ಅಯೋಧ್ಯೆ (ಉತ್ತರ ಪ್ರದೇಶ): 5 ಶತಮಾನಗಳ ಕನಸು ಇದೀಗ ನನಸಾಗಿದೆ. ಅಯೋಧ್ಯೆಯಲ್ಲಿ ಪುನರ್ ನಿರ್ಮಾಣವಾದ ಭಗವಾನ್ ಶ್ರೀರಾಮನ ಮಂದಿರ ಲೋಕಾರ್ಪಣೆಗೊಳ್ಳುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು.
ಪ್ರದಾನ ಮಂತ್ರಿ ನರೇಂದ್ರ ಮೋದಿ ಅವರು ಗರ್ಭ ಗುಡಿಯಲ್ಲಿ ಶ್ರೀರಾಮನ ಮೂರ್ತಿಗೆ ಪೂಜಾ ಕೈಂಕರ್ಯಗಳನ್ನು, ಹೋಮ ಹವನ, ರಾಮನ ಪಾರಾಯಣ ಹೀಗೆ ಹತ್ತುಹಲವು ಪೂಜಾ ವಿಧಿ ವಿಧಾನ ನಡೆಸಿ ಪ್ರಾಣ ಪ್ರತಿಷ್ಠಾಪನೆ ಮಾಡುವ ಮೂಲಕ ಆಧ್ಯಾತ್ಮ ಜೊತೆಗೆ, ದೇಶದ ದೊಡ್ಡ ಶಕ್ತಿಯನ್ನು ಹೆಚ್ಚಿಸಿದ್ದಾರೆ. ಸತತ 1 ಗಂಟೆಗಳ ಕಾಲ ಶ್ರೀ ರಾಮನಿಗೆ ಪೂಜೆ ನೆರವೇರಿಸಲಾಯಿತು. ಮೂ
ಕಾರ್ಯಕ್ರಮಕ್ಕೆ ವಿಶ್ವದ ಗಣ್ಯರು ಸಾಕ್ಷಿ
ಈ ಅಭೂತಪೂರ್ವ ಸನ್ನಿವೇಶಕ್ಕೆ ವಿಶ್ವದ 50 ದೇಶಗಳ 92 ಗಣ್ಯ ಅತಿಥಿಗಳು ಸಾಕ್ಷಿಯಾದರು. ಭಾರತದ ಉದ್ಯಮಿಗಳು, ಸಿನೆಮಾ ಹಾಗೂ ಕ್ರಿಕೆಟ್ ತಾರೆಗಳು, ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರು, ಮಠಾಧೀಶರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಇಡೀ ದೇಶವೇ ಕಾದು ಕುಳಿತಿದ್ದ ಈ ಸುಸಂದರ್ಭ ನಿರ್ವಿಘ್ನವಾಗಿ ನೆರವೇರಿದೆ. ಅಯೋಧ್ಯಾ ರಾಮ ಮಂದಿರದಲ್ಲಿ ಭಗವಾನ್ ಶ್ರೀರಾಮ ಬಾಲ್ಯ ಸ್ವರೂಪದ ಬಾಲ ರಾಮನ ಮೂರ್ತಿ ಅನಾವರಣಗೊಂಡಿದೆ. ಈ ಪ್ರಾಣ ಪ್ರತಿಷ್ಠಾಪನಾ ವಿಧಿ ವಿಧಾನದಲ್ಲಿ ಭಾರತದ ಸಾವಿರಾರು ಗಣ್ಯರ ಜೊತೆಯಲ್ಲೇ ವಿದೇಶಗಳ 92 ಗಣ್ಯ ಅತಿಥಿಗಳೂ ಭಾಗವಹಿಸಿದ್ದರು. ಈ ಮೂಲಕ ಭಾರತದ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು!
ದೇಶದಲ್ಲಿ ಶ್ರೀ ರಾಮನ ಸಂಭ್ರಮ ಸಡಗರ
ಅಯೋಧ್ಯೆ ರಾಮಮಂದಿರ ಉದ್ಘಾಟನೆ ಹಿನ್ನೆಲೆ ಇಡೀ ದೇಶಾದ್ಯಂತ ಸಂಭ್ರಮಾಚರಣೆಯ ಮುಗಿಲು ಮುಟ್ಟಿದೆ. ದೇವಾಲಯ, ಮನೆ, ರಸ್ತೆಗಳಲ್ಲಿ ವಿಶೇಷ ಪೂಜೆ, ಭಜನೆ, ಮಂತ್ರ ಪಠಣ, ಪ್ರಸಾದ ವಿತರಣೆ ಸೇರಿದಂತೆ ಅನೇಕ ಕಾರ್ಯಕ್ರಮ ಹಮ್ಮಿಕೊಳುವ ಕೆಲಸವನ್ನು ರಾಮನ ಭಕ್ತರು ಮಾಡಿದರು. ಅಲ್ಲದೆ ಸಾರ್ವಜನಿಕರು ರಾಮನ ಪ್ರಾಣ ಪ್ರತಿಷ್ಟಾಪನೆ ಕಾರ್ಯಕ್ರಮವನ್ನು ನೇರವಾಗಿ ತೋರಿಸಲು ಬೃಹತ್ LED ಪರದೆ ಹಾಕುವ ಮೂಲಕ ಅವಕಾಶವನ್ನು ಕಲ್ಪಿಸಲಾಗಿತ್ತು.
ಮಂದಿರದ ಸುತ್ತ ಭದ್ರತೆ,VIP ಗಳಿಗೆ ಅವಕಾಶ:
ಶ್ರೀ ರಾಮನ ಮಂದಿರದ ಸುತ್ತಲೂ ಹಾಗು ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಖಾಕಿ ಬದ್ರತೆ ನಿಯೋಜಿಸಲಾಗಿದೆ. ಅದರಲ್ಲಿ ಎನ್ಎಸ್ಜಿ ಸ್ನೈಪರ್ಗಳ ಎರಡು ತಂಡಗಳು, ಎಟಿಎಸ್ ಕಮಾಂಡೋಗಳ 6 ತಂಡಗಳು ಅಯೋಧ್ಯಾ ಶ್ರೀರಾಮ ಮಂದಿರಕ್ಕೆ ಬರುವ ಗಣ್ಯ ಅತಿಥಿಗಳ ಭದ್ರತೆಯ ಉಸ್ತುವಾರಿ ವಹಿಸಿಕೊಂಡಿವೆ. ಬರೋಬ್ಬರಿ 15 ಸಾವಿರ ಪೊಲೀಸರನ್ನು ಅಯೋಧ್ಯೆಯಲ್ಲಿ ಭದ್ರತೆಗೆ ನಿಯೋಜಿಸಲಾಗಿದೆ. ಉತ್ತರ ಪ್ರದೇಶ ಪೊಲೀಸರಿಗೆ ಅರೆ ಸೇನಾ ಪಡೆ ಕೂಡಾ ಭದ್ರತೆಯ ನೆರವು ನೀಡಿದೆ.ಅಯೋಧ್ಯೆಯ ತುಂಬೆಲ್ಲಾ ಒಟ್ಟು 250 ಕೃತಕ ಬುದ್ಧಿಮತ್ತೆ ಆಧರಿತ ಹೈ ರೆಸೆಲ್ಯೂಷನ್ ಕ್ಯಾಮರಾಗಳನ್ನು ಅಳವಡಿಕೆ ಮಾಡಲಾಗಿದೆ. ಮಂದಿರದ ಆವರಣದಲ್ಲಿ ಕೇವಲ ವಿಐಪಿ ಹಾಗು ವಿವಿಐಪಿ ಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇಡೀ ಶ್ರೀ ರಾಮ ಮಂದಿರ ಸುತ್ತ ಕೆಂಪು ವಲಯ ಎಂದು ಸೂಚಿಸಲಾಗಿದ್ದು, ಅಧಿಕೃತವಾಗಿ ಒಳಗಡೆ ಪ್ರವೇಶಕ್ಕೆ ಅವಕಾಶ ನೀಡಿಲ್ಲ.
ರಾಮಮಂದಿರ ವಿದ್ಯುತ್ ದೀಪಾಲಂಕಾರದಿಂದ ಜಗಮಗ
ಆಯೋಧ್ಯಯಲ್ಲಿರುವ ನೂತನ ಶ್ರೀ ರಾಮ ಮಂದೀರಕ್ಕೆ ತರಹೇವಾರಿ ವಿದ್ಯುತ್ ದೀಪಾಲಂಕಾರ ದಿಂದ ಕಂಗೊಳಿಸುತ್ತಿದೆ. ಇಡೀ ಅಯೋಧ್ಯೆಯ ಪ್ರಮುಖ ಬೀದಿಗಳು, ಮಂದಿರಗಳು, ಆಸ್ಪತ್ರೆ, ಹೋಟೆಲ್, ಸಾರ್ವಜನಿಕ ಸ್ಥಳಗಳು,ಮನೆ,ಅಪಾರ್ಟಮೆಂಟ್ಗಳು, ಹೀಗೆ ಎಲ್ಲ ಕಡೆ ದೀಪಾಂಕಾರ ಮಾಡಲಾಗಿದೆ. ರಸ್ತೆಗಳಿಗೆ ಆಧುನಿಕ ಸ್ಪರ್ಶ ನೀಡಲಾಗಿದೆ, ರಸ್ತೆ ಅಗಲೀಕರಣ, ಸ್ವಚ್ಚತೆ, ರಸ್ತೆಗಳ ತುಂಬೆಲ್ಲ ಶ್ರೀರಾಮನ ಪುರಾಣದ ಆದಾರಿತ ಕಥೆಗಳ ಬ್ಯಾನರ್, ಪೋಸ್ಟರ್,ದೊಡ್ಡ ದೊಡ್ಡ ಫ್ಲೆಕ್ಸಗಳು ಇಡೀ ನಗರವನ್ನು ಸುತ್ತುವರೆದಿವೆ. ಅಯೋಧ್ಯೆ ನಗರ ದೇಶ, ವಿವಿಧ ರಾಜ್ಯಗಳ ಜನರನ್ನು ತನ್ನತ್ತ ಸೆಳೆಯುತ್ತಿವೆ. ಇಡೀ ಅಯೋಧ್ಯಾ ನಗರವನ್ನು ಒಟ್ಟು 2,500 ಕ್ವಿಂಟಲ್ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು..
ಆಯೋದ್ಯೆಗೆ ಆಗಮಿಸದ ಬಿಜೆಪಿ ನಾಯಕರು?
ಆಯೋಧ್ಯೆಯ ಶ್ರೀ ರಾಮನ ಪ್ರಾಣ ಪ್ರತಿಷ್ಟಾಪನೆ ಕಾರ್ಯಕ್ರಮಕ್ಕೆ ಕರ್ನಾಟಕ ಸೇರಿದಂತೆ ಇತರೆ ರಾಜ್ಯದ ಬಿಜೆಪಿ ನಾಯಕರುಗಾಗಲಿ ಕೇಂದ್ರದ ನಾಯಕರು ಆಯೋಧ್ಯೆಗೆ ಬಂದಿರಲಿಲ್ಲ. ಸ್ವತಃ ಮೋದಿಯೇ ಅವರಿಗೆ ಹೇಳಿದ್ರು ಎಂಬುದು ಮೂಲಗಳಿಂದ ತಿಳಿದಿದೆ. ಬದಲಿಗೆ ಅವರವರ ಕ್ಷೇತ್ರ, ನಗರದಲ್ಲಿ ಉದ್ಘಾಟನೆ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ಹೇಳಿದ್ದರು ಎಂಬುದು ತಿಳಿದುಬಂದಿದೆ. ಹೀಗಾಗಿ ಪಕ್ಷದ ಯಾವೊಬ್ಬ ನಾಯಕನೂ ಅಯೋಧ್ಯೆಗೆ ಆಗಮಿಸಿರಲಿಲ್ಲ.
ಅಯೋಧ್ಯೆಯಲ್ಲಿ ಶ್ರೀರಾಮನ ದೇವಾಲಯದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಟಾಪನೆ ಕಾರ್ಯಕ್ರಮವನ್ನು ನೆರವೇರಿಸಲು ಕೇವಲ ಇಬ್ಬರು ಪ್ರದಾನ ಅರ್ಚಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಪ್ರಧಾನಿ ಮೋದಿ ಜೊತೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಪೇಜಾವರ ಶ್ರೀ ಇದ್ದರು.