ಬೆಂಗಳೂರು: ವೈದ್ಯಕೀಯ ಕ್ಷೇತ್ರದಲ್ಲಿ ನಮ್ಮ ರಾಜ್ಯ ವಿಶೇಷತೆ ಮೆರೆದಿದ್ದು ಬೇರೆ ಬೇರೆ ರಾಜ್ಯಗಳಿಂದ ರೋಗಿಗಳು ಕರ್ನಾಟಕಕ್ಕೆ ಬರುತ್ತಿರುವುದೇ ಇಲ್ಲಿನ ಆಸ್ಪತ್ರೆಗಳ ಚಿಕಿತ್ಸೆ ಗುಣಮಟ್ಟ ತಿಳಿಯುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ರಾಜ್ಯ ಶಾಖೆಯಿಂದ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಹಳೆ ವಿದ್ಯಾರ್ಥಿಗಳ ಸಂಘದಲ್ಲಿ ಅಂತರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು,
ರಾಜ್ಯಕ್ಕೆ ಅನೇಕ ರಾಜ್ಯಗಳಿಂದ ಚಿಕಿತ್ಸೆಗಾಗಿ ನಮ್ಮ ರಾಜ್ಯಕ್ಕೆ ಬರುತ್ತೀದ್ದಾರೆ. ಗುಣಮಟ್ಟದ ಚಿಕಿತ್ಸೆ ಸಿಗುತ್ತದೆ ಎಂಬ ನಿಟ್ಟಿನಲ್ಲಿ ರೋಗಿಗಳು ಕರ್ನಾಟಕಕ್ಕೆ ಬರುತ್ತಾರೆ.
ಅಧಿಕಾರಿಗಳ ಜೊತೆ ಸಮಾಲೋಚನೆ ಮಾಡಿಕೊಂಡು ಪ್ರತಿ ಗ್ರಾಮದಲ್ಲಿ ವೈದ್ಯರು ಎಲ್ಲಾರಿಗು ಬೇಕಾಗುತ್ತಾರೆ. ಗ್ರಾಮಾಂತರ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರಿಗೆ ಸರಕಾರದಿಂದ ಬೇಕಾಗುವ ಸವಲತ್ತು ನೀಡಲಾಗುತ್ತದೆ. ಕರ್ತವ್ಯದಲ್ಲಿದ್ದಾಗ ಸಾರ್ವಜನಿಕರಿಂದ ಅಥವಾ ರೋಗಿಗಳಿಂದ ವೈದ್ಯರಿಗೆ ಆಗುವ ಸಮಸ್ಯೆಗಳ ಬಗ್ಗೆ ಕಠಿಣವಾದಂತ ಕಾನೂನು ಜಾರಿಯಲ್ಲಿದ್ದು ಆರೋಪ ಸಾಬೀತಾದರೆ ಕಾನೂನು ರೀತಿ ಕ್ರಮ ಕೈಗೊಳ್ಳುವ ಅವಕಾಶ ಇದೆ.ವೈದ್ಯರಿಗೆ ವಿರುದ್ದ ನಡೆದುಕೊಳುವವರಿಗೆ ತಕ್ಕ ಶಾಸ್ತಿ ಆಗುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ಕೆಪಿಎನ್ ನೊಂದಾವಣೆ ಮಾಡಿಕೊಳ್ಳುವುದು ಸಾಕಷ್ಟು ಕಷ್ಟದ ಕೆಲಸವಾಗುತ್ತಿದೆ. ಅದನ್ನು ಸರಕಾರ ಸರಳೀಕರಣ ಗೊಳಿಸುವ ಯೋಚನೆ ಮಾಡಲಾಗುತ್ತದೆ. ಆರೋಗ್ಯ ಸಂಸ್ಥೆಗಳನ್ನು ನಡೆಸಲು ನೋಂದಾವಣೆ ಮುಖ್ಯವಾಗಿತ್ತು, ಇಲ್ಲದಿದ್ದರೆ ಸಂಸ್ಥೆ ನಡೆಸಲು ಸಾದ್ಯವಿಲ್ಲ ಎಂದರು.
ಆರೋಗ್ಯ ಸಂಸ್ಥೆಗಳಲ್ಲಿ ಅಗ್ನಿ ಅನಾಹುತ ತಡೆಗಟ್ಟುವ ವಿಚಾರವಾಗಿ ಸರಕಾರ ಸಂಬಂಧ ಪಟ್ಟ ಇಲಾಖೆ ಜೊತೆ ಸಮಾಲೋಚನೆ ನಡೆಸಿ ಮುಂದಿನ ದಿನಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ, ಅಗ್ನಿಶಾಮಕ ದಳ ಆರೋಗ್ಯ ಇಲಾಖೆಗೆ ಒಳಪಡುವುದಿಲ್ಲ ಹೀಗಾಗಿ ಅದರ ನಾರ್ಮ್ಸ್ ಮಾಡಲಾಗುತ್ತದೆ. ಅದಕ್ಕೆ ಸೂಕ್ತ ಕಾನೂನು ತರಲಾಗುತ್ತದೆ ಎಂದು ತಿಳಿಸಿದರು.
ಈ ಭಾರಿ 14 ಜನ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕ ವೈದ್ಯರಿಗೆ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇಂತಹ ಕೆಲಸಗಳನ್ನು ಮಾಡುವುದರಿಂದ ವೈದ್ಯರಿಗೆ ಮತ್ತಷ್ಟು ಕೆಲಸ ಮಾಡಲು ಸಾಧ್ಯವಾಗುತ್ತದೆ ಅದರ ಜೊತೆಗೆ ಪ್ರಶಸ್ತಿಯ ಮೌಲ್ಯ ಹಾಗೂ ಪುರಸ್ಕೃತರಿಗೆ ಗೌರವ ಹೆಚ್ಚಾಗುತ್ತದೆ ಎಂದರು.
ಬಾಣಂತಿಯರ ಮರಣ ಮೃದಂಗ ಸಾಕಷ್ಟು ವ್ಯಾಪಕವಾಗಿ ಹರಡುತ್ತಿದ್ದು ಅದಕ್ಕೆ ಸರ್ಕಾರ ಆರೋಗ್ಯ ಇಲಾಖೆಗೆ ಸೂಕ್ತ ನಿರ್ದೇಶನಗಳನ್ನು ಜಾರಿ ಮಾಡಿದೆ ಹೀಗಾಗಿ ಇತ್ತೀಚಿನ ದಿನಗಳಲ್ಲಿ ಅದರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ. ಅದನ್ನು ಶೂನ್ಯಕ್ಕೆ ತರಬೇಕೆಂಬುದು ನಮ್ಮ ಅಭಿಲಾಷೆಯಾಗಿದೆ ಎಂದರು. ಮಾರಕ ರೊಗಗಳನ್ನು ತಡೆಗಟ್ಟುವ ಕ್ರಮ ಕೇವಲ ವೈದ್ಯರೂ ಅಲ್ಲದೆ ಸಾರ್ವಜನಿಕರು ಇದರಲ್ಲಿ ಕೈಜೋಡಿಸಬೇಕಾಗುತ್ತದೆ. ಐಎಂಎ ಸಾಕಷ್ಟು ಜನ ಉಪಯೋಗಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ, ಸರ್ಕಾರದ ಜೊತೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತದೆ. ಹೀಗಾಗಿ ಐಎಂಎ ಜೊತೆ ಸರಕಾರ ಸದಾ ಇರುತ್ತದೆ ಎಂದರು.
ವೈದ್ಯರ ಮೇಲಿನ ದಬ್ಬಾಳಿಕೆ: ಸರ್ಕಾರ ಶಿಸ್ತು ಕ್ರಮಕ್ಕೆ ಸೂಚನೆ
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾನೂನು ಆಯೋಗದ ಅಧ್ಯಕ್ಷರಾದ ಡಾ. ನ್ಯಾಯಮೂರ್ತಿ ಅಶೋಕ್ ಬಿ ಹಿಂಚಿಗೇರಿ ಮಾತನಾಡಿ, ಬಿಸಿ ರಾಯ್ ಅವರ ಸವಿ ನೆನಪಿನಲ್ಲಿ ಆಚರಣೆಯನ್ನು ರಾಷ್ಟ್ರಮಟ್ಟದಲ್ಲಿ ಆಚರಿಸಿಕೊಂಡು ಬರುತ್ತಿರುವುದು ಅವರ ಸಾಧನೆಗೆ ಸ್ಫೂರ್ತಿಯಾಗಿದೆ, ಪಶ್ಚಿಮ ಬಂಗಾಳದ ಸಿಎಂ ಆಗಿದ್ದರು. ಆಗ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ. ಅದರಲ್ಲೂ ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಾನೂನು ರೀತಿ ಎಲ್ಲವನ್ನು ಸಚಿವರು ಮಾಡುತ್ತಿದ್ದಾರೆ. ಅದು ಹೆಮ್ಮೆಯ ಸಂಗತಿಯಾಗಿದೆ. ವೈದ್ಯರು ಏಕೆ ಬೇಗ ಮರಣ ಹೊಂದುತ್ತಿದ್ದಾರೆ ಗೊತ್ತ? ಅದಕ್ಕೆ ಪ್ರಮುಖ ಕಾರಣ ಸರಿಯಾದ ಸಮಯಕ್ಕೆ ಊಟ, ನಿದ್ದೆ, ವಿಶ್ರಾಂತಿ ಕೊರತೆ ಎದ್ದು ಕಾಣುತ್ತಿದೆ ಎಂದು ತಿಳಿಸಿದರು. ಹೀಗಾಗಿ ಅವರಿಗೆ ಒತ್ತಡವು ಪ್ರಮುಖ ಕಾರಣವಾಗಿದೆ ಎಂದರು.
ಪ್ರತಿನಿತ್ಯ ವೈದ್ಯರು ದೈಹಿಕವಾಗಿ ಹಿಂಸೆ ಅನುಭವಿಸುತ್ತಿದ್ದಾರೆ. ಅದಕ್ಕೆ ಉಚ್ಚ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ, ತಾಜ ಉದಾಹರಣೆ ಎಂದರೆ ಕಲ್ಕತ್ತಾ ಪ್ರಕರಣ ಸಾಕ್ಷಿಯಾಗಿದೆ. ವೈದ್ಯರ ಮೇಲೂ ಸಾಕಷ್ಟು ಪ್ರಕರಣಗಳು ಆಗುತ್ತಿರುವುದನ್ನು ನೊಡಬಹುದು. ಅದಕ್ಕೆ ತೀರ್ವ ತರ ಶಿಕ್ಷೆಯಾಗುತ್ತಿವೆ.
ಭಾರತೀಯ ನ್ಯಾಯ ಸಂಹಿತ ಪ್ರಕಾರ ಅಂತಹವರಿಗೆ ಜಾಮೀನು ರಹಿತ ಶಿಕ್ಷೆಗೆ ಒಳಪಡುತ್ತಾರೆ. ಕೆಪಿಎಂ ನೋಂದವಣಿ ಮಾಡಿಸುವುದು ಕಷ್ಟವಾಗುತ್ತಿದೆ. ಸರಕಾರದ ಪಾಲಿಸಿಗಳನ್ನು ಜರೂರಾಗಿ ತರಬೆಕಾಗಿದೆ. ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ಶಾಖೆ ಪ್ರೀತಿಗೆ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ವೈದ್ಯರನ್ನು ಗುರುತಿಸಿ ಸನ್ಮಾನ ಮಾಡುತ್ತಿರುವುದು ಪ್ರಯಾಸ್ತಿಯ ಮೌಲ್ಯ ಹಾಗೂ ಸಾಧಕರಿಗೆ ಹೆಚ್ಚಿನ ಗೌರವ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ಹಾಗೂ ವಿಧಾನಸಭಾ ಸದಸ್ಯರು ಹಾಗೂ ನೇತೃ ತಜ್ಞರಾದ ಡಾ.ಎನ್ಟಿ ಶ್ರೀನಿವಾಸ್ , ಐಎಂಎ ಅಧ್ಯಕ್ಷ ಡಾ. ವಿವಿ ಚಿನಿವಾಲರ, ಡಾ. ಟಿ ಎ ವೀರಭದ್ರಯ್ಯ, ರಾಜ್ಯ ಕಾರ್ಯದರ್ಶಿ ಹಾಗೂ ರೀಗಲ್ ಆಸ್ಪತ್ರೆಯ ಸಿಇಓ ಡಾ. ಸೂರಿರಾಜು, ಸೇರಿದಂತೆ ಸಂಘದ ಪದಾಧಿಕಾರಿಗಳು ಅನೇಕ ವೈದ್ಯರು ಈ ಒಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.