ಬೆಂಗಳೂರು: ಕಮ್ಮವಾರಿ ಸಂಘದ ಕೆ.ಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಬೆಳ್ಳಿಹಬ್ಬದ ಸಭಾಂಗಣದ ಉದ್ಘಾಟನೆಯನ್ನು ಶುಕ್ರವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಪ್ರಾಚಾರ್ಯರಾದ ಡಾ ದಿಲೀಪ್ ಕುಮಾರ್ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಮ್ಮವಾರಿ ಸಂಘಂ (ಡಿ)- 1952 ರ ಅಡಿಯಲ್ಲಿರುವ ಪ್ರತಿಷ್ಠಿತ ತಾಂತ್ರಿಕ ಉನ್ನತ ಶಿಕ್ಷಣ ಸಂಸ್ಥೆಯಾದ ಕೆ.ಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕೆಎಸ್ಐಟಿ), AICTE ಅನುಮೋದನೆ, VTU ಸಂಯೋಜನೆ, NBA ಮಾನ್ಯತೆ ಮತ್ತು NAAC A+ ಶ್ರೇಣಿಯೊಂದಿಗೆ ತನ್ನ ನೂತನ ಬೆಳ್ಳಿ ಹಬ್ಬದ ಸಭಾಂಗಣವನ್ನು ಶುಕ್ರವಾರ, ಏಪ್ರಿಲ್ 4, 2025 ರಂದು ಬೆಳಿಗ್ಗೆ 9:30 ಕ್ಕೆ ಕೆಎಸ್ಐಟಿ ಕ್ಯಾಂಪಸ್ನಲ್ಲಿ ಹೆಮ್ಮೆಯಿಂದ ಉದ್ಘಾಟಿಸುತ್ತದೆ.
ಈ ಅತ್ಯಾಧುನಿಕ ಸೌಲಭ್ಯವು 800 ಆಸನ ಸಾಮರ್ಥ್ಯ ಮತ್ತು ವಿಶ್ವ ದರ್ಜೆಯ ಅಡಿಯೋ ವಿಸುವಲ್ ಉಪಕರಣಗಳನ್ನು ಹೊಂದಿದ್ದು ವಿದ್ಯಾರ್ಥಿಗಳ ಸಬಲೀಕರಣಕ್ಕಾಗಿ ಬಳಸಲಾಗುತ್ತದೆ ಎಂದರು.
ಕರ್ನಾಟಕ ಸರ್ಕಾರದ ಸಾರಿಗೆ ಮತ್ತು ಮುಜರಾಯಿ ಸಚಿವರಾದ ಮುಖ್ಯ ಅತಿಥಿ ರಾಮಲಿಂಗಾ ರೆಡ್ಡಿ ಅವರು ಸಮಾರಂಭದಲ್ಲಿ ಉಪಸ್ಥಿತರಿರುವರು. ಮಾಜಿ ಸಚಿವರಾದ ಕಟ್ಟಾಸುಬ್ರಮಣ್ಯ ನಾಯ್ಡು, ಮತ್ತು ಕಮ್ಮವಾರಿ ಸಂಘದ ಸಲಹಾ ಸಮಿತಿಯ ಅಧ್ಯಕ್ಷರಾದ ಕೆ ಕೃಷ್ಣ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸುವರು.
ಕಮ್ಮವಾರಿ ಸಂಘದ ಅಧ್ಯಕ್ಷರಾದ ಆರ್ ರಾಜಗೋಪಾಲ್ ನಾಯ್ಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕಮ್ಮವಾರಿ ಸಂಘದ ಗೌರವ ಕಾರ್ಯದರ್ಶಿ ಆರ್ ಲೀಲಾಶಂಕರ್ ರಾವ್ ಮತ್ತು ಕಮ್ಮವಾರಿ ಸಂಘದ ಖಜಾಂಚಿ ಟಿ. ನೀರಜಾಕುಲು ನಾಯ್ಡು ಸೇರಿದಂತೆ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು ಕೆಎಸ್ಜಿಐ ಸಿಇಒ ಡಾ. ಕೆ. ವಿ.ಎ.ಬಾಲಾಜಿ ಮತ್ತು ಕೆಎಸ್ಐಟಿ ಪ್ರಾಂಶುಪಾಲರು/ನಿರ್ದೇಶಕರಾದ ಡಾ ದಿಲೀಪ್ ಕುಮಾರ್ ಕೆ. ಕೂಡ ಉಪಸ್ಥಿತರಿರುವರು.