ಬೆಂಗಳೂರು: ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಆಗಸ್ಟ್ 8 ರಿಂದ 14ವರೆಗೆ ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ “ಆರಾಧನಾ” ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ನೆರವೇರಲಿದೆ,
ಈ ಮಹೋತ್ಸವದ “ಉದ್ಘಾಟನೆ”ಯ ಅಂಗವಾಗಿ ಪೇಜಾವರ ಮಠದ ಪರಮಪೂಜ್ಯ ಶ್ರೀ1008 ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರನ್ನು ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರ ಆಚಾರ್ಯರು ಆರಾಧನಾ ಮಹೋತ್ಸವದ ಉದ್ಘಾಟನೆಗಾಗಿ ಆಹ್ವಾನಿಸಿದರು.ಈ ಸಂದರ್ಭದಲ್ಲಿ ಶ್ರೀ ನಂದಕಿಶೋರ್ ಆಚಾರ್ಯರು ಹಾಗೂ ಪೇಜಾವರ ಶ್ರೀಗಳ ಪರ್ಸನಲ್ ಸೆಕ್ರೆಟರಿ ಶ್ರೀ ಕೃಷ್ಣಮೂರ್ತಿ ಭಟ್ ರವರು ಉಪಸ್ಥಿತರಿದ್ದರು.
ವಿಶೇಷವಾಗಿ ಶ್ರೀ ರಾಘವೇಂದ್ರ ಸ್ವಾಮಿಗಳ “ಆರಾಧನಾ” ಮಹೋತ್ಸವದ ಪೂರ್ವಭಾವಿಯಾಗಿ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರಿಂದ “ಶ್ರೀಮದ್ರಾಮಾಯಣ” ಪ್ರವಚನವು ಅಗಸ್ಟ್ 6 , 7 ಮತ್ತು 8 ರಂದು ಸಂಜೆ 6:30 ರಿಂದ 7:30ರ ವರೆಗೆ ಶ್ರೀ ಮಠದ ಆವರಣದಲ್ಲಿ ನೆರವೇರಲಿದ್ದು 8ನೇ ತಾರೀಖಿನಂದು “ಆರಾಧನಾ” ಸಪ್ತರಾತ್ರೋತ್ಸವದ “ಉದ್ಘಾಟನೆ”ಯನ್ನು ಪರಮಪೂಜ್ಯ ಶ್ರೀಪಾದರು ತಮ್ಮ ಅಮೃತ ಹಸ್ತದಿಂದ ನೆರವೇರಿಸಲಿದ್ದಾರೆ ಎಂದು ಆರ್ ಕೆ ವಾದೀಂದ್ರ ಆಚಾರ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.