ಬೆಂಗಳೂರು: ನಗರದ ಪೂರ್ವ ವಲಯದಲ್ಲಿ ಪಾಲಿಕೆಯ ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಆರೋಗ್ಯ ತಪಾಸಣಾ ಶಿಬಿರವನ್ನು ವಲಯ ಆಯುಕ್ತೆಯಾದ ಶ್ರೀಮತಿ ಸ್ನೇಹಲ್ ರವರ ನೇತೃತ್ವದಲ್ಲಿ ಇಂದು ಯಶಸ್ವಿಯಾಗಿ ನಡೆಸಲಾಯಿತು.
ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಧುಮೇಹ, ರಕ್ತದೊತ್ತಡ, ಕಣ್ಣಿನ ದೃಷ್ಟಿ ಪರೀಕ್ಷೆ, ಸ್ತ್ರೀ ರೋಗ ತಪಾಸಣೇ, ಚರ್ಮ ರೋಗ ತಪಾಸಣೆ, ಸಾಮಾನ್ಯ ಆರೋಗ್ಯ ತಪಾಸಣೆ, ದಂತ ವೈದ್ಯಕೀಯ ಪರೀಕ್ಷೆ, ಮೂಳೆ ರೋಗ ಚಿಕಿತ್ಸೆ ಹಾಗೂ ಇನ್ನಿತರೆ ತಪಾಸಣೆ ಕೈಗೊಳ್ಳಲಾಯಿತು.
ಆರೋಗ್ಯ ತಪಾಸಣಾ ಶಿಬಿರದಲ್ಲಿ ಸುಮಾರು 200ಕ್ಕೂ ಹೆಚ್ಚು ಅಧಿಕಾರಿ/ಸಿಬ್ಬಂದಿಗಳು ತಪಾಸಣೆಗೆ ಒಳಪಟ್ಟಿರುತ್ತಾರೆ ಹಾಗೂ ಸುಮಾರು 20 ಯೂನಿಟ್ ರಕ್ತದಾನ ಮಾಡಿರುತ್ತಾರೆ.
ಆರೋಗ್ಯ ತಪಾಸಣೆ ಶಿಬಿರದಲ್ಲಿ ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಆಸ್ಪತ್ರೆಗಳಾದ ಸೆ. ಫಿಲೋಮಿನಾ ಆಸ್ಪತ್ರೆ, ಹೊಸ್ಮಠ್ ಆಸ್ಪತ್ರೆ, ಸರ್. ಸಿ.ವಿ ರಾಮನ್ ಆಸ್ಪತ್ರೆ, ಆಸ್ಟರ್ ಆಸ್ಪತ್ರೆ ಹಾಗೂ ನಾರಾಯಣ ನೇತ್ರಾಲಯ ಭಾಗವಹಿಸಿರುತ್ತಾರೆ.
ಶಿಬಿರದಲ್ಲಿ ವಲಯ ವಲಯ ಆರೋಗ್ಯಾಧಿಕಾರಿಯಾದ ಭಾಗ್ಯಲಕ್ಷ್ಮಿ, ಎಲ್ಲಾ ಆರೋಗ್ಯ ವೈದ್ಯಾಧಿಕಾರಿಗಳು, ಹೆಲ್ತ್ ಸೂಪರ್ವೈಸರ್, ಹಿರಿಯ ಆರೋಗ್ಯ ಪರಿವೀಕ್ಷಕರುಗಳು ಸೇರಿದಂತೆ ಇನ್ನಿತರರು ಹಾಜರಿದ್ದರು.