ಚಾಮರಾಜನಗರ: ಕೋಡಿಮೋಳೆ ಗ್ರಾಮವನ್ನು ಬಯಲು ಶೌಚ ಮುಕ್ತಮಾದರಿ ಗ್ರಾಮವನ್ನಾಗಿಸಲು ಇಂದಿನಿಂದಲೇ ನಾವೆಲ್ಲರು ಪಣತೊಡೋಣ. ಸಾಮೂಹಿಕಶೌಚಾಲಯ ಹಾಗೂ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಂಡು ಗ್ರಾಮದಸ್ವಚ್ಚತೆ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಅಂತರರಾಷ್ಟ್ರೀಯಕ್ರೀಡಾಪಟು, ಚಿನ್ನಪದಕ ವಿಜೇತರಾದ ಸರ್ಕಲ್ ಇನ್ಸ್ಪೆಕ್ಟರ್ ಸಿ. ಶಿವನಂಜನಶೆಟ್ಟಿತಿಳಿಸಿದರು.
ತಾಲೂಕಿನ ಕೋಡಿಮೋಳೆ ಗ್ರಾಮದಲ್ಲಿ ಶ್ರೀಲಕ್ಷ್ಮೀದೇವಿ ಅಮ್ಮನವರ ಜಾತ್ರೆಯಅಂಗವಾಗಿ ಬುಧವಾರ ರಾತ್ರಿ ನಡೆದ ಅಭಿನಂದನಾ ಸಮಾರಂಭದಲ್ಲಿ ಯಜಮಾನರಿಂದಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಜಾತ್ರೆ, ಹಬ್ಬ ಹರಿದಿನಗಳನ್ನು ಸಂಭ್ರಮದಿಂದ ಆಚರಣೆ ಮಾಡೋಣ. ಅದಕ್ಕು ಮಿಗಿಲಾಗಿನಾವೆಲ್ಲರು ನಮ್ಮ ಗ್ರಾಮವನ್ನು ಸ್ವಚ್ಚ ಗ್ರಾಮವನ್ನಾಗಿಸಲು ಶ್ರಮಿಸಬೇಕು.ಕೋಡಿಮೋಳೆ ಎಂದರೆ ಬಯಲು ಹಾಗೂ ರಸ್ತೆಯ ಬದಿಯಲ್ಲಿ ಕುಳಿತುಕೊಳ್ಳುತ್ತಾರೆ ಎಂಬಅಪಕೀರ್ತಿ ನಮ್ಮ ಗ್ರಾಮಕ್ಕೆ ಅಂಟಿದೆ. ಆದೇ ರೀತಿ ನಮ್ಮ ಗ್ರಾಮಸ್ಥರುನಡೆದುಕೊಳ್ಳುತ್ತಿದ್ದಾರೆ. ಇದು ತಪ್ಪಬೇಕು. ನಮ್ಮ ಮನೆಯ ಅಕ್ಕ ತಂಗಿಯರು,ತಾಯಿಂದರು ಸಂಜೆಯಾಗುತ್ತಿದ್ದಂತೆ ಬಯಲಿಗೆ ಹೋಗುವುದು ನಮಗೆಲ್ಲ ಅದಅವಮಾನ ಅಲ್ಲವೇ? ಇಂದು ಜಾತ್ರೆಗಾಗಿ ಎಲ್ಲರು ಸೇರಿ ಒಂದು ಲಕ್ಷಕ್ಕು ಹೆಚ್ಚು ವೆಚ್ಚಮಾಡಿ ಡಿಜೆ ಸೌಂಡ್ ಹಾಕಿಸಿದ್ದೀರಿ. ಇನ್ನು ಮೂರು ದಿನ ಕಂಠಪೂರ್ತಿ ಕುಡಿದು ಕುಣಿದುಕುಪ್ಪಳಿಸಿ ಬಿಟ್ಟರೆ ಮುಗಿಯಿತೇ, ನಮ್ಮ ಮಕ್ಕಳು ವಿದ್ಯಾವಂತರಾಗಬೇಡವೇ? ಅವರುಇತರರಂತೆ ಉನ್ನತ ವ್ಯಾಸಂಗ ಮಾಡಿ, ದೊಡ್ಡ ಹುದ್ದೆಗಳನ್ನು ಅಲಂಕರಿಸಿ, ಗ್ರಾಮಕ್ಕೆಕೀರ್ತಿ ತರಬೇಕು.
ಈ ನಿಟ್ಟಿನಲ್ಲಿ ಇಂಥ ದುಂದುವೆಚ್ಚಗಳಿಗೆ ಕಡಿವಾಣ ಹಾಕುವುದು ಒಳಿತುಎಂದರು. ಪಿಯುಸಿ ಹಾಗೂ ಎಸ್ಎಸ್ಎಲ್ಸಿಯಲ್ಲಿ ಉನ್ನತ ದರ್ಜೆಯಲ್ಲಿ ಪಾಸಾದ ಬಡ ಮಕ್ಕಳನ್ನುಗುರುತಿಸಿ, ಇಂಥ ಜಾತ್ರೆಯ ಸಂದರ್ಭದಲ್ಲಿ ಅವರನ್ನು ವೇದಿಕೆ ಆಹ್ವಾನಿಸಿ, ನಗದುಪುರಸ್ಕಾರ ನೀಡಿ, ಗೌರವಿಸಿದರೆ, ಇನ್ನಿತರ ಮಕ್ಕಳಿಗೆ ಉತ್ತೇಜನ ನೀಡಿದಂತಾಗುತ್ತದೆ. ಈಕಾರ್ಯಕ್ರಮಗಳನ್ನು ಗ್ರಾಮದ ಯಜಮಾನರು, ಮುಖಂಡರು ಹಾಗೂಯುವಕರು ಸೇರಿ ಮಾಡಬೇಕು ಎಂದು ಶಿವನಂಜಶೆಟ್ಟಿ ಮನವಿ ಮಾಡಿದರು.
ಈಗ ಇರುವ ಸಾಮೂಹಿಕ ಶೌಚಾಲಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ಜತೆಗೆಇನ್ನು ಹೆಚ್ಚಿನ ಶೌಚಾಲಯಗಳನ್ನು ನಿರ್ಮಿಸಿಕೊಡಬೇಕು. ನನ್ನ ಕಡೆಯಿಂದ ನಾಲ್ಕುಶೌಚಾಲಯಗಳನ್ನು ನಿರ್ಮಿಸಿಕೊಡುತ್ತೇನೆ. ಆದೇ ರೀತಿ ಇತರರು ಮುಂದೆ ಬಂತುಶೌಚಾಲಯಗಳನ್ನು ನಿರ್ಮಿಸಿಕೊಟ್ಟು ಬಳಕೆ ಬಗ್ಗೆ ಅರಿವು ಮೂಡಿಸುವ ಮೂಲಕಗ್ರಾಮದಲ್ಲಿ ನೈಮಲ್ರ್ಯ ಕಾಪಾಡಿಕೊಂಡು ಆರೋಗ್ಯವಂತರಾಗಿರೋಣ. ಯುವಕರುಕುಡಿತ ಚಟಕ್ಕೆ ದಾಸರಾಗಬೇಡಿ, ಅಮೌಲ್ಯವಾದ ಸಮಯವನ್ನು ವಿದ್ಯಾಭ್ಯಾಸಕ್ಕೆ ಒತ್ತುನೀಡಿ, ಶಿಕ್ಷಣದಿಂದ ಮಾತ್ರ ನಮ್ಮ ಸಮುದಾಯ ಬದಲಾವಣೆ ಹೊಂದಲು ಸಾಧ್ಯ ಎಂಬಸತ್ಯವನ್ನು ಎಲ್ಲರು ಅರಿತುಕೊಳ್ಳಬೇಕು. ನಾನು ಸಹ ಪೊಲೀಸ್ ಅಧಿಕಾರಿಯಾಗಿ ಕಠಿಣಪರಿಶ್ರಮದಿಂದಾಗಿ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಪಡೆದುಕೊಳ್ಳಲುಸಾಧ್ಯವಾಯಿತು. ಹುಟ್ಟೂರಿನಲ್ಲಿ ಸನ್ಮಾನ ಸ್ವೀಕರಿಸುತ್ತಿರುವುದು ತುಂಬಾ ಹೆಮ್ಮೆತಂದಿದೆ ಎಂದು ಶಿವನಂಜನಶೆಟ್ಟಿ ಬಾವುಕರಾದರು.
ಸಮಾರಂಭದಲ್ಲಿ ಚಿನ್ನಪದಕ ವಿಜೇತರಾದ ಶಿವನಂಜಶೆಟ್ಟರನ್ನು ಗ್ರಾಮಸ್ಥರುಶಾಲು ಹೊದಿ, ಹಾರ ಹಾಕಿ ಮೈಸೂರು ಪೇಟಾ ತೊಡಿಸಿ, ಫಲತಾಂಬುಲ ನೀಡಿ ಸನ್ಮಾನಿಸಿದರು.ಚಂದಕವಾಡಿ ಗ್ರಾ.ಪಂ. ಅಧ್ಯಕ್ಷ ನಟರಾಜು, ಯಜಮಾನರಾದ ಕೋಡಿಮೋಳೆಗೋವಿಂದಶೆಟ್ಟಿ, ವಿಷಕಂಠ, ರಂಗಸ್ವಾಮಿ, ನಂಜುಂಡಸ್ವಾಮಿ, ರಆಜು, ಮಹೇಶ್,ಮಹದೇವಶೆಟ್ಟಿ, ನಾಗನಾಯಕ, ಸರ್ವೇಯರ್ ಮಹೇಶ್, ಗ್ರಾ.ಪಂ. ಸದಸ್ಯಮಹೇಶ್, ಜಯಶಂಕರ್, ನಂಜುಂಡಸ್ವಾಮಿ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.