ಬೆಂಗಳೂರು: ಐಟಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಟೆಮೆನೋಸ್ ಸಂಸ್ಥೆ ತಂಡದ ಸಹಭಾಗಿತ್ವದ CSR ಕಾರ್ಯಕ್ರಮದ ಅಡಿಯಲ್ಲಿ ಬೆಂಗಳೂರಿನ ವಿಲ್ಸನ್ ಗಾರ್ಡನ್ ನಲ್ಲಿರುವ ವಿಲ್ಸನ್ ಗಾರ್ಡನ್ ವಿಧ್ಯಾ ಸಂಸ್ಥೆಗೆ ಗಣಕಯಂತ್ರ ಪ್ರಯೋಗಾಲಯ ಪ್ರಾರಂಭ ಮಾಡಿ ಅದನ್ನು ದತ್ತು ತೆಗೆದುಕೊಳ್ಳಲಾಗಿದೆ ಎಂದು ಟೆಮೆನೋಸ್ ಐಟಿ ಕಂಪನಿಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥರಾದ ಕಲ್ಲಿಪೊಲಿ ಚಿಯೂಟಿ ಹೇಳಿದರು.
ವಿಲ್ಸನ್ ಗಾರ್ಡನ್ ನಲ್ಲಿರುವ ಹೊಂಬೆಗೌಡ ಬಾಲಕರ ಪ್ರೌಡ ಶಾಲೆಗೆ ಡಿಜಿಟಲ್ ಕಂಪ್ಯೂಟರ್ ಲ್ಯಾಬ್ ಕೇಂದ್ರ ಉದ್ಘಾಟನೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದವರು, ಸ್ವಿಜರ್ಲೆಂಡ್ ನ ಜಿನಿವಾದ ಟೆಮೆನೊಸ್ ಐಟಿ ಕಂಪನಿ ತಂಡದಿಂದ ಬೆಂಗಳೂರಿನ ವಿಲ್ಸನ್ ಗಾರ್ಡನ್ ವಿಧ್ಯಾಸಂಸ್ಥೆಗೆ CSR ಅಡಿಯಲ್ಲಿ ಕಂಪ್ಯೂಟರ್ ಲ್ಯಾಬ್ ಅನ್ನು ದತ್ತು ತೆಗೆದುಕೊಂಡು ನಡೆಸಿಕೊಂಡು ಹೋಗಲಾಗುತ್ತದೆ. ಯುವ,ಉತ್ಸಾಹಿ ಮಕ್ಕಳಿಗೆ ಭವಿಷ್ಯದಲ್ಲಿ ಡಿಜಿಟಲ್ ಕೌಶಲ್ಯ ಬೆಳೆಸಿಕೊಳ್ಳುವ ಸಲುವಾಗಿ ಭಾರದಲ್ಲಿರುವ ಸರ್ಕಾರಿ ಅನುದಾನಿತ ಶಾಲೆಗಳಿಗೆ ಕಂಪ್ಯೂಟರ್ ಲ್ಯಾಬ್ ನೀಡಲಾಗುತ್ತಿದೆ. ನಮ್ಮ ಸಂಸ್ಥೆ ಬಹುತೇಕವಾಗಿ ಶೇ.60 ರಷ್ಟು ಭಾರತದಲ್ಲಿನ ಸ್ಥಳೀಯ ಸಂಸ್ಥೆಗಳ ಜೊತೆ ವಿವಿಧ ಕ್ಷೇತ್ರದಲ್ಲಿ ಸಹಭಾಗಿತ್ವ ಸಾಧಿಸಿದೆ ಎಂದರು.
ಮಕ್ಕಳು ಭವಿಷ್ಯದಲ್ಲಿ ಅವರ ಸ್ವಂತ ಕಾಲ ಮೇಲೆ ನಿಲ್ಲುವಂತಾಗಲಿ ಎಂಬುದು ನಮ್ಮ ಆಶಯ. ಅದರ ಜೊತೆಗೆ ಶಾಲೆಯಲ್ಲಿ ಓದುತ್ತಿರುವ ತಂದೆ ಅಥವಾ ತಾಯಿ ಇಲ್ಲದ ಮಕ್ಕಳ ಪೋಷಕರನ್ನು ಗುರುತಿಸಿ ಅವರು ಸ್ವಾವಲಂಬನೆ ಜೀವನ ನಡೆಸಲು ಹಾಗು, ಆರ್ಥಿಕವಾಗಿ ಸಭಲಿಕರಣವಾಗಲು ಹೊಲಿಗೆ ಯಂತ್ರವನ್ನೂ 20 ಜನರಿಗೆ ನೀಡಲಾಯಿತು.
ಹೊಂಬೆಗೌಡರ ಕನಸು ನನಸು ಮಾಡುತ್ತಿರುವ ಪುತ್ರ
ಇನ್ನು ವಿಲ್ಸನ್ ಗಾರ್ಡನ್ ವಿಧ್ಯಾಸಂಸ್ಥೆಯ ಖಜಾಂಚಿ ಅಶ್ವತ್ಥ್ ಮಾತನಾಡಿ, 1951ರಲ್ಲಿಯೇ ನ್ಯಾಯದೀಶರಾಗಿದ್ದ ಹೋಂಬೇಗೌಡ ಅವರು ಮೊತ್ತ ಮೊದಲ ಭಾರಿಗೆ ಮಾರುತಿ ವಿಧ್ಯಾ ಮನದಿರ ಸ್ಥಾಪನೆ ಮಾಡಿದರು, ತದನಂತರ ಕಾಲಾನು ಕ್ರಮವಾಗಿ ಒಂದೊಂದಾಗಿ ಇಂದಿಗೆ 5 ವಿಧ್ಯಾ ಸಂಸ್ಥೆಗಳನ್ನು ಮಾಡಿ ಬಡ, ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳಿಗೆ ಅನುಕೂಲವಾಗಲೆಂದು ಶಾಲೆಗಳನ್ನು ತೆರೆಯಲಾಗಿದೆ.
ಹೊಂಬೇಗೌಡ ಅವರ ಕನಸು ಇಲ್ಲಿನ ಹಿಂದುಳಿದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು, ಗುಣಮಟ್ಟದ ಶಿಕ್ಷಕರನ್ನು ಇಟ್ಟುಕೊಂಡು ಅವರ ಮಗ ಶರತ್ ಚಂದ್ರ ಅವರು ಹೊಂಬೇಗೌಡ ವಿದ್ಯಾಸಂಸ್ಥೆಯ ಅಧ್ಯಕ್ಷರಾಗಿದ್ದು ಅವರು ತಂದೆಯ ಕನಸನ್ನು ನನಸು ಮಾಡಲು ಮುಂದಾಗಿರುವುದು ಮೆಚ್ಚುಗೆಯ ಸಂಗತಿಯಾಗಿದೆ. ಮಕ್ಕಳಿಗೆ ಕೇವಲ ಶಿಕ್ಷಣ ಮಾತ್ರವಲ್ಲದೆ ಕೌಶಲ್ಯ ತರಬೇತಿ ಅಂದರೆ ಬ್ಯೂಟಿ ಪಾರ್ಲರ್, ಟ್ಯಾಲಿ,ನೆಟ್ವರ್ಕಿಂಗ್, ಟೈಲರಿಂಗ್,ಕಂಪ್ಯೂಟರ್ ತರಬೇತಿ ಕೊಡುವ ಕಾಯಕ ಮಾಡಲಾಗುತ್ತಿದ್ದು, ಈ ಶಾಲೆಯಿಂದ ಹೊರಗೆ ಹೋದಾಗ ಸ್ವ ಉದ್ಯೋಗ ಮಾಡಿಕೊಳ್ಳಲು,ಉದ್ಯೋಗ ಬಹು ಬೇಗ್ ಸಿಗುವ ಅನುಕೂಲಕರ ವಾಗಲಿ ಎಂಬ ಉದ್ದೇಶವಾಗಿದೆ.
ಟಿಮಿನೊಸ್ ಇಂಡಿಯ ಕಂಪನಿಯಿಂದ 24 ಆಧುನಿಕ ಕಂಪ್ಯೂಟರ್ ಕೊಡುಗೆ
ಟಿಮಿನೊಸ್ ಐಟಿ ಸಂಸ್ಥೆ ನಮ್ಮ ವಿಧ್ಯಾ ಸಂಸ್ಥೆಗೆ CSR ಅಡಿಯಲ್ಲಿ ಮಕ್ಕಳಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಆಧುನಿಕ ಹಾಗು ಗುಣಮಟ್ಟದ ಹೆಚ್ಚು ಬೆಲೆ ಬಾಳುವ 24 ಕಂಪ್ಯೂಟರ್ ಗಳನ್ನು ನೀಡಲಾಗಿದೆ. ಇನ್ನು ಮುಂದೆ ಹೋಗಿ ಇಬ್ಬರು ವಿಕಲಾಂಗರಿಗೆ 1.5 ಲಕ್ಷ ಬೆಲೆ ಬಾಳುವ ಮೋಟಾರ್ ಗಾಡಿಯನ್ನು ಉಚಿತವಾಗಿ ನೀಡಲಾಗಿದೆ. ಟೆಮಿನೋಸ್ ಇಂಡಿಯ ಕಂಪನಿಯವರು 30 ರಿಂದ 40 ಲಕ್ಷ ಖರ್ಚು ಮಾಡಿ ಸಂಸ್ಥೆಯ ಮಕ್ಕಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ, ಮುಂದಿನ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರೊಜೆಕ್ಟರ್, ಶಾಲಾ ಸಮವಸ್ತ್ರ, RO ಕುಡಿಯುವ ನೀರು, ಗಿಡ ಮರ, ಸೋಲಾರ್ ಸೇರಿದಂತೆ ಅನೇಕ ಯೋಜನೆಗಳನ್ನು ಮಾಡಿಕೊಡುತ್ತೇವೆ ಎಂದು ಆಶಾಭಾವನೆ ನೀಡಿದ್ದಾರೆ ಎಂದು ಅವರಿಗೆ ಧನ್ಯವಾದ ತಿಳಿಸಿದರು.