ಬೆಂಗಳೂರು: ಹೈಕೋರ್ಟ್ ಸಂಕೀರ್ಣದಲ್ಲಿ ಕೇಂದ್ರ ಸರ್ಕಾರದ ವಕೀಲರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರಿ ವಕೀಲರಾದ ಮೋಹನ್ ಕುಮಾರ್ ದಾನಪ್ಪನವರ ಸಾಮಾಜಿಕ ಮತ್ತು ಕ್ರೀಡಾ ಕ್ಷೇತ್ರದ ಸಾಧನೆಯನ್ನ ಪರಿಗಣಿಸಿ harward book of world record ಪ್ರಮಾಣ ಪತ್ರ ಪ್ರದಾನ ಮಾಡಿದರು.
ಸಾಮಾಜಿಕ, ಕ್ರೀಡೆಯಲ್ಲಿ ನ ಸಾಧನೆಯನ್ನು ಗುರುತಿಸಿ ಹೈ ಕೋರ್ಟ್ ನ್ಯಾಯಾಧೀಶರಾದ ಆರ್.ನಟರಾಜ್ ರವರು, ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್, ಭಾರತದ ಅಪರ ಸಾಲಿಸಿಟರ್ ಜನರಲ್ ಹೆಚ್. ಶಾಂತಿ ಭೂಷಣ್ ರವರು ಸನ್ಮಾನಿಸಿ ಹಾರ್ವರ್ಡ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪ್ರಮಾಣ ಪತ್ರ ಪ್ರಧಾನ ಮಾಡಿದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಲಿ ಎಂದು ಆಶಿಸಿದರು.
ಕಳೆದ 3-4 ವರ್ಷಗಳಿಂದ ಸಾಮಾಜಿಕ ಸಮಸ್ಯೆಗಳ ಜಾಗೃತಿಗಾಗಿ ವಿನೂತನ ಮ್ಯಾರಥಾನ್ ಮಾಡುವ ಮೂಲಕ ದೇಶದ ಗಮನ ಸೆಳೆದು ಹಲವಾರು ದಾಖಲೆಗಳನ್ನ ಮಾಡಿರುವುದನ್ನ ಪ್ರಶಂಸಿಸಿ ಸನ್ಮಾನಿಸಿದರು, ನಂತರ ಇತ್ತೀಚಿಗೆ ಯುವಕರು ದೇಶ ಸೇವೆಗೆ ಸೇನೆ ಸೇರುವಂತೆ ಜಾಗೃತಿಗಾಗಿ ಕಾರ್ಗಿಲ್ ನಲ್ಲಿ ನಡೆಸಿದ ಮ್ಯಾರಥಾನ್ ಓಟವು ಹಾರ್ವರ್ಡ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ದಾಖಲೆಯಾಗಿದ್ದು, ಸದರಿ ದಾಖಲೆಯ ಪ್ರಮಾಣಪತ್ರ ಮತ್ತು ಪದಕವನ್ನ ಪ್ರಧಾನ ಮಾಡಿದರು.
ಈ ಸಂಧರ್ಭದಲ್ಲಿ ಹೆಚ್ಚುವರಿ ಕೇಂದ್ರ ಸರ್ಕಾರಿ ವಕೀಲರು ಹಾಗೂ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯದ ಕರ್ನಾಟಕ ಉಸ್ತುವಾರಿ ಕೆ. ಸುದರ್ಶನ್,ಕರ್ನಾಟಕ ಸರ್ಕಾರದ ಹೆಚ್ಚುವರಿ ಅಡ್ವೋಕೇಟ್ ಜನರಲ್ ವೈ. ಹೆಚ್. ವಿಜಯ್ ಕುಮಾರ್, ಕೇಂದ್ರ ಸರ್ಕಾರದ ಹಿರಿಯ ವಕೀಲರಾದ ಮಧುಕರ್ ದೇಶಪಾಂಡೆ, ಕೇಂದ್ರ ಸರ್ಕಾರದ ವಕೀಲರಾದ ಜಗದೀಶ್ ಕುಂಬಾರ್, ಎಂ.ಎನ್. ಕುಮಾರ್. ಸ್ವಾತಿ ಪಾಂಡುರಂಗ, ನಾಗೇಂದ್ರ ಸೇರಿದಂತೆ ಹೈ ಕೋರ್ಟ್ ನ ಎಲ್ಲ ಕೇಂದ್ರ ಸರ್ಕಾರಿ ವಕೀಲರುಗಳು ಪಾಲ್ಗೊಂಡಿದ್ದರು!