ಬೆಂಗಳೂರು: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಆರ್ ವಿ ದೇವರಾಜ್ ಅವರ ಹುಟ್ಟುಹಬ್ಬದ ಸಂಭ್ರಮವನ್ನು ಕುಟುಂಬದವರು ವಿಶೇಷವಾಗಿ ಆಚರಿಸಿದರು.
ಜೆಸಿ ರಸ್ತೆಯಲ್ಲಿನ ಕಾಂಗ್ರೆಸ್ ಕಚೇರಿಯ ಆವರಣದಲ್ಲಿ ಆರ್ ವಿ ದೇವರಾಜ್ ಅವರ 66ನೇ ವರ್ಷದ ಹುಟ್ಟುಹಬ್ಬದ ಸಂಭ್ರಮವನ್ನು ದೀಪ ಬೆಳಗುವ ಮೂಲಕ ಆರ್ ವಿ ದೇವರಾಜ್ ಕುಟುಂಬಸ್ಥರು ವಿಭಿನ್ನವಾಗಿ ಆಚರಣೆ ಮಾಡಿದರು.
ಆರ್ ವಿ ದೇವರಾಜ್ ಅವರ ಬರ್ತಡೆ ಹಿನ್ನೆಲೆ ಪತ್ನಿ ಆರ್ ವಿ ಮಾಮತಾ ದೇವರಾಜ್ ಅವರು ಕಚೇರಿಯ ಆವರಣದಲ್ಲಿ ಪ್ರಾದೇಶಿಕ ನೇತ್ರ ಚಿಕಿತ್ಸಾ ಸಂಸ್ಥೆ ಮಿಂಟೋ ಕಣ್ಣಿನ ಆಸ್ಪತ್ರೆಯ ಸಹಯೋಗದಿಂದ ಉಚಿತ ಕಣ್ಣಿನ ತಪಾಸಣೆ ಶಿಬಿರ ನಡೆಸಲಾಯಿತು, ಆರೋಗ್ಯ ಶಿಬಿರ, ರಕ್ತ ದಾನ ಶಿಬಿರ ಸೇರಿ ಇನ್ನಿತರೆ ಸಮಾಜ ಮುಖಿ ಕೆಲಸವನ್ನು ಹಮ್ಮಿಕೊಳ್ಳಲಾಗಿತ್ತು.
ಇನ್ನು ಕಾರ್ಯಕ್ರಮದಲ್ಲಿ ಆರ್ ವಿ ದೇವರಾಜ್ ಪುತ್ರ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ಆರ್ ವಿ ಯುವರಾಜ್ ಭಾಗವಹಿಸಿ ತಂದೆಯ ಹುಟ್ಟುಹಬ್ಬ ಬಗ್ಗೆ ಮಾತನಾಡಿ, ನಮ್ಮ ತಂದೆ ಕೆಲಸ ಕಾರ್ಯಗಳು, ಕೇವಲ ರಾಜಕೀಯದಿಂದ ಮಾತ್ರವಲ್ಲದೆ ಸಮಾಜ ಸೇವಕನಾಗಿ ಜನರ ಕಷ್ಟ ಸುಖಗಳನ್ನು ಆಲಿಸಿ ಮತ್ತಷ್ಟು ಜನರ ಸೇವೆ ಮಾಡುವ ಅವಕಾಶ ಸಿಗಲಿ, ಮುಂದಿನದಿನಗಳಲ್ಲಿ ಬೇರೆ ಬೇರೆ ಕೆಲ್ಸಗಳನ್ನು ಮಾಡಿಕೊಂಡು ಹೋಗಲಾಗುತ್ತದೆ ಎಂದು ತಿಳಿಸಿದರು.
ಹುಟ್ಟುಹಬ್ಬದ ಹಿನ್ನೆಲೆ ನಡೆಯುತ್ತಿರುವ ಆರೋಗ್ಯ ಶಿಬಿರ ಜನರಿಗೆ ಅನುಕೂಲವಾಗಲಿ, ಪ್ರತಿಭಾರಿ ಜನರೇ ಬರ್ತಡೆ ಆಚರಣೆ ಮಾಡುತ್ತಿದ್ದರು, ಆದರೆ ಈ ಭಾರಿ ನಾವೇ ಮುಂದೆ ನಿಂತು ಆರೋಗ್ಯ ತಪಾಸಣೆ ಶಿಬಿರ ನಡೆಸಿ, ಜನರಿಗೆ ಅನುಕೂಲವಾಗಲಿ ಎಂದು ಆಶಿಸಿದರು. ಇದು ಕೇವಲ ಒಂದು ದಿನಕ್ಕೆ ಸೀಮಿತವಲ್ಲ ನಿರಂತರವಾಗಿ ಮಾಡಿಕೊಂಡು ಹೋಗಲಾಗುತ್ತದೆ ಎಂದು ತಿಳಿಸಿ ಮತ್ತೊಮ್ಮೆ ನಾಯಕರಾದ ಆರ್ ವಿ ದೇವರಾಜ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಆರ್ ವಿ ದೇವರಾಜ್ ಅವರ ಕುಟುಂಬ ವರ್ಗ, ಬಂದು ಬಳಗ, ಸಾರ್ವಜನಿಕರು ಭಾಗಿಯಾಗಿ ಯಶಸ್ವಿಗೊಳಿಸಿದರು.