ಬೆಂಗಳೂರು: ಜಗತ್ತಿನ ಅತ್ಯಂತ ವಿಶ್ವಸನೀಯ ಗೃಹೋಪಕರಣ ಬ್ರ್ಯಾಂಡ್ ಹಾಗೂ ದೀರ್ಘಕಾಲ ಇರುವಂತಹ ವ್ಯಾಪಾರವನ್ನು ಪ್ರತಿಪಾದಿಸುವ ಸಂಸ್ಥೆಗಳ ಪೈಕಿ ಒಂದಾದ ಐಕಿಯ(IKEA), ಬೆಂಗಳೂರು, ಹೈದರಾಬಾದ್ ಹಾಗೂ ಪುಣೆಯಾದ್ಯಂತ 100% ಇವಿ ಡೆಲಿವರಿಗಳೊಂದಿಗೆ ಭಾರತದ ತನ್ನ ಪ್ರಪ್ರಥಮ ದೊಡ್ಡ ಮೈಲಿಗಲ್ಲು ಸಾಧಿಸಿದೆ.
ಮುಂಬೈ ಕಾರ್ಯಾಚರಣೆಗಳು ಇಷ್ಟರಲ್ಲೇ ಈ ಪಡೆ ಸೇರಿಕೊಳ್ಳಲಿದ್ದು, ಸಂಸ್ಥೆಯು ಎಲ್ಲಾ ಹೊಸ ಮಾರುಕಟ್ಟೆಗಳನ್ನೂ ಇವಿ-ಮೊದಲು ದೃಷ್ಟಿಕೋನದೊಂದಿಗೆ ಪ್ರವೇಶಿಸಲಿದೆ; ದೆಹಲಿ ಎನ್ಸಿಆರ್ ನಲ್ಲಿ ಮೊದಲು ಆರಂಭಿಸುತ್ತದೆ. ಹೈದರಾಬಾದಿನಲ್ಲಿ ಅದೇ ದಿನ ಡೆಲಿವರಿಯ ಪ್ರಯೋಗವನ್ನು ಕೂಡ ನಡೆಸುತ್ತಿರುವ ಐಕಿಯ, ಮುಂಬರುವ ವರ್ಷದಲ್ಲಿ ತನ್ನ ಎಲ್ಲಾ ಮಾರುಕಟ್ಟೆಗಳಲ್ಲಿ ಹೆಚ್ಚಿಸುವ ಯೋಜನೆ ಹೊಂದಿದೆ.
ಈ ಮೈಲಿಗಲ್ಲು, ದೀರ್ಘಕಾಲ ಉಳಿಯುವಂತಹ ಸರಪಳಿ ಮೌಲ್ಯಕ್ಕೆ ಐಕಿಯ ಇಂಡಿಯಾದ ಸ್ಥಿರ ಬದ್ಧತೆಯನ್ನು ಪ್ರದರ್ಶಿಸುತ್ತದೆ. 2019ರಲ್ಲಿ ಇವಿ ಪರಿಹಾರಗಳ ವಾಣಿಜ್ಯ ಶೋಧದಿಂದ ಹಿಡಿದು, 2023ರಲ್ಲಿ 28% ಹಸಿರು ಡೆಲಿವರಿಗಳು ಹಾಗೂ ಈಗ 88% ಇವಿ ಅಳವಡಿಕೆ ಪ್ರಮಾಣದೊಂದಿಗೆ, ಸಂಸ್ಥೆಯು ರಾಷ್ಟ್ರವ್ಯಾಪಿಯಾಗಿ ತನ್ನ ಇಂಗಾಲ ಹೆಜ್ಜೆಗುರುತನ್ನು ಕಡಿಮೆ ಮಾಡುವತ್ತ ಧಾಪುಗಾಲು ಹಾಕುತ್ತಿದೆ. ಈ ಪ್ರಯತ್ನಗಳ ಮೂಲಕ ಐಕಿಯ ಇಂಡಿಯಾ, ಪರಿಸರ ಸ್ವರೂಪದಲ್ಲಿ ಜವಾಬ್ದಾರಿಯುತವಾದ ಕಾರ್ಯಾಚರಣೆಗಳಿಗೆ ಹೊಸ ಮಾನದಂಡಗಳನ್ನು ಸ್ಥಾಪಿಸಿ, ಇನ್ನೂ ಹೆಚ್ಚು ಹಸಿರುಯುಕ್ತ ಭವಿಷ್ಯತ್ತಿಗೆ ಮಾರ್ಗ ಕಲ್ಪಿಸುತ್ತಿದೆ. ಭಾರತದಲ್ಲಿ ಪ್ರಬಲವಾದ ಇವಿ ಪರಿಸರವ್ಯವಸ್ಥೆಯನ್ನು ಸಹಸೃಷ್ಟಿ ಮಾಡುವ ಮೂಲಕ ಭಾರತದ ಇವಿ ಪರಿವರ್ತನೆಯಲ್ಲಿ ಐಕಿಯ ಮುನ್ನೆಲೆಯಲ್ಲಿದೆ, ಹವಾಮಾನ ನಿಯಂತ್ರಣವನ್ನು ಮುನ್ನಡೆಸುವುದಕ್ಕೆ ಇದು ಅತ್ಯಾವಶ್ಯಕವಾದ ಕ್ರಮವಾಗಿದೆ. ತನ್ನ ಕಾರ್ಯಜಾಲ ಪರಿವರ್ತನೆಯ ಪ್ರಮಾಣ ಹೆಚ್ಚಿಸಲು ಐಕಿಯ, ವಿನೂತನವಾದ ಸಂಚಾರ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ, ಸಣ್ಣ ಹಾಗೂ ಮಧ್ಯಮ-ಗಾತ್ರದ ವ್ಯಾಪಾರ ಸಂಸ್ಥೆಗಳು ಹಾಗೂ ಸ್ಟಾರ್ಟ್ಅಪ್ಗಳೂ ಒಳಗೊಂಡಂತೆ, ಭಾರತದ ಸ್ಥಳೀಯ ಮೂಲ ಸಾಧನ ಉತ್ಪಾನದಕರುಗಳೊಂದಿಗೆ ಸಹಭಾಗಿತ್ವ ಏರ್ಪಡಿಸಿಕೊಂಡಿದೆ.
ಇದರಿಂದ ಪ್ರಬಲವಾದ ಸ್ಥಳೀಯ ಆರ್ಥಿಕತೆಯನ್ನು ಸೃಷ್ಟಿಸಿ, ಉದ್ಯೋಗ ಸೃಷ್ಟಿಯನ್ನು ಮುನ್ನಡೆಸಿ, ಸಣ್ಣ ಉದ್ಯಮಗಳೂ ಕೂಡ ಜಾಗತಿಕ ಉದ್ಯಮ ಮುಂದಾಳು ಸಂಸ್ಥೆಗಳ ಜೊತೆಜೊತೆಗೇ ಇರುವಂತೆ ಅವುಗಳನ್ನು ಸಬಲಗೊಳಿಸಲು ನೆರವಾಗುತ್ತವೆ.
ಐಕಿಯ ಇಂಡಿಯಾದ ಸಿಇಒ ಮತ್ತು ಚೀಫ್ ಸಸ್ಟೇನಬಿಲಿಟಿ ಆಫಿಸರ್ ಸುಸಾನ್ ಪಲ್ವರರ್ ಮಾತನಾಡಿ, ಭಾರತದಲ್ಲಿ ನಮ್ಮ ಪ್ರಾರಂಭಿಕ ವರ್ಷಗಳಿಂದಲೂ ಇವಿ ಪಯಣವನ್ನು ಮುನ್ನಡೆಸುತ್ತಿರುವುದಕ್ಕೆ ನಾವು ಹೆಮ್ಮೆ ಪಡುತ್ತೇವೆ. ಲಾಭ ಮತ್ತು ಭೂಮಿ ಎರಡನ್ನೂ ಸಹಸೃಷ್ಟಿ ಮಾಡಬಹುದು ಎಂಬುದನ್ನು ನಾವು ಬಲವಾಗಿ ನಂಬುತ್ತೇವೆ ಮತ್ತು ಇದೇ ಮನೋಭಾವದೊಂದಿಗೆ ಮುನ್ನೆಲೆಯಲ್ಲಿರುತ್ತೇವೆ.” ಎಂದು ಹೇಳಿದರು.
ಈ ಬೆಳವಣಿಗೆಯ ಕುರಿತು ಪಾತ್ರಿಕಾಹೇಳಿಕೆಯಲ್ಲಿ ಮಾತನಾಡುತ್ತಾ, ಐಕಿಯ ಇಂಡಿಯಾದ ಕಂಟ್ರಿ ಕಸ್ಟಮರ್ ಫುಲ್ಫಿಲ್ಮೆಂಟ್ ಮ್ಯಾನೇಜರ್ ಸೈಬಾ ಸೂರಿ, “ಐಕಿಯ ಇಂಡಿಯಾದಲ್ಲಿ ಲಾಜಿಸ್ಟಿಕ್ಸ್ಅನ್ನು ವಿದ್ಯುತ್ತೀಕರಣಗೊಳಿಸುವ ನಮ್ಮ ದೂರದೃಷ್ಟಿಯು, ಇವಿಗಳ ಅಳವಡಿಕೆಯಾಚೆಗೂ ಹೋಗುತ್ತದೆ- ಒಂದು ಸಮರ್ಥವಾದ ಮೂಲಸೌಕರ್ಯ, ಕೌಶಲ್ಯ ನಿರ್ಮಾಣ ಯೋಜನೆಗಳು ಮತ್ತು ಮೌಲ್ಯ ಸರಪಳಿಯಲ್ಲಿ ಎಲ್ಲರಿಗೂ ಭವಿಷ್ಯತ್ತಿನ ಅವಕಾಶಗಳ ನಿರ್ಮಾಣದ ಮೇಲೆ ನಾವು ಗಮನ ಕೇಂದ್ರೀಕರಿಸುತ್ತಿದ್ದೇವೆ. ಇವಿ-ಮೊದಲು ದೃಷ್ಟಿಕೋನದೊಡನೆ ನಾವು ಭಾರತದಲ್ಲಿ ಬೆಳೆಯುತ್ತಿರುವಂತಹ ಸಂದರ್ಭದಲ್ಲೇ ಐಕಿಯ ಇಂಡಿಯಾ, ಈಗ ಅದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಸಿದ್ಧವಾಗಿದೆ ಮತ್ತು ದೀರ್ಘಾವಧಿ, ವಿನೂತನ ಪರಿಹಾರಗಳಲ್ಲಿ ಹೂಡಿಕೆ ಮಾಡುವುದಕ್ಕೆ ಬದ್ಧವಾಗಿದೆ. ನಮ್ಮೊಂದಿಗೆ ಈ ದೂರದೃಷ್ಟಿಯನ್ನು ಹಂಚಿಕೊಳ್ಳುವ ನಮ್ಮ ಭಾಗೀದಾರರಿಗೆ ನಾವು ನಿಜವಾಗಿಯೂ ಆಭಾರಿಗಳಾಗಿದ್ದೇವೆ. ಹೊಸ ಮಾರುಕಟ್ಟೆಗಳನ್ನು ನಾವು ಪ್ರವೇಶಿಸುತ್ತಿರುವಂತಹ ಸಂದರ್ಭದಲ್ಲಿ, ಈ ಬದಲಾವಣೆಗೆ ನಾವು ಸಜ್ಜುಗೊಂಡಿದ್ದೇವೆ ಎಂಬುದನ್ನು ಖಾತರಿಪಡಿಸಿ, ನಮ್ಮ ಸರಬರಾಜು ಸರಪಳಿಯ ಭವಿಷ್ಯತ್ತಿಗೆ ಅಡಿಪಾಯ ಹಾಕಿಕೊಡುವುದು ನಮ್ಮ ಆದ್ಯತೆಯಾಗಿರುತ್ತದೆ.” ಎಂದು ಹೇಳಿದರು.
ನಿರಿಂಗಾಲೀಕರಣದ ಒಬ್ಬ ಪ್ರಮುಖ ಸಂಸ್ಥೆಯಾಗಿ ಐಕಿಯ, ಇವಿಗಳ ಅಳವಡಿಕೆಯು ಇನ್ನೂ ಹೆಚ್ಚು ಅನುಕೂಲಕರವಾಗಿ ಇನ್ನೂ ಹೆಚ್ಚು ಸಮರ್ಥವಾಗಿ ಇರುವಂತೆ ಮಾಡಲು, ಭಾರತದಲ್ಲಿ ದೊಡ್ಡ ಇವಿಗಳಿಗಾಗಿ ಚಾರ್ಜಿಂಗ್ ಸ್ಟೇಶನ್ಗಳನ್ನು ವಿಸ್ತರಿಸುತ್ತಿದೆ. ಡೆಲಿವರಿ ವ್ಯಾನುಗಳು, ಗ್ರಾಹಕರು ಹಾಗೂ ಸಹ-ಉದ್ಯೋಗಿಗಳಿಗಾಗಿ ತನ್ನ ಎಲ್ಲಾ ದೊಡ್ಡ-ಫಾರ್ಮಾಟ್ ಮಳಿಗೆಗಳಾದ್ಯಂತ ಇವಿ ಚಾರ್ಜಿಂಗ್ ಸ್ಟೇಶನ್ಗಳನ್ನು ಸಂಸ್ಥೆಯು ಅನುಷ್ಠಾನಗೊಳಿಸಿದೆ. ಅತ್ಯಾಧುನಿಕ ಇನ್-ಬಿಲ್ಟ್ ಟೆಲಿಮ್ಯಾಟಿಕ್ಸ್ ತಂತ್ರಜ್ಞಾನದ ಬೆಂಬಲದೊಂದಿಗೆ ಬ್ರ್ಯಾಂಡ್ನ ವೈವಿಧ್ಯಮಯ ಇವಿ ಫ್ಲೀಟ್, 680ಕಿಲೋದಿಂದ 1700 ಕಿಲೋವರೆಗಿನ ಲೋಡ್ ನಿರ್ವಹಿಸುತ್ತದೆ. ಈ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಸಂಯೋಜಿಸುವ ಮೂಲಕ ಐಕಿಯ, ಸರ್ಕಾರೀ ನಿಬಂಧನೆಗಳೊಂದಿಗೆ 88%-100% ಅನುಸರಣೆ ಕಾಪಾಡಿಕೊಳ್ಳುವ ಸಂದರ್ಭದಲ್ಲೇ ಉದ್ಯಮದಲ್ಲಿ ಒಂದು ಹೊಸ ಮಾನದಂಡ ಸ್ಥಾಪಿಸುತ್ತಿದೆ.
ತನ್ನ ಎಲ್ಲಾ ಕಾರ್ಯಾಚರಣೆಗಳಾದ್ಯಂತ 2025ರ ವೇಳೆಗೆ 100% ಇವಿ ಡೆಲಿವರಿಗಳನ್ನು ಸಾಧಿಸುವ ಗುರಿ ಹೊಂದಿರುವ ಸಂಸ್ಥೆಯು, ದೊಡ್ಡ-ಪ್ರಮಾಣದ ಇವಿ ಫ್ಲೀಟ್ ವರ್ಧಿಸಿ, ಸರ್ಕಾರದೊಂದಿಗೆ ಸಹಯೋಗ ಏರ್ಪಡಿಸಿಕೊಳ್ಳುತ್ತಾ, ನಿರಂತರ ಆವಿಷ್ಕಾರವನ್ನು ಮುನ್ನಡೆಸುತ್ತಿದೆ. ಜಾಗತಿಕವಾಗಿ, 2030ರ ವೇಳೆಗೆ ಮೌಲ್ಯ ಸರಪಳಿಯಾದ್ಯಂತ ಧನಾತ್ಮಕ ಹವಾಮಾನ ಸಾಧಿಸಿ, ಹಸಿರುಮನೆ ಹೊಗೆಯುಗುಳುವಿಕೆಯನ್ನು ಅರ್ಧಕ್ಕಿಳಿಸುವ ಗುರಿಯನ್ನೂ, 2050ರ ವೇಳೆಗೆ ನಿವ್ವಳ ಶೂನ್ಯ ಸಾಧಿಸುವ ಗುರಿಯನ್ನೂ ಐಕಿಯ ಹೊಂದಿದೆ.
About IKEA India: IKEA is growing in India. India is a prioritized market for the Ingka group for future growth. Our ambition is to reach many more people in India through a strong omnichannel presence. We are today online in Mumbai, Pune, Hyderabad, Gujarat, and Bengaluru. Three big format IKEA stores are operational in Hyderabad, Navi Mumbai, and Bengaluru and two city stores in Mumbai. Along with Retail, IKEA Purchasing, IKEA Foundation, IKEA investment, Ingka Centres, Global Business Operations (GBO), and other entities are investing in India to create an even bigger impact as ONE IKEA. IKEA remains invested and committed to India. IKEA has been sourcing from India for close to 40 years working with around 65 suppliers, 48,000 direct employees, and 500,000 people in the supply chain in India producing for IKEA stores worldwide.