ಬೆಂಗಳೂರು : ಬೆಂಗಳೂರು ಉತ್ತರದಿಂದ ಬಿಎಸ್ಪಿ ಪಕ್ಷದ ಪಕ್ಷೇತರ ಅಭ್ಯರ್ಥಿಯಾಗಿ ಗೋವಿಂದಯ್ಯ ಅವರು ಕಂದಾಯ ಭವನದಲ್ಲಿ ಜಿಲ್ಲಾಧಿಕಾರಿ ದಯಾನಂದ ಅವರಿಗೆ ನಾಮಪತ್ರವನ್ನು ಸಲ್ಲಿಸಿದರು.
ಗೋವಿಂದಯ್ಯ ಅವರು ನಾಮಪತ್ರ ಸಲ್ಲಿಸುವ ವೇಳೆ ಸರಳವಾಗಿ ಕಚೇರಿಗೆ ತೆರಳಿ ತಮ್ಮ ದಾಖಲೆಗಳನ್ನು ನೀಡಿದರು, ನಂತರ ಮಾತನಾಡಿದ ಅವರು, ಬಿ ಎಸ್ ಪಿ ಪಕ್ಷದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಜಿಲ್ಲಾ ಅಧ್ಯಕ್ಷನಾಗಿ ಸಾಕಷ್ಟು ಕಾರ್ಯವನ್ನು ನಿರ್ವಹಿಸಿದ್ದೇನೆ, ಅಲ್ಲದೆ ಪಕ್ಷ ಸಂಘಟನೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.
ಬಿಜೆಪಿಯಿಂದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಕುಮಾರಿ ಶೋಭಾ ಕರಂದ್ಲಾಜೆಯವರು ಸ್ಪರ್ಧೆ ಮಾಡಿದ್ದು ಈ ಹಿಂದೆ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದರಾಗಿದ್ದರು. ಈ ಬಾರಿ ಅವರಿಗೆ ಟಿಕೆಟ್ ನೀಡದೆ ಬಿಜೆಪಿಯವರು ಬೆಂಗಳೂರು ಉತ್ತರಕ್ಕೆ ಟಿಕೆಟ್ ನೀಡಿರುವುದು ಯಾವ ಪುರುಷಾರ್ಥಕ್ಕಾಗಿ ಎಂಬುದು ಗೊತ್ತಾಗಿಲ್ಲ, ಶೋಭಾ ಕರಂದ್ಲಾಜೆ ಅವರಿಗೆ ತಮ್ಮ ತವರು ಕ್ಷೇತ್ರವನ್ನು ಬಿಟ್ಟು ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಟಿಕೆಟ್ ನೀಡಿರುವುದು ಗೆಲ್ಲುವ ಅನುಮಾನ ನೂರಕ್ಕೆ ನೂರು ಸುಳ್ಳು ಎಂದು ತಿಳಿಸಿದರು ಅವರು ಯಾವುದೇ ಕೆಲಸ ಕಾರ್ಯಗಳನ್ನು ಮಾಡಿಲ್ಲ ಅವರ ಮೇಲೆ ಸಾಕಷ್ಟು ಹಗರಣಗಳು ಅವರ ಮೇಲೆ ಇದೆ ಎಂದು ತಿಳಿಸಿದರು.
ಈ ಬಾರಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ನಾನು ಅಲ್ಲೇ ಹುಟ್ಟಿ ಬೆಳೆದಿರುವ ಕಾರಣ ಅಲ್ಲಿನ ಎಲ್ಲಾ ಜನರಿಗೂ ಸಹ ನಾನು ಚಿರಪರಿಚಿತ ನಾಗಿದ್ದೇನೆ ಹಾಗೆ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದೇನೆ, ಹೀಗಾಗಿ ಈ ಬಾರಿ ಕ್ಷೇತ್ರದ ಜನ ನನ್ನನ್ನು ಕೈಬಿಡುವುದಿಲ್ಲ, ಅವರ ನಂಬಿಕೆಯಿಂದ ಸ್ಪರ್ಧೆ ಮಾಡಿದ್ದೇನೆ ಎಂದು ತಿಳಿಸಿದರು.
ಇನ್ನು ನಾಮಪತ್ರ ಸಲ್ಲಿಸಬೇಡಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಧ್ಯಕ್ಷರಾಗಿರುವ ಗೋವಿಂದಯ್ಯ ಅವರ ಜೊತೆಗೆ ಪಕ್ಷದ ಪದಾಧಿಕಾರಿಗಳು ಕಾರ್ಯದರ್ಶಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.