ಬೆಂಗಳೂರು: ಸಂಜೆ ಕಾಲೇಜು ಅಂದರೆ ಕೆಲವರಿಗೆ ಕೇವಲ ಮಾತು, ಆದರೆ ಹಗಲಿನ ಕಾಲೇಜಿಗಿಂತ ಸಂಜೆ ಕಾಲೇಜು ವಿದ್ಯಾರ್ಥಿಗಳಿಗೆ ಕಲಿಯಲು ಉತ್ತಮ ಅವಕಾಶವಿದೆ, ಸಂಜೆ ಕಾಲೇಜುಗಳಿಗೆ ಸಂಖ್ಯೆ ಹೆಚ್ಚಾಗಲು ಮಕ್ಕಳು ಪ್ರತಿವರ್ಷ ಕಾಲೇಜಿಗೆ ಕರೆತರಬೇಕು ಎಂದು ವಿಜಯ ಸಂಜೆ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಕೆ ಕೇಶಮೂರ್ತಿ ಅವ್ರು ತಿಳಿಸಿದರು.
ಜಯನಗರದ 4ನೇ ಬ್ಲಾಕ್ ನಲ್ಲಿರುವ ವಿಜಯ ಸಂಜೆ ಪದವಿ ಪೂರ್ವ ಕಾಲೇಜಿನಲ್ಲಿ ಕಾಲೇಜು ವಾರ್ಷಿಕೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ಜೀವನದಲ್ಲಿ ಅಲ್ಪ ಸ್ವಲ್ಪ ಸಾಧನೆ ಮಾಡಿದ್ದೀನಿ ಎಂದರೆ ವಿಜಯ ಕಾಲೇಜು ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ, ಯಾವಾಗಲೂ ನಾವು ಸಂಸ್ಥೆ ಬಗ್ಗೆ ಒಳ್ಳೆ ಕಾಳಜಿ ಇಟ್ಟುಕೊಂಡಿರುತ್ತೇವೆ, ಕಾಲೇಜು ಪ್ರಾರಂಭದ ದಿನಗಳಿಂದಲೂ ಕೆಲಸ ಮಾಡಿದ್ದೇನೆ, ಸಂಸ್ಥೆ ಬಗ್ಗೆ ನನಗೆ ಬಹಳ ಖುಷಿಯಾಗಿದೆ.
ನನ್ನ ಕಾಲಾವಧಿಯಲ್ಲಿ ಕಾಲೇಜು ನಲ್ಲಿ ಸಾಕಷ್ಟು ಶ್ರದ್ಧೆ ಇರುತಿತ್ತು, ಕಾಲೇಜಿಗೆ ಗುರುಗಳು ಬಂದರೆ ಪಾಠ ಮಾಡಲು ಇನ್ನಿಲ್ಲದ ಆಸಕ್ತಿ, ಗುರು ಶಿಷ್ಯರ ಸಂಬಂಧ ಚೆನ್ನಾಗಿತ್ತು, ವಿವೇಕಾನಂದರ ಹುಟ್ಟುಹಬ್ಬದ ದಿನದಂದು ಶಾಲೆ ವಾರ್ಷಿಕೋತ್ಸವ ಮಾಡುತ್ತಿದ್ದಾರೆಂದರೆ ಒಳ್ಳೆಯದು, ವಿವೇಕಾನಂದ ಅವರು ಸಾವನಪ್ಪಿದ್ದು ಚಿಕ್ಕವಯಸ್ಸಿನಲ್ಲಿ ಆದರೆ ಅವರು ದೇಶಕ್ಕೆ ಕೊಟ್ಟ ಕೊಡುಗೆ ಅಪಾರ, ದೇಶಕ್ಕೆ ನನ್ನ ಕೊಡುಗೆ ಏನು ಎಂಬುದರ ಬಗ್ಗೆ ದೇಶ ಪರ್ಯಟನೆ ಮಾಡಿ ಜನರಿಗೆ ತೊರೆಸಿದ್ದಾರೆ.
ದೇಶಕ್ಕೆ ವಿವೇಕಾನಂದರ ಕೊಡುಗೆ ಇದೆ, ಅದೇರೀತಿ ದೇಶದ ಮೂಲೆ ಮೂಲೆಗೆ ಹೋಗಿ ಭಾಷಣಗಳನ್ನು ಮಾಡಿ ಯುವಕರನ್ನು ಬಡಿದೆಬ್ಬಿಸಿದರು. 57 ಜನ ವಿದ್ಯಾರ್ಥಿಗಳು ಪ್ರತಿ ವರ್ಷ 57 ಜನ ವಿದ್ಯಾರ್ಥಿಗಳನ್ನು ಕರೆದುಕೊಂಡು ಕಾಲೇಜಿಗೆ ಬರಬೇಕು, ಜಪಾನ್ ದೇಶ ಹಲವು ವಿಚಾರಗಳಲ್ಲಿ ಅಷ್ಟೆಲ್ಲ ಪೆಟ್ಟುಗಳು ಬೀಳುತ್ತಿದ್ದರು ಸಹಾ ಯಾವುದಕ್ಕೂ ಎದೆಗುಂದದೆ ಮುನುಗ್ಗುತ್ತಿರುವುದು ಅವರ ಸಾಮರ್ಥ್ಯ, ಚಲವನ್ನು ತೋರಿಸುತ್ತದೆ.
ಮಕ್ಕಳಿಗೆ ನಮ್ಮ ಶಾಲೆ, ಸಂಸ್ಥೆ, ಮನೆಯಲ್ಲೂ ನಮ್ಮ ಕೆಲಸ ಎಂದು ತಿಳಿದು ಮಕ್ಕಳು ಕೆಲಸ ಮಾಡುವ ಮನೋಭಾವನೆ ಹೊಂದಿರಬೇಕು. ಎಲ್ಲರೂ ಸಹಾ ದೇಶ, ರಾಷ್ಟ್ರಪ್ರೇಮ ಬೆಳೆಸಿಕೊಳ್ಳಬೇಕು. ಒಳ್ಳೆ ಸಂಸ್ಕೃತಿ ಇರುವ ದೇಶದಲ್ಲಿ ಹುಟ್ಟೀದೇವೆ ಅದಕ್ಕೆ ನಮ್ಮ ಹೆಮ್ಮೆ ಎಂದೂ ಕಾಲೇಜು ದಿನಗಳು, ಕೆಲಸ ಮಾಡಿದ ಸಂಸ್ಥೆಯ ಹೆಸರನ್ನು ಉಲ್ಲೇಖ ಮಾಡಿ ಹಳೆಯ ನೆನಪನ್ನು ಮೆಲುಕು ಹಾಕಿದರು.
ವಿಜಯ ಕಾಲೇಜಿನ ಖಜಾಂಚಿ, ಡೀನ್ ಆದ ಅನಂತ್ ಕೆ ಅತ್ರೆ ಮಾತನಾಡಿ, ಸಮಾಜದಲ್ಲಿ ಸಂಜೆ ಕಾಲೇಜಿನ ಬಗ್ಗೆ ಅಷ್ಟು ಗೌರವ ಇಲ್ಲ, ಹಾಗೂ ಬರುತ್ತಿಲ್ಲ, ಬಹುತೇಕವಾಗಿ ಕಾರ್ಮೆಂಟ್ ನಲ್ಲಿ ಓದುವ, ಇಂಗ್ಲಿಷ್ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳಿಗೆ ಹೆಚ್ಚು ಮನ್ನಣೆ, ಸಂಜೆ ಕಾಲೇಜು ಇತರೆ ಕಾಲೇಜುಗಳಿಗೆ ಯಾವುದೇ ರೀತಿಯ ಬಿನ್ನವೇನಿಲ, ವಿವೇಕಾನಂದರನ್ನು ಎಲ್ಲರೂ ನೆನಪಿಸ್ಸಿಕೊಳಬೇಕು, ಅವರದ್ದು ಒಳನೋಟ, ನಮ್ಮದು ಹೊರ ನೋಟ, ಸಂಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳು ತಾನು ಮಾಡುವ ಕೆಲಸದಲ್ಲಿ ತಮನ್ನು ತಾವು ತೊಡಗಿಸಿಕೊಂಡು ಹೋದಾಗ ಮಾತ್ರ ಎಲ್ಲವನ್ನೂ ಪಡೆಯಲು, ಸಾಧನೆ ಮಾಡಲು ಸಾಧ್ಯ ಎಂದರು.
ಮಕ್ಕಳಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಅಲ್ಲದೆ ಕಾರ್ಯಕ್ರಮಕ್ಕೆ ಪ್ರತ್ಯಕ್ಷ, ಪರೋಕ್ಷವಾಗಿ ಸಹಾಯ ಮಾಡಿದವರಿಗೆ ಸನ್ಮಾನ ಮಾಡಲಾಯಿತು.
ಇದೇ ವೇಳೆ ಪಠ್ಯ ಪುಸ್ತಕ ವಿಷಯದಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡೆಯಲ್ಲಿ, ಚಿತ್ರಕಲೆ ಗೆದ್ದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಕಾಲೇಜು ಪ್ರಾಚಾರ್ಯರು ಆದ ಮಂಜುನಾಥ್ ಭಾಗಿಯಾಗಿದ್ದರು.