ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಗೆ ಆರೋಗ್ಯ ರಕ್ಷಣೆಯ ಹೊಸ ಯುಗವನ್ನು ಪ್ರಾರಂಭಿಸಲು ಜಯನಗರದಲ್ಲಿ ನೂತನವಾಗಿ ರಿಕಪ್ ಆಸ್ಪತ್ರೆಯನ್ನು ತೆರೆಯಲಾಗಿದೆ.
ನೂತನ ಆಸ್ಪತ್ರೆಯನ್ನು ಉದ್ಘಾಟಿಸಿ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ರಿಕಪ್ ಆಸ್ಪತ್ರೆಯ ಮಾಲೀಕರಾದ ಡಾ.ದೀಪಕ್ ಶರಣ್ ಅವರ ನೇತೃತ್ವದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ ಮಾಡಲು ವಿಶೇಷ ವಿನ್ಯಾಸವುಳ್ಳ ಆಸ್ಪತ್ರೆ ಕಟ್ಟಡ ಸುಸಜ್ಜಿತವಾಗಿದ್ದು, ಆರೋಗ್ಯ ಕ್ಷೇತ್ರದಲ್ಲಿ ಸುಮಾರು 35 ವರ್ಷಗಳ ಅಮೋಘ ಸಾಧನೆ ಮಾಡಿದ ಅನುಭವವಿದೆ.
ಆರೋಗ್ಯ ಸಮಸ್ಯೆಗಳ ಮೂಲ ಕಾರಣಗಳನ್ನು ಪರಿಹರಿಸುವ ಮೂಲಕ ವ್ಯಕ್ತಿಗಳನ್ನು ಪೂರ್ಣವಾಗಿ ಬದುಕಲು ಸಶಕ್ತಗೊಳಿಸುವುದರಲ್ಲಿ ರಿಕಪ್ ಆಸ್ಪತ್ರೆ ದಿಟ್ಟ ಹೆಜ್ಜೆ ಇಟ್ಟಿದೆ. ಗುಣಮಟ್ಟದ ಚಿಕಿತ್ಸೆ ನೀಡುವ, ವ್ಯಕ್ತಿಗಳು ಶಾಶ್ವತ ಯೋಗಕ್ಷೇಮವನ್ನು ಸಾಧಿಸಲು ಸಹಾಯ ಮಾಡುವ ಬದ್ಧತೆಯಾಗುದೆ ಎಂದರು.
ಆಸ್ಪತ್ರೆಯನ್ನು ನಡೆಸಿಕೊಂಡು ಹೋಗುತ್ತಿರುವ ಡಾ. ದೀಪಕ್ ಶರಣ್ ಮಾತನಾಡಿ, ಎಲ್ಲಾ ರೋಗಿಗಳಿಗೂ ಗುಣಮಟ್ಟದ ಆರೋಗ್ಯದ ಜೊತೆಗೆ ಉತ್ತಮ ಆಸ್ಪತ್ರೆಯ ವಾತಾವರಣ ನಿರ್ಮಾಣ ಮಾಡಲಾಗಿದೆ. ಆರೋಗ್ಯ ರಕ್ಷಣೆಯ ಹೊಸ ತಂತ್ರವನ್ನು ನಮ್ಮ ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ. ತಕ್ಷಣದ ರೋಗಲಕ್ಷಣಗಳನ್ನು ಪರಿಹರಿಸಲು, ಮೂಲ ಕಾರಣಗಳನ್ನು ಬಹಿರಂಗಪಡಿಸಲು, ದೀರ್ಘಾವಧಿಯ ಆರೋಗ್ಯವನ್ನು ಉತ್ತೇಜಿಸಲು ರಿಕಪ್ ಒಂದು ಅದ್ಭುತವಾದ ಆರೋಗ್ಯ ಸಂಸ್ಥೆಯಾಗಿದೆ.
ರಿಪಕ್ ಆಸ್ಪತ್ರೆಯಲ್ಲಿ 4R ಅಪ್ರೋಚ್-ರಿಲೀಫ್, ರೂಟ್-ಕಾಸ್ ರಿವರ್ಸಲ್, ರಿಬ್ಯಾಲೆನ್ಸ್ ಮತ್ತು ರಿಜೆನೆರೇಶನ್-ಆಫರ್ ಸಮಗ್ರ ಚಿಕಿತ್ಸೆಯನ್ನು ಅಳವಡಿಸಿಕೊಂಡಿದೆ. ಈ ಮೂಲಕ ನಾಡಿನ ಜನರಿಗೆ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಬಾಂಧವ್ಯ ಹೊಂದುವ ಕೆಲಸವನ್ನು ಮಾಡಲಾಗುತ್ತದೆ ಎಂದರು. ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಾ.ದೀಪಕ್ ಶರಣ್ ಅವರ ಪತ್ನಿ, ಮಕ್ಕಳು, ಸ್ನೇಹಿತರು, ಬಂದುಗಳು, ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.