ಬೆಂಗಳೂರು: ಟೇಲಿಫೋನಿಕಾದ ಮುಖ್ಯಸ್ಥರು ಮತ್ತು ಸಿಇಒ ಆದ ಓಸೆ ಮರಿಯ ಆಲ್ವರಿಸ್-ಪಲೆಟ್(José Maria Álvares-Pallete), ಅವರು ಸಂಸ್ಥೆಗೆ ರಾಜೀನಾಮೆ ನೀಡಿದ ಕಾರಣದಿಂದಾಗಿ, ಭಾರ್ತಿ ಏರ್ಟೆಲ್ನ ಉಪಾಯುಕ್ತರಾದ ಹಾಗೂ ಎಂಡಿ ಮತ್ತು GSMA ದ ಡೆಪ್ಯುಟಿ ಚೇರ್ಮನ್ ಆಗಿರುವ ಗೋಪಾಲ್ ವಿಟ್ಟಲ್ ಅವರನ್ನು, GSMAದ ಪ್ರಭಾರ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. José Maria Álvares-Pallete ಅವರು ರಾಜೀನಾಮೆ ನೀಡಿದುದರಿಂದ ಅವರು GSMAದ ಚೇರ್ಮನ್ ಸ್ಥಾನದಲ್ಲಿ ಮುಂದುವರಿಯುವುದು ಸಾಧ್ಯವಾಗುವುದಿಲ್ಲ.
ಗೋಪಾಲ್ ಅವರು ಇತ್ತೀಚೆಗೆ GSMA ಮಂಡಳಿಯ ಡೆಪ್ಯುಟಿ ಚೇರ್ಮನ್ ಆಗಿ ಮರುಚುನಾಯಿತರಾಗಿದ್ದರು. ಅವರು 2019-2020 ಅವಧಿಗಾಗಿ ಮಂಡಳಿಯ ಪ್ರಮುಖ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಟೆಲಿಕಾಮ್ ಸರ್ವಿಸ್ ಪ್ರೊವೈಡರ್ಸ್, ಹ್ಯಾಂಡ್ಸೆಟ್ ಮತ್ತು ಸಾಧನ ತಯಾರಕರು, ಸಾಫ್ಟ್ವೇರ್ ಸಂಸ್ಥೆಗಳು, ಪರಿಕರ ಪ್ರೊವೈಡರ್ಗಳು ಮತ್ತು ಇಂಟರ್ನೆಟ್ ಸಂಸ್ಥೆಗಳಲ್ಲದೆ ಅದಕ್ಕೆ ಹೊಂದಿಕೊಂಡ ಉದ್ದಿಮೆ ಕ್ಷೇತ್ರಗಳ ಸಂಸ್ಥೆಗಳೂ ಒಳಗೊಂಡಂತೆ, ಜಗತ್ತಿನಾದ್ಯಂತ ಇರುವ ದೂರಸಂಪರ್ಕ(ಟೆಲಿಕಾಮ್) ಪರಿಸರವ್ಯವಸ್ಥೆಯ 1100 ಹೆಚ್ಚಿನ ಸಂಸ್ಥೆಗಳಿರುವ ಜಾಗತಿಕ ದೂರಸಂವಹ ಉದ್ದಿಮೆಯನ್ನು GSMA ಪ್ರತಿನಿಧಿಸುತ್ತದೆ.