ದಾವಣಗೆರೆ: ಭಾರತದ ಪ್ರಮುಖ ಜನರ ಆಕರ್ಷಣೆಯಾಗಿರುವ, ಚಿಲ್ಲರೆ ವ್ಯಾಪಾರಗಳಲ್ಲಿ ಒಂದಾದ ಸಾಯಿ ಸಿಲ್ಕ್ ಕಲಾಮಂದಿರ್ ಲಿಮಿಟೆಡ್ (SSKL) ಅಂಗ ಸಂಸ್ಥೆಯಾದ ಕಾಂಚೀಪುರಂ ವರಮಹಾಲಕ್ಷ್ಮಿ ಸಿಲ್ಕ್ ಹೊಸ ಮಳಿಗೆಯನ್ನು ದಾವಣಗೆರೆಯಲ್ಲಿ ಅನಾವರಣಗೋಳಿಸುವ ಮೂಲಕ ದಕ್ಷಿಣ ಭಾರತದಲ್ಲಿ ತನ್ನ ಬ್ರಾಂಡ್ ನ ಮತ್ತೊಂದು ವಿಸ್ತರಣೆ ಮಾಡಿದೆ.
ದಾವಣಗೆರೆಯ ಬಾಪೂಜಿ ಡೆಂಟಲ್ ಕಾಲೇಜ್ ರಸ್ತೆ,(ಬಾಪೂಜಿ ಆಸ್ಪತ್ರೆ ಹತ್ತಿರ ) ಕಾಂಚಿಪುರಂ ವರಮಹಾಲಕ್ಷ್ಮಿ ಸಿಲ್ಕ್ಸ್ ಹೊಸ ಮಳಿಗೆಯನ್ನು ಶ್ರೀ ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದ ಶ್ರೀ ಶ್ರೀ ಷ.ಬ್ರ.ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರು ಉದ್ಘಾಟನೆ ಮಾಡಿದವರು.
ಈ ವೇಳೆ ಸಾಯಿ ಸಿಲ್ಕ್ಸ್ ಕಲಾಮಂದಿರ್ ಲಿಮಿಟೆಡ್ನ ನಿರ್ದೇಶಕ ದುರ್ಗಾರಾವ್ ಚಲವಾದಿ ಮಾತನಾಡಿ, ದಾವಣಗೆರೆಯಲ್ಲಿ 69ನೇ ಕಾಂಚಿಪುರಂ ವರಮಹಾಲಕ್ಷ್ಮಿ ಸಿಲ್ಕ್ಸ್ ಹೊಸ ಮಳಿಗೆ ಉದ್ಘಾಟನೆ ಮಾಡುವ ಮೂಲಕ ದಕ್ಷಿಣ ಭಾರತದಲ್ಲಿ ತನ್ನ ಬ್ರ್ಯಾಂಡ್ ವಿಸ್ತರಣೆ ಮುಂದುವರೆಸಿದೆ, ಹೊಸ ಸ್ವರೂಪದಲ್ಲಿ ಕರ್ನಾಟಕದಲ್ಲಿ 5ನೇ ಶೋ ರೂಂ ಪ್ರಾರಂಭಿಸಲಾಗಿದೆ. ಗ್ರಾಹಕರಿಗೆ ಸಾಟಿಯಿಲ್ಲದ ದೇಸಿ ಉತ್ಪನ್ನದ ಮೌಲ್ಯವನ್ನು ನೀಡುತ್ತದೆ. ಇದರ ವ್ಯಾಪಕ ಸಂಗ್ರಹವು ಕಾಂಚೀಪುರಂ ರೇಷ್ಮೆ ಸೀರೆಗಳು, ಬನಾರಸಿ, ಪಟೋಲಾ, ಕೋಟಾ, ಪೈಥಾನಿ, ಆರ್ಗನ್ಜಾ, ಕುಪ್ಪಡಂ, ಇಕ್ಕತ್, ಬಂಧನಿ ಸೇರಿದಂತೆ ಹತ್ತು ಹಲವು ಬ್ರ್ಯಾಂಡ್ ಗಳು ಒಳಗೊಂಡಿದೆ – ಮದುವೆ, ಹಬ್ಬದ ಸಂದರ್ಭಗಳು, ಶುಭಸಮಾರಂಭಗಳ ಮತ್ತು ದೈನಂದಿನ ಸೊಬಗುಗಳನ್ನು ಪೂರೈಸುತ್ತದೆ. ಮಳಿಗೆಯಲ್ಲಿ 1 ಸಾವಿರದಿಂದ 2.5 ಲಕ್ಷ ಬೆಲೆ ವರೆಗೆ ತರಹೇವಾರಿ ಉಡುಪುಗಳು ಲಭ್ಯವಿದೆ. ಇವೆಲ್ಲವೂ ಸಹಾ SSKLನ ಒಂದೇ ಸೂರಿನಡಿ ಸಿಗುವುದು ಹೆಗ್ಗಳಿಕೆಯಾಗಿದೆ.
ಕರ್ನಾಟಕದಲ್ಲಿ ಬಲವಾದ, ಸಾಂಪ್ರದಾಯಿಕ ಮತ್ತು ಸಮಕಾಲೀನ ನೇಯ್ಗೆಗಳಲ್ಲಿ ಗುಣಮಟ್ಟದ ಕಡಿಮೆ ಬೆಲೆಯಲ್ಲಿ ನೀಡುವ ಸೀರೆ ಶಾಪಿಂಗ್ ಅನುಭವವನ್ನು ಗ್ರಾಹಕರು ಮರು ವ್ಯಾಖ್ಯಾನಿಸುವ ಗುರಿಯನ್ನು ನಾವು ಹೊಂದಿದ್ದೇವೆ.
ಕರ್ನಾಟಕದಲ್ಲಿ ತನ್ನ ನೆಲೆಯನ್ನು ಬಲಪಡಿಸಲು, SSKL ವಿನೂತನವಾದ ಕೆಲಸಗಳನ್ನು ಮಾಡಿಕೊಂಡು ಬರಲಾಗುತ್ತದೆ. ಗ್ರಾಹಕರಿಗೆ ಗುಣಮಟ್ಟದ ಸಾಂಪ್ರದಾಯಿಕ ಮಗ್ಗದ ಅನುಭವವನ್ನು ನೀಡಲಾಗುತ್ತದೆ.
ಕಾಂಚಿಪುರಂ ವರಮಹಾಲಕ್ಷ್ಮಿ ಸಿಲ್ಕ್ ನೂತನ ಮಳಿಗೆಯಲ್ಲಿ ನೂರಾರು ಶೈಲಿಯ ಉಡುಪುಗಳು ಒಂದೇ ಕಡೆ ಸಿಗಲಿದೆ. ನಮ್ಮ ಮಳಿಗೆಯಲ್ಲಿ ಎಲ್ಲಾ ತರಹದ ಶುಭಸಮಾರಾಂಭಗಳಿಗೆ ಹೇಳಿ ಮಾಡಿಸಿದಾಗಿದೆ. ಮಾರುಕಟ್ಟೆಗಳಿಗ್ಗಿಂತ ಗುಣಮಟ್ಟದ ಕೈ ಮಗ್ಗದಲ್ಲಿ ತಯಾರಾಗಿರುವ ಆಕರ್ಷಕ ಬಣ್ಣಗಳು,ಕಡಿಮೆ ಬೆಲೆಯಲ್ಲಿ ವಿವಿಧ ನಮೂನೆಯ ಉಡುಪುಗಳು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಸಿಗಲಿವೆ ಎಂದರು. ಹಬ್ಬ ಹರಿದಿನದ ದಿನಗಳಲ್ಲಿ ವಿಶೇಷವಾದಂತಹ ರಿಯಾಯಿತಿಯ ಸೌಲಭ್ಯಗಳು ನಮ್ಮ ಮಳಿಗೆಯಲ್ಲಿ ಮಾಡಿಕೊಡಲಾಗುತ್ತದೆ ಎಂದರು.
ನೂತನ ಮಳಿಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ದುರ್ಗಾರಾವ್ ಚಲವಾದಿ, ಝಾನ್ಸಿ ಚಲವಾದಿ, ಕಲ್ಯಾಣ ಅಣ್ಣಮ್,ಬಂದುಗಳು, ಸ್ನೇಹಿತರು, ಗಣ್ಯರು, ಸಿಬ್ಬಂದಿ ವರ್ಗದವರು ಇದೆ ವೇಳೆ ಉಪಸ್ಥಿತರಿದ್ದರು