ಬೆಂಗಳೂರು: ಹಾಲ್ಕೊ ಹಾಲಿಕ್ಸ್ ಅನಾನಿಮಸ್ ಕೆಎಸಿ 1 ಕರ್ನಾಟಕ ಏರಿಯಾ ಸಂಸ್ಥೆಯ 61ನೇ ವಾರ್ಷಿಕೋತ್ಸವ ಸಮಾರಂಭವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ಬೆಂಗಳೂರಿನ ಬನ್ನೇರುಘಟ್ಟ ರಸ್ಥೆಯ ಕಾರ್ಮೆಲ್ ಕಾನ್ವೆಂಟ್ ನಲ್ಲಿ ನಡೆದ ವಾರ್ಷಿಕೋತ್ಸವದಲ್ಲಿ ಸಂಸ್ಥೆಯ ಮುಖ್ಯಸ್ಥರು, ಪೊಲೀಸ್ ಅಧಿಕಾರಿ ಅರುಣ್ ಚಕ್ರವರ್ತಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮ.
ನಂತರ ಅವರು ಮಾತನಾಡಿ, ರಾಜ್ಯ ದೇಶದಲ್ಲಿ ಮಧ್ಯ ವ್ಯಸನದಿಂದ ಲಕ್ಷಾಂತರ ಮಂದಿ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಕುಡಿತದಿಂದ ಅದೆಸ್ಟೊ ಕುಟುಂಬಗಳು ಬೀದಿಗೆ ಬಂದಿವೆ. ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆರ್ಥಿಕವಾಗಿ ದುರ್ಬಲರಾಗುತ್ತಿದ್ದಾರೆ. ನಶೆಯಿಂದ ಹೇಗೆ ಹೊರಬರಬೇಕು ಎಂಬುದರ ಬಗ್ಗೆ ಕೌನ್ಸ್ ಲಿಂಗ್ ಮಾಡಲಾಗುತ್ತದೆ.
ದುಶ್ಚಟಗಳಿಗೆ ದಾಸನಾಗಿರುವನನ್ನ ಸಮಾಜ ಮುಖ್ಯವಾಹಿನಿಗೆ ತರುವ ಕೆಲಸವನ್ನು ಸಂಸ್ಥೆ ಮಾಡುತ್ತದೆ. ಇಲ್ಲಿ ವ್ಯಸನಿಗಳ ಹೆಸರು,ವಿಳಾಸ, ಸಂಬಂಧಿಗಳನ್ನು ಎಲ್ಲಿಯೂ ಬಳಸುವುದಿಲ್ಲ. ಗೌಪ್ಯವಾಗಿ ಇಡಲಾಗುತ್ತದೆ ಎಂದರು.
61ವರ್ಷದ ಸಂಭ್ರಮಾಚರಣೆಯನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡು ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ ದುಶ್ಚಟಕಗಕೆ ದಾಸರಾಗಿರುವವರು ಸಲಹೆಗಳನ್ನು ಪಡೆದುಕೊಂಡರು.
ಮಧ್ಯವ್ಯಸನದಿಂದ ದೂರವಾಗುವ ದೂರವಾಗುವ, ಸಮಸ್ಯೆಯಿಂದ ಹೇಗೆಲ್ಲ ಹೊರಬರಬೇಕು ಎಂಬುದರ ಬಗ್ಗೆ ಮಾರ್ಗದರ್ಶನ ಕೊಡಲಾಗುತ್ತದೆ. 9845587507 ದೂರವಾಣಿಗೆ ಕರೆ ಮಾಡಿ ಸಹಾಯ ಕೇಳಬಹುದು, ಇದು ಉಚಿತವಾಗಿದೆ. ಅಲ್ಲದೆ info@aabengaluru.org, www.aabengaluru.org, AA bengaluru App ಗೆ ಬೇಟಿ ನೀಡಿ ತಿಳಿದುಕೊಳ್ಳಬಹುದು.