಮಕ್ಕಳಲ್ಲಿ ಹಾಗೂ ಯುವ ವಯಸ್ಕರಲ್ಲಿ ಹೆಚ್ಚಾಗುತ್ತಿರುವಂತಹ ಸಂದರ್ಭದಲ್ಲಿ, ಆರಂಭಿಕ ಪತ್ತೆ ಹಾಗೂ ತಜ್ಞ ಚಿಕಿತ್ಸೆಗೆ ಬೇಡಿಕೆಯು ನಮ್ಮ ಮಯೋಪಿಯ ಕ್ಲಿನಿಕ್, ಸೂಕ್ಷ ರೋಗಪತ್ತೆ ತಂತ್ರಜ್ಞಾನಗಳು ಹಾಗೂ ವೈಯಕ್ತೀಕೃತ ನಿರ್ವಹಣಾ ತಂತ್ರಗಳನ್ನು ಸಂಯೋಜಿಸುವ ಒಂದು ನಿಪುಣ, ವಿಜ್ಞಾನ-ನಿರ್ದೇಶಿತ ದೃಷ್ಟಿಕೋನದೊಂದಿಗೆ ಈ ವಿಕಸನಗೊಳ್ಳುತ್ತಿರುವ ಪ್ರವೃತ್ತಿಯನ್ನು ಎದುರಿಸುವ ಗುರಿ ಹೊಂದಿದೆ..
ಎರಡು ದಿನಗಳ ಸಂಭ್ರಮಾಚರಣೆಯೊಂದಿಗೆ ಪರಿಚಯಗೊಂಡ ಕಾರ್ಯಕ್ರಮವು, ಕಂಟೆಟ್ ಕ್ರಿಯೇಟರ್ಸ್ ಮತ್ತು ವಿಐಪಿ ಅತಿಥಿಗಳು, ಮಯೋಪಿಯ ಜಾಗೃತಿ ಕಾರ್ಯಾಗಾರ, ಸ್ಟೆಲಿಸ್ಟ್ ಸಮಾಲೋಚನೆ, ಫೋಟೋ ಮಿರರ್ ಅನುಷ್ಠಾನ, ನೀವೇ ಮಾಡಿನೋಡಿ(DIY) ಮೊಸಾಯಿಕ್ ಮಿರರ್ ಮತ್ತು ಬ್ಲಾಕ್ ಪ್ರಿಂಟಿ ಗಳೊಂದಿಗೆ ಅಗತ್ಯಕ್ಕೆ ತಕ್ಕ ಕನ್ನಡಕ ಬಟ್ಟೆಯ ಕೇಸ್ಗಳು ಮುಂತಾದವನ್ನು ಒಳಗೊಂಡಿತ್ತು.