ಬೆಂಗಳೂರು: ಸಮಾಜಸೇವಕ, ಹೋರಾಟಗಾರ, ಆಪತ್ಭಾಂದವ ಭಾರತೀಯ ಸೇವಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಹೆಚ್ ಎಂ ರಾಮಚಂದ್ರ (ಹೂಡಿ ಚಿನ್ನಿ) ಅವರ ಹುಟ್ಟುಹಬ್ಬದ ಸಂಭ್ರಮ (BSS BASS)ವನ್ನು ವಿಶೇಷವಾಗಿ ಆಚರಿಸಿಕೊಂಡರು.
ಬೆಂಗಳೂರು ದಕ್ಷಿಣ ವಲಯದ ಮಹದೇವಪುರ ವಿಧಾನಸಭಾ ಕ್ಷೇತ್ರದ ಹೊಡಿಯಲ್ಲಿರುವ ಸರ್ಕಾರಿ ಶಾಲೆ, ಅನಾಥಾಶ್ರಮ, ಎಲ್ಲಾ ಸಮುದಾಯದ ದೇವರು, ಮಸೀದಿ, ಚರ್ಚ್ಗಳಿಗೆ ತೆರಳಿ ತಮ್ಮ ಕೈಲಾದ ದಾನಧರ್ಮವನ್ನು ಮಾಡಿದರು. ಈ ಮೂಲಕ ಅವರು ಪ್ರತಿ ವರ್ಷ ತಮ್ಮ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ.
ಸರ್ಕಾರಿ ಶಾಲೆಯಲ್ಲಿ ನೋಟ್ ಪುಸ್ತಕ, ಬಡವರಿಗೆ ಕಂಬಳಿ ವಿತರಣೆ :
ಹೊಡಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಾವಿರಾರು ಮಕ್ಕಳಿಗೆ ನೋಟ್ ಪುಸ್ತಕ ವಿತರಿಸಿ ವಿಶೇಷವಾಗಿ ಬರ್ತಡೆ ಆಚರಿಸಿಕೊಂಡರು. ಅಲ್ಲದೆ ಮಕ್ಕಳಿಗೆ ಪಾಠ ಹೇಳಿಕೊಡುವ ಶಿಕ್ಷಕ ವೃಂದದವರಿಗೂ ಅಭಿನಂದಿಸಿದರು. ಇದರ ಜೊತೆಗೆ ಮಕ್ಕಳಿಗೆ ಸಿಹಿ ಹಂಚಿ ಇತರರಿಗೆ ಮಾದರಿಯಾದರು. ಅದರ ಜೊತೆ ಬಡವರಿಗೆ ಕಂಬಳಿಯನ್ನು ನೀಡಿ ಆಪತ್ಭಾಂದವರಾಗಿದ್ದಾರೆ.
ಹುಟ್ಟುಹಬ್ಬದಲ್ಲಿ ಸರ್ವಧರ್ಮ ಪ್ರತಿಪಾದಿಸಿದ ಹೂಡಿ ಪ್ರೀತಿ:
ಮಸೀದಿಗೆ ತೆರಳಿ ಮುಸ್ಲಿಂ ಧರ್ಮ ಗುರುಗಳು, ಮಕ್ಕಳಿಗೆ ಸಿಹಿ ಹಂಚಿದರು, ಅಲ್ಲದೇ ಧರ್ಮಗುರುಗಳಿಗೆ ಫಲತಾಂಭುಲ ನೀಡಿ ಗೌರವಿಸಿದರು, ಸಿಕ್ ಸಮುದಾಯದ, ಕ್ರೈಸ್ತ ಸಮುದಾಯದ ಗುರುಗಳು ಸಹ ಇವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶುಭಾಶಯಗಳನ್ನು ಸಲ್ಲಿಸಿದರು. ಅವರಿಗೂ ಸತ್ಕರಿಸುವ ಕೆಲಸ ಮಾಡಿದರು. ಈ ಮೂಲಕ ರಾಮಚಂದ್ರ ಅವರು ಸರ್ವಧರ್ಮನ್ನು ಪ್ರೀತಿಸುವ ಕೆಲಸ ಮಾಡಿದರು.
ಸೇವೆ ಮಾಡುವ ದಿನವೇ ಜನ್ಮ ದಿನ ಆಚರಣೆ:
ಅಲ್ಲದೆ ಕೆ ಆರ್ ಪುರಂನಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಕಂಬಳಿ, ಹಣ್ಣು ಹಂಪಲು ವಿತರಣೆ ಮಾಡಿದರು. ಆಸ್ಪತ್ರೆಯ ಸಿಬ್ಬಂದಿವರ್ಗ, ನರ್ಸ್,ವೈದ್ಯರು, ದಾದಿಯರ ಕೆಲಸ ಕಾರ್ಯಗಳನ್ನು ಗುರುತಿಸಿ ಗೌರವಿಸಿದರು. ಈ ಮೂಲಕ ಜನ್ಮ ದಿನವನ್ನು ಸೇವೆ ಮಾಡುವ ದಿನವಾಗಿ ಆಯ್ಕೆ ಮಾಡಿಕೊಂಡು ಸೇವೆ ಮಾಡಿದರು. ಅಲ್ಲದೆ 30 ಅನಾಥಾಶ್ರಮಗಳಿಗೆ ದಿನಸಿ ಕಿಟ್ ವಿತರಣೆ ಮಾಡಿದರು.
ಕ್ಷೀರಾಭಿಷೇಕ: ಗದ್ಗದಿತರಾದ ಹೂಡಿ ಚಿನ್ನಿ
ರಾಮಚಂದ್ರ ಹೂಡಿ ಅವರ ಅಭಿಮಾನಿಗಳು ದೇವರಿಗೆ ಸಲ್ಲಿಸುವ ರೀತಿ ರಾಮಚಂದ್ರ ಅವರಿಗೆ ಹಾಲಿನ ಅಭಿಷೇಕ ಮಾಡಿದರು. ತದ ನಂತರ ಅಭಿಮಾನಿಗಳು ಕ್ಷೀರಾಭಿಷೇಕ ಮಾಡಿದ ಹಿನ್ನೆಲೆ ರಾಮಚಂದ್ರ ಹೂಡಿಯವರು ಅಭಿಮಾನಿಗಳ ಅಭಿಮಾನದ ಬಗ್ಗೆ ಮಾತನಾಡಿ, ನನಗೆ ಬೆಳಿಗ್ಗೆ ಹಳೆಯ ಬಟ್ಟೆ ಹಾಕಿಂಡು ಬಾ ಎಂದು ಸಹೋದರರು ಹೇಳಿದರು, ನನಗೆ ಏನು ಗೊತ್ತಿಲ್ಲ, ಇಲ್ಲಿಗೆ ಬಂದಮೇಲೆ ಗೊತ್ತಾಯಿತು, ಕ್ಷೀರಾಭಿಷೇಕ ಮಾಡಬೇಡಿ, ಅದು ದೇವರಿಗೆ ಮಾಡಬೇಕು ಎಂದರು, ಆದರೂ ಒತ್ತಾಯದ ಮೇರೆಗೆ ಅವರು ಬಿಡದೆ ಹಾಲಿನ ಅಭಿಕ್ಷೇಕ ಮಾಡಿದರು, ಅದನ್ನು ನನಗೆ ಅಭಿಮಾನದಿಂದ ಮಾಡಿದ್ದಾರೆ, ಇದೆಲ್ಲವೂ ದೇವರಿಗೆ ಸಲ್ಲಬೇಕು ಅವರಿಗೆ ನಾನು ಎಂದೆಂದಿಗೂ ಚಿರಋಣಿ ಎಂದು ಗದ್ಗದಿತರಾದರು. ಹೂಡಿಯವರಿಗೆ ಯಾವುದೇ ದೃಷ್ಟಿ ಬೀಳಬಾರದೆಂದು ಕುಂಬಳ ಕಾಯಿಯಿಂದ ಅಭಿಮಾನಿಗಳು ದೃಷ್ಟಿತೆಗೆದರು.
ಹೊಸಕೋಟೆಯಲ್ಲಿ ಅದ್ದೂರಿ ಕಾರ್ಯಕ್ರಮ:
ಹೊಸಕೋಟೆಯ ಅಂಬೇಡ್ಕರ್ ಭವನದಲ್ಲಿ ಬೃಹತ್ ಆಗಿ ಚಿನ್ನಿ ಅವರ ಹುಟ್ಟುಹಬ್ಬದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅದಕ್ಕೂ ಮುನ್ನ ನಗರದ ಮುಖ್ಯ ರಸ್ತೆಗಳಲ್ಲಿ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಿದರು. ಹೊಸಕೋಟೆಯ ಜನ, ಕಾರ್ಯಕರ್ತರು, ಅಭಿಮಾನಿಗಳು ಅಭಿಮಾನ ತೋರಿದರು.
ಹೂಡಿಯವರ ಕಚೇರಿಗೆ ತೆರಳಿ ಅಭಿಮಾನಿಗಳು ಕೇಕ್ ಕತ್ತರಿಸಿ, ಪುಷ್ಪಗುಚ್ಛ ನೀಡಿ ಶುಭ ಹಾರೈಸಿದರು. ಮಹದೇವಪುರ ಕ್ಷೇತ್ರದ ಪೊಲೀಸ್ ಅಧಿಕಾರಿಗಳು ಸಹಾ ರಾಮಚಂದ್ರ ಅವರ ಸಮಾಜಸೇವೆ ಕಂಡು ಹೂವುಗುಚ್ಛ ನೀಡಿ ಹುಟ್ಟುಹಬ್ಬದ ಶುಭಾಶಯ ಕೋರಿದರು.
ರಾಮಚಂದ್ರ ಅವರು ಸುಮಾರು 25 ವರ್ಷಗಳಿಂದ ಹಲವು ಮುಖಗಳಲ್ಲಿ ಸಮಾಜ ಸೇವೆ ಮಾಡಿಕೊಂಡು ಬಂದಿದ್ದಾರೆ. ಇವರ ಸೇವೆಗೆ ಇಲ್ಲಿತನಕ ಸುಮಾರು 12 ರಾಷ್ಟೀಯ ಪುರಸ್ಕಾರಗಳು ಬಂದಿವೆ. ರಾಜ್ಯದ ಗಡಿ ಹೋರಾಟ, ನೀರಾವರಿ, ಕನ್ನಡ ಭಾಷೆ, ನಾಡುನುಡಿ, ಜಲ, ಕನ್ನಡಿಗರ ಸ್ವಾಭಿಮಾನ,ಗೋಕಾಕ್ ಚಳುವಳಿ, ಕಾರ್ಮಿಕರ ಸಮಸ್ಯೆ ಸೇರಿದಂತೆ ಅವಿರತವಾಗಿ ಹೋರಾಡಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡು ಸಮಾಜ ಸೇವೆ ಮಾಡುತ್ತಿದ್ದಾರೆ.
ಸಮಾಜ ಸೇವಕ ರಾಮಚಂದ್ರ ಹೂಡಿ ಅವರ ಬರ್ತಡೆ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ರಾಮಚಂದ್ರ ಕೆಲಸ ಕಾರ್ಯಗಳು, ಬಡವರಿಗೆ ಮಾಡುತ್ತಿರುವ ಸೇವೆ ಅಪ್ರತಿಮ ಎಂದರು, ಹೆಗಡೆ ಸೇರಿದಂತೆ ಎಲ್ಲಾಧರ್ಮದ ಮುಖಂಡರುಗಳು, ಸ್ವಾಮೀಜಿಗಳು ಭಾಗಿ.