ಬೆಂಗಳೂರು:ಕಿಡ್ನಿ ವೈಫಲ್ಯ ಮತ್ತು ಕ್ಯಾನ್ಸರ್ನಂತಹ ಮಾರಣಾಂತಿಕ ರೋಗಗಳಿಗೆ ಹೋಮಿಯೋಪತಿ ಚಿಕಿತ್ಸೆ ನೀಡುವಲ್ಲಿ ಇದರ ಪ್ರಾಮುಖ್ಯತೆ ಬಹಳ ಇದೆ, ಕ್ಯಾನ್ಸರ್ ರೋಗಿಗಳು ಹೆಚ್ಚು ಕಾಲ ಬದುಕಲು ಹೋಮಿಯೊಪತಿ ಸಹಾಯ ಮಾಡಬಹುದು ಎಂದು ಹಿರಿಯ ಹೋಮಿಯೋಪತಿ ವೈದ್ಯ, ಪದ್ಮಶ್ರೀ ಪುರಸ್ಕೃತ, ಸಂಸ್ಥಾಪಕ ಡಾ. ಕುಶಾಲ್ ಬ್ಯಾನರ್ಜಿ ಅವರು ತಿಳಿಸಿದರು.
ಬೆಂಗಳೂರಿನ ಇಂದ್ರ ನಗರದಲ್ಲಿ ಡಾ. ಕಲ್ಯಾಣ್ ಬ್ಯಾನರ್ಜೀಸ್ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿದವರು, “ಕ್ಯಾನ್ಸರ್ ಎಂಬುದು ಕೇವಲ ಒಂದೇ ರೋಗವಲ್ಲ. ವಿಧ, ಹಂತ ಮತ್ತು ರೋಗಿಯನ್ನು ಆಧರಿಸಿ ಇದು ಗುಣವಾಗುವುದು, ಸುಧಾರಿಸುವುದು ಅಥವಾ ಬದುಕುಳಿಯುವ ಪ್ರಮಾಣ ಬದಲಾಗುತ್ತದೆ. ಆದರೆ, ಹಲವು ರೀತಿಯ ಕ್ಯಾನ್ಸರ್ಗಳ ಜೀವಿತಾವಧಿ ದರಗಳನ್ನು ಹೋಮಿಯೋಪತಿ ಚಿಕಿತ್ಸೆ ಹೆಚ್ಚಿಸುತ್ತದೆ ಎಂದು ನಾವು ಕಂಡುಕೊಂಡಿದ್ದೇವೆ. ಸುಧಾರಿತ ಕ್ಯಾನ್ಸರ್ಗಳ ಪ್ರಕರಣಗಳಲ್ಲಿ, ಆಂಕಾಲಜಿಸ್ಟ್ಗಳು ಅಂದಾಜು ಮಾಡಿದ ಬದುಕುಳಿಯುವ ಅವಧಿಗಿಂತ ಹೆಚ್ಚಿನ ಅವಧಿಯವರೆಗೆ ರೋಗಿಗಳು ಬದುಕಿರುವುದನ್ನು ನಾವು ಗಮನಿಸಿದ್ದೇವೆ. ಅಲ್ಲದೆ, ಅವರ ಜೀವನ ಮಟ್ಟವನ್ನೂ ಸುಧಾರಿಸಿದ್ದೇವೆ. ಕೆಲವು ಕ್ಯಾನ್ಸರ್ಗಳ ಆರಂಭಿಕ ಹ೦ತದಲ್ಲಿ, ಸಂಪೂರ್ಣವಾಗಿ ಸೂಕ್ತ ಚಿಕಿತ್ಸೆಗಳನ್ನು ನೀಡಿ ಗುಣಪಡಿಸಬಹುದು.
ಕಿಮೋಥೆರಪಿಗೆ ಹೊಂದಿಕೆಯಾಗದ ವೃದ್ಧ ರೋಗಿಗಳು ಎಕ್ಸ್ಕ್ಲೂಸಿವ್ ಆಗಿ ನಮ್ಮ ಚಿಕಿತ್ಸೆಯನ್ನೇ ಪಡೆಯುತ್ತಿದ್ದಾರೆ. ಪ್ರತಿ ದಿನವೂ 100 ಕ್ಕೂ ಹೆಚ್ಚು ಕ್ಯಾನ್ಸರ್ ಸಂಬಂಧಿತ ಪ್ರಿಕ್ಕಿಪ್ಟನ್ಗಳನ್ನು ಹೋಮಿಯೋಪತಿ ನೀಡುತ್ತಿದ್ದು, ಈ ರೀತಿಯ ಪ್ರಕರಣಗಳನ್ನು ನಿರ್ವಹಣೆ ಮಾಡುವಲ್ಲಿ ಉತ್ತಮ ಅನುಭವವನ್ನು ಪಡೆದುಕೊಂಡಿದೆ.
ಡಾ. ಕಲ್ಯಾಣ್ ಬ್ಯಾನರ್ಜಿ 1977 ರಿಂದಲೂ ನವದೆಹಲಿಯಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ ಮತ್ತು ಪ್ರಾಕ್ಟೀಸ್ ಮಾಡಲು ಆರಂಭಿಸಿದ ದಿನದಿ೦ದಲೂ ಪ್ರತಿ ದಿನ ಮಧ್ಯಾಹ್ನದ ನಂತರ ಎಲ್ಲ ವೈದ್ಯರು ಕ್ಲಿನಿಕ್ನಲ್ಲಿ ಉಚಿತ ಸಲಹೆ ಸೇವೆಯನ್ನು ನೀಡುತ್ತಿದ್ದಾರೆ. ಕ್ಲಿನಿಕ್ನಲ್ಲಿ ಸದ್ಯ 13 ವೈದ್ಯರು ಇದ್ದಾರೆ. ಇವರುಸುಮಾರು 6,00,000 ನೋಂದಾಯಿತ ರೋಗಿಗಳಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಹೋಮಿಯೋಪತಿ ಸಾಮಾನ್ಯವಾಗಿ ಕೀಮೋಥೆರಪಿ ಮತ್ತು ರೇಡಿಯೇಶನ್ ಥೆರಪಿಗೆ ಹೆಚ್ಚುವರಿಯಾಗಿದೆ. ಇದು. ಅಡ್ಡ ಪರಿಣಾಮವನ್ನು ಕಡಿಮೆ ಮಾಡಲು ಸಹಾಯ ಮಾಡುವುದಷ್ಟೇ ಅಲ್ಲ. ಈ ಚಿಕಿತ್ಸೆ ರೂಪಗಳ ದಕ್ಷತೆಯನ್ನೂ ಇದು ಸುಧಾರಿಸಬಹುದಾಗಿದೆ ಎಂದರು
“ಲೈಕ್ಸ್ ಕ್ಯೂರ್ ಲೈಕ್ಸ್” ಲಕ್ಷಣಗಳನ್ನು ಆಧರಿಸಿ ರೋಗ ಗುಣ
“ಲೈಕ್ಸ್ ಕ್ಯೂರ್ ಲೈಕ್ಸ್” ಎಂಬ ತತ್ವದ ಅಡಿಯಲ್ಲಿ ಹೋಮಿಯೋಪತಿಯು ಗುಣಲಕ್ಷಣಗಳನ್ನು ಆಧರಿಸಿದ ರೋಗಗುಣಪಡಿಸುವ ವಿಧಾನವನ್ನು ಅಳವಡಿಸಿಕೊಂಡಿದೆ. ಅಪಾಯವನ್ನು ಕಡಿಮೆ ಮಾಡುವುದಕ್ಕಾಗಿ ಚಿಕಿತ್ಸಾತ್ಮಕ ಪರಿಣಾಮಗಳನ್ನುಉಳಿಸಿಕೊಂಡು ಔಷಧಗಳನ್ನು ಅತ್ಯಂತ ಜಾಣಾಕ್ಷತನದಿಂದ ರೂಪಿಸಲಾಗುತ್ತದೆ. ಸಮಗ್ರ ರೋಗ ಗುಣಕಾರಕ ಅಂಶವನ್ನುಹೊಂದಿರುವ ಹೋಮಿಯೋಪತಿಯು ಮೂಲ ಕಾರಣವನ್ನು ನಿವಾರಣೆ ಮಾಡುತ್ತದೆ. ತಾತ್ಕಾಲಿಕ ನಿವಾರಣೆಯ ಬದಲಿಗೆದೀರ್ಫಕಾಲೀನ ಚೇತರಿಕೆಗೆ ಹೆಚ್ಚು ಒತ್ತು ನೀಡುತ್ತದೆ. ವಿವಿಧ ಸನ್ನಿವೇಶಗಳಿಗೆ ಹೊಂದುವ ಈ ಚಿಕಿತ್ಸಾ ವಿಧಾನವು, ಫ್ಲೂಆಧರಿತ ಕೆಮ್ಮಿನಿಂದ ತೀವ್ರ ಪ್ರಕರಣಗಳಾದ ಕೋವಿಡ್ 19 ನಲ್ಲಿ ಬಹು ಅಂಗಾಂಗ ವೈಫಲ್ಯದಂತಹ ರೋಗಗಳಿಗೂಸೂಕ್ತವಾಗಿದೆ. ಚರ್ಮದ ಸಮಸ್ಯೆಗಳು, ಅಲರ್ಜಿಗಳು, ರೋಗ ನಿರೋಧಕ ಸಂಬಂಧಿತ ಅನಾರೋಗ್ಯಗಳು ಮತ್ತು ಆರಂಭಿಕಮತ್ತು ಸುಧಾರಿತ ಹ೦ತಗಳಲ್ಲಿ ಕ್ಯಾನ್ಸರ್ ನಿರ್ವಹಣೆಯಲ್ಲೂ ಕೂಡಾ ಸಮಗ್ರ ಆರೈಕೆಯನ್ನು ಹೋಮಿಯೋಪತಿ ಒದಗಿಸುತ್ತದೆ.
ಕ್ಲಿನಿಕ್ ಉದ್ಘಾಟನಾ ಸಮಾರಂಭದಲ್ಲಿ ಕ್ಲಿನಿಕ್ ನ ಸಂಸ್ಥಾಪಕ ಡಾ.ಕಲ್ಯಾಣ್ ಬ್ಯಾನರ್ಜಿ ಉಪಸ್ಥಿತರಿದ್ದರು.