ಬೆಂಗಳೂರು: ಭಾರತದ ರಕ್ಷಣೆ ಮತ್ತು ಏರೋಸ್ಟೇಸ್ ತಂತ್ರಜ್ಞಾನ ಕ್ಷೇತ್ರದಲ್ಲಿ ಮು೦ಚೂಣಿಯಲ್ಲಿರುವಫ್ಲೈಯಿಂಗ್ ವೆಡ್ಜ್ ಕಂಪನಿಯು ದೇಶದ ಮೊದಲ ಸ್ವದೇಶಿ ಮಾನವರಹಿತ ಬಾ೦ಬರ್ ಡ್ರೋನ್ ಎಂಬ ಖ್ಯಾತಿಯ ಎಫ್ಡಬ್ಬ್ಯುಡಿ-200ಬಿ ಏರ್ಕ್ರಾಫ್ಟ್ ಅನ್ನು ಇಂದು ಹೆಮ್ಮೆಯಿಂದ ಬೆ೦ಗಳೂರಿನ ಎಲೆಕ್ಟ್ರಾನಿಕ್ಸಿಟಿಯಲ್ಲಿ ಅನಾವರಣಗೊಳಿಸಿತು.
ಮೇಕ್ ಇನ್ ಇಂಡಿಯಾ ಯೋಜನೆಗೆ ಬಲ ತುಂಬುವ ಹಾಗೂ ದುಬಾರಿ ಮಾನವರಹಿತ ಬಾಂಬರ್ ವಿಮಾನಗಳಿಗಾಗಿ ಭಾರತವು ವಿದೇಶಗಳ ಮೇಲೆ ಅವಲಂಬಿತವಾಗುವುದನ್ನು ಕಡಿಮೆ ಮಾಡುವ ಬದ್ಧತೆಯೊಂದಿಗೆ ಕ೦ಪನಿಯು ಭಾರತವನ್ನು ಜಾಗತಿಕ ಮಟ್ಟದ ಡ್ರೋನ್ ಉತ್ಪಾದನೆ ಹಾಗೂ ತಂತ್ರಜ್ಞಾನದ ಹಬ್ ಮಾಡುವಉದ್ದೇಶದಿಂದ ಕೆಲಸ ಮಾಡುತ್ತಿದೆ. ಇದೇ ವೇಳೆ ದೇಶಕ್ಕೆ ಸೂಕ್ತವಾದ ವಾಯು ರಕ್ಷಣಾ ಸಂಪನ್ಮೂಲಗಳನ್ನು ಒದಗಿಸುವ ಹಾಗೂ ರಾಷ್ಟ್ರೀಯ ಭದ್ರತೆಗೆ ಬಲ ತುಂಬುವ ಮಹೋನ್ನತ ಗುರಿಯನ್ನೂ ಹೊಂದಿದೆ.
ಸಮಾರಂಭದಲ್ಲಿ ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಅಂಡ್ ಏರೋಸ್ಪೇಸ್ ಕಂಪನಿಯ ಸಂಸ್ಥಾಪಕ ಸುಹಾಸ್ತೇಜಸ್ಕಂದ ಮಾತನಾಡಿ, “ಕಳೆದ 15 ವರ್ಷಗಳಿಂದ ಮಾನರಹಿತ ಬಾ೦ಬರ್ ಏರ್ಕ್ರಾಫ್ಟ್ಗಳನ್ನು ಹೊಂದುವ ಭಾರತದ ಕನಸು ಕನಸಾಗಿಯೇ ಉಳಿದಿತ್ತು. ಡಿಆರ್ಡಿಒದಲ್ಲಿ ಸಾಕಷ್ಟು ಬಂಡವಾಳ ಹೂಡಿ, ಸತತ ಪ್ರಯತ್ನಗಳನ್ನು ನಡೆಸಿದ ಮೇಲೂತಪಸ್ ಹಾಗೂ ರುಸ್ತೋಮ್ನ೦ತಹ ಯೋಜನೆಗಳು ವಿಫಲಗೊಂಡಿದ್ದವು. ಇಂದು ಎಫ್ಡಬ್ಲ್ಯುಡಿ-200ಬಿ ಬಾಂಬರ್ ಡ್ರೋನ್ ಅನಾವರಣದೊಂದಿಗೆ ಭಾರತದ ಸ್ವದೇಶಿ ಮಾನವರಹಿತ ಬಾ೦ಬರ್ ಕನಸು ನನಸಾಗುತ್ತಿದೆ. ಅಲ್ಲದೆ,ಭಾರತವು ಸುಧಾರಿತ ಬಾ೦ಬರ್ಗಳ ಸಾಮರ್ಥ್ಯವುಳ್ಳ ದೇಶಗಳ ಸಾಲಿಗೆ ಸೇರ್ಪಡೆಯಾಗುತ್ತಿದೆ’ ಎ೦ದು ಹೇಳಿದರು.ಅಮೆರಿಕದ ‘ಪ್ರಿಡೇಟರ್’ಗೆ ಬರೋಬ್ಬರಿ 250 ಕೋಟಿ ವೆಚ್ಚವಾದರೆ, ಅತ್ಯಾಧುನಿಕ ತಂತ್ರಜ್ಞಾನವುಳ್ಳ ಹಾಗೂ ಭಾರತದಲ್ಲೇ ಉತ್ಪಾದಿಸಿದ ಎಫ್ಡಬ್ಲ್ಯುಡಿ-200ಬಿ ಏರ್ಕ್ರಾಫ್ಟ್ಗೆ ಕೇವಲ 25 ಕೋಟಿ ವೆಚ್ಚವಾಗುತ್ತದೆ. ಇದು ಭಾರತವನ್ನು ಆತ್ಮನಿರ್ಭರ ಶಕ್ತಿಯನ್ನಾಗಿ ಹೊರಹೊಮ್ಮುವಂತೆ ಮಾಡುವುದರ ಜೊತೆಗೆ, ಕಡಿಮೆ ವೆಚ್ಚದ ರಕ್ಷಣಾ ಸಾಮಗ್ರಿಗಳನ್ನು ಉತ್ಪಾದಿಸುವ ದೇಶಗಳಿಗೆ ನಾಯಕನ್ನಾಗಿಸಲಿದೆ ಎಂದು ಸುಹಾಸ್ ತಿಳಿಸಿದರು.
ಸ್ವದೇಶಿ ಬಾಂಬರ್ ಏರ್ಕ್ರಾಫ್ಟ್ ಅನಾವರಣದ ವೇಳೆ ಅತಿಥಿಗಳಿಗೆ ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಕಂಪನಿಯ ಅತ್ಯಾಧುನಿಕ ತಂತ್ರಜ್ಞಾನದ ಉತ್ಪಾದನಾ ಘಟಕದ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಇದೇ ಘಟಕದಲ್ಲಿ ಎಫ್ಡಬ್ಲ್ಯುಡಿ-200ಬಿ ಬಾ೦ಬರ್ ಏರ್ಕ್ರಾಫ್ಟ್ ತಯಾರಾಗಿದೆ. ಈ ಬಾಂಬರ್ ಏರ್ಕ್ರಾಫ್ಟ್ 100 ಕೆ.ಜಿ. ಪೇಲೋಡ್
ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಇದು ಮೇಲ್ ಅನ್ಮ್ಯಾನ್ಸ್ ಕಾಂಬ್ಯಾಟ್ ಏರಿಯಲ್ ವೆಹಿಕಲ್ (ಮಧ್ಯಮ ಆಲ್ಬಿಟ್ಯೂಡ್, ದೀರ್ಫ ಸಾಮರ್ಥ್ಯ) ಕೆಟಗರಿಯ ಅನ್ಮ್ಯಾನ್ಸ್ ಏರಿಯಲ್ ಸಿಸ್ಟಂ (ಯುಎಎಸ್) ವಿಭಾಗಕ್ಕೆ ಸೇರುತ್ತದೆ.
ಡ್ರೂನ್ ನಲ್ಲಿ ಏನೆಲ್ಲ ಅಡಗಿದೆ?
ಇದರಲ್ಲಿ ಆಪ್ಟಿಕಲ್ ಸರ್ವೇಲೆನ್ಸ್ ಪೇಲೋಡ್ಗಳನ್ನು ಹಾಗೂ ಕ್ಷಿಪಣಿ ರೀತಿಯಲ್ಲಿ ನಿಖರ ವಾಯುದಾಳಿ ನಡೆಸುವ, ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಹುದಾಗಿದೆ. ಎಫ್ಡಬ್ಬ್ಯುಡಿ-200ಬಿ ಏರ್ಕ್ರಾಫ್ಟ್ ಗರಿಷ್ಠ 200 ಕೆಟಿಎಸ್/370 ಕಿ.ಮೀ. (ಪ್ರತಿ ಗ0ಟೆ) ವೇಗದಲ್ಲಿ 12ರಿಂದ 20 9. ಇದು 498 ಕೆ.ಜಿ ತೂಕ ಹೊತ್ತು ಟೇಕಾಫ್ ಮಾಡಬಲ್ಲದು. ಅಲ್ಲದೆ, ಗ್ರೌಂಡ್ ಕಂಟ್ರೋಲ್ ಸ್ಟೇಶನ್ ಜೊತೆಗೆ (ಜಿಸಿಎಸ್) 200 ಕಿ.ಮೀ.ದೂರದವರೆಗೆ ಸಂಪರ್ಕ ಹೊಂದಿರುವ ಸಾಮರ್ಥ್ಯವನ್ನು ಹೊಂದಿದೆ.
ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಅಂಡ್ ಏರೋಸ್ಪೇಸ್ ಕುರಿತು:
2022ರಲ್ಲಿ ಸುಹಾಸ್ ತೇಜಸ್ಕಂದ ಅವರು ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಅಂಡ್ ಏರೋಸ್ಪೇಸ್ ಕಂಪನಿಯನ್ನು ಆರಂಭಿಸಿದರು. ರಕ್ಷಣಾ ಕ್ಷೇತ್ರದ ದುಬಾರಿ ಶಸ್ತ್ರಾಸ್ತ್ರ ಹಾಗೂ ಯುದ್ಧ ಸಾಮಗ್ರಿಗಳಿಗಾಗಿ ಭಾರತವು ದೊಡ್ಡ
ಪ್ರಮಾಣದಲ್ಲಿ ವಿದೇಶಗಳ ಮೇಲೆ ಅವಲಂಬಿತವಾಗಿರುವುದನ್ನು ಮನಗ೦ಡು ಈ ಸಲಕರಣೆಗಳ ಆಮದಿನ ಮೇಲೆ ಭಾರತವು ಅವಲಂಬಿತವಾಗುವುದನ್ನು ತಪ್ಪಿಸುವ ಉದ್ದೇಶದೊಂದಿಗೆ ಅವರು ಈ ಸಂಸ್ಥೆಯನ್ನು ಹುಟ್ಟುಹಾಕಿದರು. ಜೊತೆಗೆ, ಭಾರತದ ಮೇಕ್ ಇನ್ ಇಂಡಿಯಾ ಯೋಜನೆಗೆ ತಮ್ಮದೇ ಆದ ಕೊಡುಗೆ ನೀಡುವ ಮಹತ್ವಾಕಾಂಕ್ಷೆ ಕೂಡ ಅವರಿಗಿತ್ತು.
ಭಾರತವನ್ನು ಜಾಗತಿಕ ಮಟ್ಟದ ಮಾನವರಹಿತ ಏರ್ಕ್ರಾಫ್ಟ್ಗಳ (ಡ್ರೋನ್ ಎಂದು ಕೂಡ ಹೆಸರು) ಉತ್ಪಾದನೆ ಮತ್ತು ತಂತ್ರಜ್ಞಾನದ ಹಬ್ ಆಗಿಸುವ ಕನಸನ್ನು ಸುಹಾಸ್ ಹೊಂದಿದ್ದರು. ಅದರ ಜೊತೆಗೆ, ಭಾರತದ ವಾಯು ರಕ್ಷಣಾ ಪಡೆಗಳಿಗೆ ಬಲ ತುಂಬುವ ಉದ್ದೇಶವೂ ಅವರಿಗಿತ್ತು. ಅದರಂತೆ ಕಂಪನಿಯು ಸ್ವದೇಶಿ ಯುಎವಿ ತಂತ್ರಜ್ಞಾನದ ಕುರಿತು ಸಂಶೋಧನೆಗಳನ್ನು ನಡೆಸಲು ಭಾರತೀಯ ನಾಗರಿಕ ವಿಮಾನಯಾನ ನಿರ್ದೇಶನಾಲಯದ(ಡಿಜಿಸಿಎಎ ಮಾದರಿಯ ಪರವಾನಗಿಯನ್ನು ಪಡೆಯುವುದೇ ಮೊದಲಾದ ಮಹತ್ವದ ಮೈಲುಗಲ್ಲುಗಳನ್ನು ಸಾಧಿಸಿತು. ನಂತರ ತನ್ನ ಡ್ರೋನ್ಗಳನ್ನು ಭಾರತದ ಪ್ರಧಾನ ಮಂತ್ರಿಗಳಿಗೆ ರಕ್ಷಣೆ ಒದಗಿಸುವ ವಿಶೇಷ ರಕ್ಷಣಾ ಪಡೆ (ಎಸ್ಪಿಜಿ) ಮತ್ತು “ಎಲ್ ಅಂಡ್ ಟಿ’ಯಲ್ಲಿ ಸೇರ್ಪಡೆಗೊಳಿಸುವ ಮೂಲಕ ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಇನ್ನಷ್ಟು ಪಾಲುದಾರಿಕೆಯನ್ನು ಪಡೆಯಿತು. ನಿರಂತರವಾದ ಸೇವಾ ಮನೋಭಾವ, ಬದ್ಧತೆ ಹಾಗೂ ಸೃಜನಶೀಲ ಆವಿಷ್ಕಾರಗಳ ಮೂಲಕ ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಅಂಡ್ ಏರೋಸ್ಟೇಸ್ ಕಂಪನಿಯು ದೇಶದ ರಕ್ಷಣಾ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲುಗಳನ್ನು ಸ್ಥಾಪಿಸಿದೆ. ತನ್ಮೂಲಕ ಡ್ರೋನ್ ತಂತ್ರಜ್ಞಾನ ಕ್ಷೇತ್ರದಲ್ಲಿ ನಾಯಕನಾಗಿ ಹೊರಹೊಮ್ಮಿದೆ.