ಬೆಂಗಳೂರು : ಕರ್ನಾಟಕ ರಾಜ್ಯ ವಿವಿಧ ವರ್ಗಗಳ ಕೂಲಿ ಕಾರ್ಮಿಕರ ಚಾರಿಟೇಬಲ್ ಕ್ಷೇಮಾಭಿವೃದ್ಧಿ ಸೇವಾ ಟ್ರಸ್ಟ್ ನಿಂದ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಬೆಂಗಳೂರಿನ 3 ಸರ್ಕಾರಿ ಆಸ್ಪತ್ರೆಗಳಲ್ಲಿ ಬಡಾರೋಗ್ಯಗಳಿಗೆ ಹಣ್ಣು ಹಂಪಲು ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದು ಸೇವಾ ಸಮಿತಿಯ ಮುಖ್ಯಸ್ಥರಾದ ಪರಮೇಶ್ ಅವರು ತಿಳಿಸಿದರು.
ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ಬಡ ಕೂಲಿ ಕಾರ್ಮಿಕರ ಪರವಾಗಿ ಅವರ ಸಹಾಯಕ್ಕೆ ನಾವು ನಿಂತಿದ್ದು ಯಾರ ಅನುದಾನವಿಲ್ಲದೆ ಯಾರ ಪ್ರತಿಫಲ ಅಪೇಕ್ಷೆಗಳಿಲ್ಲದೆ ತಮ್ಮ ಸ್ವಂತ ಖರ್ಚಿನಲ್ಲಿ ಬಡಕುಲಿ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ನಿತ್ಯ ಕಾಯಕವಾಗಿ ಶ್ರಮಿಸುತ್ತಿದ್ದೇವೆ ಎಂದರು.
ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಅಂದರೆ ಶುಕ್ರವಾರ ಬೆಳಗ್ಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಕೆಸಿ ಜನರಲ್ ಆಸ್ಪತ್ರೆ ಹಾಗೂ ಬೋರಿಂಗ್ ಆಸ್ಪತ್ರೆ ಗಳಿಗೆ ತೆರಳಿ ನಮ್ಮ ಸೇವಾ ಸಮಿತಿಯ ಪದಾಧಿಕಾರಿಗಳು ಸುಮಾರು 2000 ಕ್ಕಿಂತ ಹೆಚ್ಚು ಹಣ್ಣುಗಳನ್ನು ರೋಗಿಗಳಿಗೆ ವಿತರಣೆ ಮಾಡಲಿದ್ದಾರೆ ಎಂದು ತಿಳಿಸಿದರು.
ಸಹಾಯ ಹಸ್ತ ನೀಡಿದರೆ ಸಮಾಜ ಸೇವೆ ಮತ್ತಷ್ಟು ಹೆಚ್ಚಳ
ನಮ್ಮ ಸಮಾಜಮುಖಿ ಕಾರ್ಯಗಳನ್ನು ಮೆಚ್ಚಿಕೊಂಡು ಸರ್ಕಾರಗಳಾಗಲಿ ಸಂಘ ಸಂಸ್ಥೆಗಳಾಗಲಿ ಯಾವುದೇ ರೀತಿಯಿಂದಲೂ ಸಹ ಸಹಾಯ ಹಸ್ತ ನೀಡಿದರೆ ನಮ್ಮ ಸಮಾಜಮುಖಿ ಸೇವೆಯು ದುಪ್ಪಟ್ಟಾಗಲಿದೆ ಎಂದು ತಿಳಿಸಿದರು.
ಬರೀ ಕೂಲಿ ಕಾರ್ಮಿಕರಿಗೆ ಅಲ್ಲದೆ ಕೂಲಿ ಕಾರ್ಮಿಕರ ಮಕ್ಕಳಿಗೆ ಪುಸ್ತಕ ಪೆನ್ನು ಹಾಗೂ ಸಮವಸ್ತ್ರಗಳನ್ನು ಸಹ ನೀಡುತ್ತಾ ಬಂದಿದ್ದೇವೆ ಹಲವು ಸಮಾಜಮುಖಿ ಕಾರ್ಯಗಳನ್ನು 10 ಹಲವು ವರ್ಷಗಳಿಂದ ಎಲೆಮರೆಕಾಯಿಯಂತೆ ಮಾಡಿಕೊಂಡು ಬರುತ್ತಿದ್ದೇವೆ ಎಂದರು. ಇಲ್ಲಿಯ ತನಕ ನಮ್ಮನ್ನು ಯಾರೂ ಸಹ ಗುರುತಿಸುವ ಕಾರ್ಯವನ್ನು ಮಾಡಿಲ್ಲ ಸರ್ಕಾರವು ಸಹ ಇದರ ಬಗ್ಗೆ ಎಚ್ಚೆತ್ತುಕೊಂಡು ನಮಗೆ ಸಹಾಯ ಸಹಕಾರ ನೀಡಿದರೆ ನಮ್ಮಂತಹ ಸಂಘಟನೆಗಳು ಇನ್ನು ಹೆಚ್ಚಿನ ಪ್ರಮಾಣದಲ್ಲಿ ಸಮಾಜ ಸೇವೆ ಮಾಡಲು ಮುಂದಾಗುತ್ತವೆ ಎಂದು ತಿಳಿಸಿದರು.
ಈ ವೇಳೆ ಪರಮೇಶ್, ಮುಖ್ಯಸ್ಥರು,ರವಿ ಕುಮಾರ್, ಗೌರವ ಅಧ್ಯಕ್ಷರು, ಶೈಲಜಾ, ಮಹಿಳಾ ಕಾರ್ಯದರ್ಶಿ, ನೀಲಮ್ಮ ಕೆ ಆರ್, ಉಪಾಧ್ಯಕ್ಷರುಬಿ, ಚಂದ್ರ ಬಾಯ್, ಅಧ್ಯಕ್ಷರು ಸೇರಿದಂತೆ ಇತರರು ಇದೇ ವೇಳೆ ಉಪಸ್ಥಿತರಿದ್ದರು.