ಬೆಂಗಳೂರು: 2023ರಲ್ಲಿ ಬೆಂಗಳೂರಿನ ಇನ್ನರ್ ವೀಲ್ ಕ್ಲಬ್ ವತಿಯಿಂದ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, 2024ರಲ್ಲಿಯೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕ್ಲಬ್ ನ ನೂತನ ಅಧ್ಯಕ್ಷರಾದ ಪವಿತ್ರ ರೆಡ್ಡಿ ಅವರು ತಿಳಿಸಿದರು.
ಬೆಂಗಳೂರಿನ ಲ್ಯಾವೆಲ್ಲಿ ರಸ್ತೆಯಲ್ಲಿರುವ ಬೆಂಗಳೂರು ರೋಟರಿ ಹೌಸ್ ಆಫ್ ಫ್ರೆಂಡ್ಶಿಪ್ ನಲ್ಲಿ ಬೆಂಗಳೂರಿನ ಇನ್ನರ್ ವೀಲ್ ಕ್ಲಬ್ನ ನೂತನ ಅಧ್ಯಕ್ಷರ ಮತ್ತು ಕಾರ್ಯಕಾರಿ ಸಮಿತಿಯವರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು, ಸಂಸ್ಥೆಯ ಮುಖ್ಯ ಧ್ಯೇಯವಾಕ್ಯವೆಂದರೆ ಫೆಲೋಶಿಪ್ ಮತ್ತು ಸೇವೆ ಮಾಡುವುದು, ನಮಗೆ ಯಾವುದೇ ರೀತಿಯ ಅನುದಾನವು ಎಲ್ಲಿಂದಲೂ ಬರುವುದಿಲ್ಲ ಯಾರು ಸಹ ಕೊಡುವುದಿಲ್ಲ, ಕ್ಲಬ್ ನ ಸದಸ್ಯರೆಲ್ಲರೂ ಸೇರಿಕೊಂಡು ಹಣವನ್ನು ಹಾಕಿಕೊಂಡು ಸಮಾಜಮುಖಿ ಕೆಲಸಗಳನ್ನು ಮಾಡುತ್ತವೆ.
ಕ್ಯಾನ್ಸರ್ ಅವೇರ್ನೆಸ್ ಪ್ರೋಗ್ರಾಮ್, ಬುದ್ಧಿಮಾಂದ್ಯ ಮಕ್ಕಳಿಗೆ ಸಹಾಯ, ಅಂದರು ಆಟವಾಡುವ ಕ್ರಿಕೆಟ್ ಕ್ರೀಡೆಗೆ ಪ್ರೋತ್ಸಾಹ ಹಾಗೂ ಸಹಾಯಧನ, ಅಲ್ಲದೆ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಹಾಗೂ ಬಡ ಮಕ್ಕಳ ವ್ಯಾಸಂಗಕ್ಕೆ ವಿದ್ಯಾರ್ಥಿ ವೇತನವನ್ನು ಸಹ ನೀಡಲಾಗುತ್ತದೆ. ಬಹಳ ಮುಖ್ಯವಾಗಿ ಗೋಶಾಲೆಗಳಲ್ಲಿ ಗೋವುಗಳ ಆರಾಧನೆ ಹಾಗೂ ರಕ್ಷಣೆಯ ಕೆಲಸವನ್ನು ಸಹ ಮಾಡಲಾಗುತ್ತದೆ ಎಂದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕ್ಲಬ್ ನ ಮುಖ್ಯಸ್ಥರಾದ ಶ್ರೀಮತಿ ಮಾಸ್ಟರ್ ಅವರು ಭಾಗವಹಿಸಿ ಮಾತನಾಡಿದರು, 2023ರಲ್ಲಿ ಕ್ಲಬ್ಬಿನ ಅಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳು ಅಭಿವೃದ್ಧಿ ಕೆಲಸ ಕಾರ್ಯಗಳ ಬಗ್ಗೆ ವಿವರಗಳನ್ನು ನೀಡಿದರು.ಪವಿತ್ರಾ ರೆಡ್ಡಿ ಅವರನ್ನು ಈ ಕ್ಲಬ್ನ 59 ನೇ ಅಧ್ಯಕ್ಷರಾಗಿ ಪದಗ್ರಹಣ ಮಾಡಲಾಗಿದೆ. ರಾಜ್ಯ ಸೇರಿದಂತೆ ಹೊರ ರಾಜ್ಯಗಳಲ್ಲಿ ಮಾಡಿರುವ ಸಮಾಜಮುಖಿ ಕೆಲಸಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕ್ಲಬ್ ನ ಸದಸ್ಯರಿಗೆ ತಿಳಿಸಿದರು.
ಸದಸ್ಯರ ಸಂಪೂರ್ಣ ಬೆಂಬಲದೊಂದಿಗೆ ಚಾಲ್ತಿಯಲ್ಲಿರುವ ಯೋಜನೆಗಳನ್ನು ಕೈಗೊಳ್ಳುವ ಮೂಲಕ ಮತ್ತು ಹೊಸದನ್ನು ಪ್ರಾರಂಭಿಸುವ ಮೂಲಕ ತನ್ನ ಅಧ್ಯಕ್ಷರ ಅವಧಿಯಲ್ಲಿ ಕ್ಲಬ್ನ ಶ್ರೇಷ್ಠ ಪರಂಪರೆಯನ್ನು ಮುಂದುವರಿಸುವಲ್ಲಿ ಅವರು ತುಂಬಾ ಉತ್ಸಾಹಭರಿತರಾಗಿದ್ದಾರೆ ಎಂದರು.
ಕ್ಲಬ್ ಬೆಳೆದು ಬಂದ ಹಾದಿ:
ಇಂಟರ್ನ್ಯಾಷನಲ್ ಇನ್ನರ್ ವೀಲ್ 1924 ರಲ್ಲಿ ಇಂಗ್ಲೆಂಡ್ನ ಮ್ಯಾಂಚೆಸ್ಟರ್ನಲ್ಲಿ ಸ್ಥಾಪಿಸಲಾದ ಅತಿದೊಡ್ಡ ಅಂತರರಾಷ್ಟ್ರೀಯ ಮಹಿಳಾ ಸೇವಾ ಸಂಸ್ಥೆಯಾಗಿದೆ. ಸಂಸ್ಥೆಯ ಧ್ಯೇಯವಾಕ್ಯವೆಂದರೆ ಫೆಲೋಶಿಪ್ ಮತ್ತು ಸೇವೆ ಮಾಡುವುದು.
ಇನ್ನರ್ ವೀಲ್ ಕ್ಲಬ್ ಆಫ್ ಬೆಂಗಳೂರು ಇನ್ನರ್ ವೀಲ್ ಡಿಸ್ಟ್ರಿಕ್ಟ್ 319 ರ ಭಾಗವಾಗಿದ್ದು, ಬೆಂಗಳೂರು, ಮಂಡ್ಯ ಮತ್ತು ತುಮಕೂರು ಪ್ರದೇಶಗಳನ್ನು ಒಳಗೊಂಡಿದೆ. ಸಮಾಜ ಸೇವೆ ಈ ಗೌರವಾನ್ವಿತ ಸಂಸ್ಥೆಯ ಪ್ರೇರಕ ಶಕ್ತಿಯಾಗಿದೆ. ಶಿಕ್ಷಣ, ಪರಿಸರ, ಆರೋಗ್ಯ ಮತ್ತು ಮಹಿಳಾ ಸಬಲೀಕರಣವು ದತ್ತಿ ಯೋಜನೆಗಳನ್ನು ಕಾರ್ಯಗತಗೊಳಿಸುವ ಕೆಲವು ವಿಭಾಗಗಳಾಗಿವೆ. ಕರ್ನಾಟಕದಲ್ಲಿ 3000 ಜನ ಸದಸ್ಯರಿಗೂ ಡಿಸ್ಟ್ರಿಕ್ಟ್ 319ರಲ್ಲಿ 151 ಜನ ಸದಸ್ಯರಿದ್ದಾರೆ ಎಂದರು.
ಇನ್ನು ಇದೆ ವೇಳೆ ಜ್ಯೋತಿ ಎಂಬ ಹೆಸರಿನಲ್ಲಿ ಕ್ಲಬ್ ನಲ್ಲಿ ಆಗಿರುವ ಹಾಗೂ ಮುಂದೆ ಮಾಡುವ ಕೆಲಸ ಕಾರ್ಯಗಳ ಬಗ್ಗೆ ಕ್ಲಬ್ಬಿನ ಬ್ರೋಚರ್ ಬಿಡುಗಡೆ ಮಾಡಿದರು, ಕ್ಲಬ್ ನ ಹಿರಿಯ ಸಕ್ರಿಯ ಸದಸ್ಯೆ ಪಿಡಿಸಿ ರತ್ನ ಹಿರಣ್ಯ ಅವರಿಗೆ ಅಭಿನಂದಿಸಲಾಯಿತು.
ಕ್ಲಬ್ ನ ಪದಗ್ರಹಣ ಕಾರ್ಯಕ್ರಮದಲ್ಲಿ ಬೆಂಗಳೂರು ರೋಟರಿ ಕ್ಲಬ್ ನ ಅಧ್ಯಕ್ಷರಾದ ಗೌರಿ ಓಜಾ, 2023-24 ಅವಧಿಯಲ್ಲಿನ ಕ್ಲಬ್ ನ ಮಾಜಿ ಅಧ್ಯಕ್ಷೆ ಗೀತಾ ವಿಶ್ವನಾಥನ್, ಕಾರ್ಯದರ್ಶಿ ಶರ್ಮಿಳಾ ಪೆರುಮಾಳ್, 2024-25 ಸಾಲಿನ ಕಾರ್ಯದರ್ಶಿ ಪ್ರಗ್ಯಾ ಜೈನ್ ಉಪಸ್ಥಿತರಿದ್ದರು.