ಬೆಂಗಳೂರು: 2023 ರ ಸಾಲಿನ ಭಾ.ಆ.ಸೇ (IAS) ಅಧಿಕಾರಿಗಳು ಭಾರತ ದರ್ಶನ ಅಧ್ಯಯನದ ಪ್ರವಾಸದಡಿಯಲ್ಲಿ ಬೆಂ.ಮ.ಸಾ.ಸಂಸ್ಥೆಗೆ ಭೇಟಿ ನೀಡಿ ಸಾರಿಗೆ ಸಂಸ್ಥೆಯ ವಿಚಾರಗಳ ಬಗ್ಗೆ ಮಾಹಿತಿ ತಿಳಿದುಕೊಂಡರು.
ಲಾಲ್ ಬಹದ್ದೂರ್ ಶಾಸ್ತ್ರಿ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ 2023 ರ ಸಾಲಿನ ಭಾ.ಆ.ಸೇವೆ ಅಧಿಕಾರಿಗಳು ಭಾರತ ದರ್ಶನ ಅಧ್ಯಯನದ ಪ್ರವಾಸದಡಿಯಲ್ಲಿ ಬೆಂ.ಮ.ಸಾ.ಸಂಸ್ಥೆಗೆ ಭೇಟಿ ನೀಡಿರುತ್ತಾರೆ.ಈ ಸಂದರ್ಭದಲ್ಲಿ ಬೆಂ.ಮ.ಸಾ.ಸಂಸ್ಥೆಯಲ್ಲಿ ಅಳವಡಿಸಿಕೊಂಡಿರುವ ಮಾದರಿ ಉಪಕ್ರಮಗಳು, ಸಂಸ್ಥೆಯ ಇತಿಹಾಸ, ಶಕ್ತಿ ಯೋಜನೆಯ ಅನುಷ್ಠಾನ, ಪ್ರಯಾಣಿಕರ ಪಾಸ್ ವ್ಯವಸ್ಥೆ, ಆರ್ಥಿಕ ಕಾರ್ಯಕ್ಷಮತೆ, ಸಂಚಾರ ಆದಾಯ, ಕಾರ್ಯಚರಣೆಗಳ ವೆಚ್ಚ, GCC ಮಾದರಿಯಲ್ಲಿ ಎಲೆಕ್ಟ್ರಿಕ್ ಬಸ್ಸುಗಳ ಹಸಿರು ತಂತ್ರಜ್ಞಾನದ ಕಾರ್ಯಚರಣೆ ಬಗ್ಗೆ ವ್ಯವಸ್ಥಾಪಕ ನಿರ್ದೇಶಕರಾದ ರಾಮಚಂದ್ರನ್.ಆರ್, ಭಾಆಸೇ., ರವರು ಪ್ರಾತ್ಯಕ್ಷತೆ ನೀಡಿ ತರಬೇತಿ ಅಧಿಕಾರಿಗಳೊಂದಿಗೆ ಸವಿವರವಾಗಿ ಚರ್ಚಿಸಿರುತ್ತಾರೆ, ತದನಂತರ ಸಂಸ್ಥೆಯ ಮಾಹಿತಿ ಮತ್ತು ತಂತ್ರಜ್ಞಾನ ಶಾಖೆಯ ನಿಯಂತ್ರಣ ಕೊಠಡಿಗೆ ಭೇಟಿ ನೀಡಿರುತ್ತಾರೆ.
ಈ ಸಂದರ್ಭದಲ್ಲಿ ಸಂಸ್ಥೆಯ ನೂತನ ನಿರ್ದೇಶಕರಾದ (ಮಾಹಿತಿ & ತಂತ್ರಜ್ಞಾನ) ಶಿಲ್ಪಾ.ಎಂ, ಭಾ.ಆ.ಸೇ., ಜಿ.ಟಿ.ಪ್ರಭಾಕರ್ ರೆಡ್ಡಿ, ಮುಖ್ಯ ಸಂಚಾರ ವ್ಯವಸ್ಥಾಪಕರು (ಆಚರಣೆ), ಕೆ.ಜಿ.ಸದಾನಂದ, ಮುಖ್ಯ ಗಣಕ ವ್ಯವಸ್ಥಾಪಕರು, ಕೆ.ವಿ.ಮಂಜುನಾಥ್, ಉಗ್ರಾಣ ಮತ್ತು ಖರೀದಿ ನಿಯಂತ್ರಣಾಧಿಕಾರಿ ಮತ್ತು ನಿಗಮದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಂ.ಮ.ಸಾ.ಸಂಸ್ಥೆಯು ಈವರೆವಿಗೂ ಹಲವು ಭಾ.ಆ.ಸೇ., ಕ.ಆ.ಸೇ. ತಂಡಗಳು ಮತ್ತು ಇತರೇ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಅಧಿಕಾರಿಗಳಿಗೆ ತರಬೇತಿಯನ್ನು ಆಯೋಜಿಸಿದೆ.