ಬೆಂಗಳೂರು: pes ಕಾಲೇಜಿನಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿರುವ ಆದಿತ್ಯ ಶ್ರೀಕಾಕುಳ್ಳಂ ಅವರು ಪಠ್ಯದ ಜೊತೆಗೆ ಪಠ್ಯತರ ಚಟುವಟಿಕೆಗಳಲ್ಲಿ ತೊಡೆದುಕೊಂಡು ಹಲೋ ಗಿನ್ನಿಸ್ ದಾಖಲೆಗಳನ್ನ ಮಾಡಿರುವುದು , ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ.
ಮುಂಗಾಲಿನಲ್ಲಿ ಪೋಲೋಬಾಲ್ ನಲ್ಲಿ 1 ನಿಮಿಷದಲ್ಲಿ ಈ ಹಿಂದೆ 125 ಟಚ್ ಮಾಡುವ ಮೂಲಕ ದಾಖಲೆಯನ್ನು ಮಾಡಲಾಗಿತ್ತು, ಇದೀಗ ಆದಿತ್ಯ 200 ಟಚ್ ಮಾಡಿ ದಾಖಲೆ ಮುರಿದಿದ್ದಾರೆ. ಅದೇ ರೀತಿ ಟೆಕ್ರೋ ಬಾಲ್ ನಲ್ಲಿ 30 ಸೆಕೆಂಡ್ ನಲ್ಲಿ ಈ ಹಿಂದೆ 127 ಆಗಿತ್ತು ಅದನ್ನು 150 ಮಾಡಿದ್ದಾರೆ.
ಈಗಾಗಲೇ ಆದಿತ್ಯ ಅವರು 3 ದಾಖಲೆ ಗಳನ್ನ ಮುರಿದಿದ್ದಾರೆ, ಅದರಲ್ಲಿ ಆಲ್ಟರ್ನೇಟಿವ್ ಬಾಲ್ ನಲ್ಲಿ 1 ನಿಮಿಷಕ್ಕೆ ಮತ್ತು ಸ್ಟೆಪ್ಪರ್ ಟ್ರಿಕ್ಸ್ 30 ಸೆಕೆಂಡ್ ನಲ್ಲಿ ದಾಖಲೆ ಮಾಡಿದ್ದಾರೆ.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಗಾಗೋಷ್ಠಿಯಲ್ಲಿ ಮಾತನಾಡಿದವರು, ತಮ್ಮ ಅನುಭವವನ್ನು ಹಂಚಿಕೊಂಡರು, ದಾಖಲೆಗಳನ್ನೆಲ್ಲ ಮುರಿಯಲು ಹೇಗೆಲ್ಲಾ ತಯಾರು ಮಾಡಿಕೊಳ್ಳಲಾಗಿತ್ತು ಎಂಬುದರ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಹಂಚಿಕೊಂಡರು. ಇದೀಗ ಮೂರನೇ ಗೆನ್ನಿಸ್ ವಿಶ್ವ ದಾಖಲೆ ಮಾಡಲು ಗುರಿಯನ್ನು ಇಟ್ಟುಕೊಂಡಿದ್ದಾರೆ. ಅದಕ್ಕೆ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರೆ, ಅದಕ್ಕೆ ಅವರ ತಂದೆ ವಿಜಯ ಹಾಗೂ ತರಬೇತಿದಾರ ದಾಖಲೆ ಮುರಿಯಲು ಆದಿತ್ಯ ಅವರಿಗೆ ಸಾಕಷ್ಟು ಶ್ರಮಿಸುತ್ತಿರುವುದನ್ನು ನೋಡಬಹುದಾಗಿದೆ.