ಬೆಂಗಳೂರು: 20 ವರ್ಷಗಳವರೆಗೆ ಸರ್ಕಾರದ ಪರವಾನಿಗೆ ಪಡೆದು ಕಾನೂನು ಪ್ರಕಾರ ಕಲ್ಲು ಗಣಿ ಕ್ವಾರಿ ನಡೆಸುತ್ತಿರುವ ಪ್ರದೇಶದಲ್ಲಿ ಸುಖಾ ಸುಮ್ಮನೆ ಬಿಬಿಎಂಪಿಯವರು ನಗರದ ಕಸವನ್ನು ಗಣಿಗಾರಿಕೆ ನಡೆಯುವ ಪ್ರದೇಶದಲ್ಲಿ ಸುರಿಯುತ್ತಿರುವ ಹಿನ್ನೆಲೆ ಕಾಮಗಾರಿ ನಿಂತು ಹೋಗಿದ್ದು,ಸುಮಾರು 2 ಕೋಟಿ ಬೆಲೆಯ ಯಂತ್ರಗಳು ತುಕ್ಕು ಹಿಡಿದು ತೊಂದರೆಯಾಗಿದೆ ಎಂದು ಹೆಚ್ ಕೆಬಿ ಎನ್ ಗ್ರಾನೈಟ್ ಮಾಲಿಕರಾದ ರಫೀಕ ಅಹ್ಮದ್ ಅಳಲನ್ನು ತೋಡಿಕೊಂಡರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 5 ವರ್ಷಗಳಿಂದ ಬೆಂಗಳೂರು ಪೂರ್ವ ತಾಲೂಕು ಬಿದರಹಳ್ಳಿ ಹೋಬಳಿ ಕಣ್ಣೂರು ಗ್ರಾಮದ ಸರ್ವೆ ನಂಬರ್ 50 ರಲ್ಲಿ ಸರ್ಕಾರಿ ಗೋಮಾಳ ಜಮೀನಿನಲ್ಲಿ ಗಣಿಗಾರಿಕೆ ಮಾಡಲಾಗುತ್ತಿದೆ, ಬಿಬಿಎಂಪಿಯವರ ಅನುಮತಿ ಪಡೆದು ಕಾನೂನು ಕ್ರಮವಾಗಿ ಗಣಿ ಕಾಮಗಾರಿ ಸ್ಥಳ ನಿಯೋಜನೆಯಲ್ಲಿಯೇ ಕೆಲಸ ನಡೆಯುತ್ತಿತ್ತು, ಆದರೆ ಪಾಲಿಕೆಯವರು ನಿತ್ಯ 8ರಿಂದ 10 ಟಿಪ್ಪರ್ ಗಳಲ್ಲಿ ಕಸವನ್ನು ತಂದು ಸುರಿಯುತ್ತಿರುವುದರಿಂದ ಕಾಮಗಾರಿ ನಡೆಯದೇ ಹಾಳಾಗಿದೆ.
ಗಣಿ ಪ್ರದೇಶದ ವಿವರ:
ಒಟ್ಟು 178 ಎಕರೆ ವಿಸ್ತೀರ್ಣದಲ್ಲಿ 50 ಎಕರೆ ಬಿಎಂಟಿಸಿಗೆ ಮಂಜೂರಾಗಿದೆ.20 ಎಕರೆ ಬಿಬಿಎಂಪಿಗೆ ಇದೆ, ಉಳಿದ ಜಮೀನಿನಲ್ಲಿ ಕಲ್ಲು ಗಣಿ ಕಾರ್ಯ ನಡೆಯುತ್ತಿದೆ. ಆದರೆ ಅನಧಿಕೃತವಾಗಿ ಬಿಬಿಎಂಪಿಯವರು ಬೆಂಗಳೂರಿನ ತ್ಯಾಜ್ಯವನ್ನು ಸುರಿಯುತ್ತಿರುವುದರಿಂದ ಮೊದಲು ಗಣಿ ಕೆಲಸಕ್ಕೆ ಅಡ್ಡಿಯಾಗುತ್ತಿದೆ, ಅಲ್ಲದೆ ಕಸ ಸುರಿಯುವ ಪ್ರದೇಶದ ಸುತ್ತಮುತ್ತಲಿನ ಪ್ರದೇಶದಲ್ಲಿ ಜನರಿಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ, ಅಲ್ಲದೆ ಕಲುಷಿತ ವಾಸನೆ ಬೀರುತ್ತಿರುವ ಹಿನ್ನೆಲೆ ಪಾಲಿಕೆ ಮೇಲೆ ಇಡಿ ಶಾಪ ಹಾಕುತ್ತಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮದ ಸ್ಥಳೀಯರಾದ ಶಿವರಾಜ್ ಗೌಡ ಮಾತನಾಡಿ, ಇನ್ನು ಬಿದರಳ್ಳಿಯಿಂದ ಗಣಿಗಾರಿಕೆ ನಡೆಯುವ ಪ್ರದೇಶ ಸುಮಾರು 1ರಿಂದ ಒಂದುವರೆ ಕಿಮೀ ದೂರದಲ್ಲಿದೆ, ಗಣಿಪ್ರದೇಶದ ಸುತ್ತ ಕಾಡು ಇರುವ ಕಾರಣ ಅಷ್ಟು ಸುಲಭವಾಗಿ ಗೊತ್ತಾಗುವುದಿಲ್ಲ, ಗ್ರಾಮಕ್ಕೆ ಹೊಂದಿಕೊಂಡತೆ ಇದೆ. ಆದರೆ ನಿತ್ಯ ಕಸ ಸುರಿದು ಸುಮಾರು 20ರಿಂದ 25 ಅಡಿ ಎತ್ತರದಲ್ಲಿ ಕಸ ಗಣಿ ಪ್ರದೇಶದ ಸುತ್ತ ಬಿದ್ದಿದ್ದು,ಮಳೆ ಬಂದರೆ ಕಸದ ನೀರೆಲ್ಲ ಹರಿದು ಗಣಿ ಪ್ರದೇಶದಲ್ಲಿ ಶೇಕರಣೆಯಾಗಿ ಗಬ್ಬು ವಾಸನೆ ಬೀರುತ್ತದೆ.
2 ಕೋಟಿ ಖರ್ಚು, ಹಳ್ಳಹಿಡಿದ ಮೆಷಿನ್..
ಗಣಿ ಮಾಲಿಕ ರಫೀಕ ಅವರು ಸುಮಾರು ಕಾಮಗಾರಿ ಮಾಡಲು ಸುಮಾರು ಕಲ್ಲು ಗಣಿಗಾರಿಕೆಗೆ ಸುಮಾರು 2 ಕೋಟಿಯಷ್ಟು ಬಂಡವಾಳವನ್ನು ಯಂತ್ರಗಳಿಗೆ ಹಾಕಿದ್ದಾರೆ. ಆದರೆ ಕೆಲಸ ಮಾಡದೆ ಅನುಪಯುಕ್ತವಾಗಿ ಬಿದ್ದು ತುಕ್ಕುಹಿಡಿದಿವೆ. ಕಸ ಸುರಿಯುವ ಬಗ್ಗೆ ಪಾಲಿಕೆಯವರ ಮೇಲೆ ಮಾಲೀಕರು ಪ್ರಶ್ನೆ ಮಾಡಿದಕ್ಕೆ ಹಲ್ಲೆಗೆ ಯತ್ನ ಮಾಡಿದ್ದಾರೆ ಎಂದು ಆರೋಪಿಸಿದರು. ಕಸ ಸುರಿಯದಂತೆ ಹಿರಿಯ ಭೂ ವಿಜ್ಞಾನಿಗಳು ಗಣಿ ಮತ್ತು ಭೂ ವಿಜ್ನಾನ ಇಲಾಖೆಗೆ, ಬಿಬಿಎಂಪಿ ಇಂಜಿನಿಯರ್,ಸ್ಥಳೀಯ ಪೊಲೀಸ್ ಠಾಣೆಗೆ ಮನವಿ ಮಾಡಿದರು ಪ್ರಯೋಜನವಾಗಿಲ್ಲ, ಅದಕ್ಕೂ ಮೀರಿ ಮಾಲೀಕರು ಸಿವಿಲ್ ನ್ಯಾಯಾಲಯದಲ್ಲಿ ಕಸ ಸುರಿಯಾದಂತೆ OS NO.1994/2024 ಅರ್ಜಿ ಸಲ್ಲಿಸಿ ತಾತ್ಕಾಲಿಕ ತಡೆಯಾಜ್ನೆ ಆದೇಶ ಪಡೆಯಲಾಗಿದೆ. ಎಂ ಸ್ಯಾಂಡ್ ಗಾಗಿ ಸಲ್ಲಿಸಿರುವ ಜಾಗದ ಪರವಾನಿಗೆ ತಡೆಯಾಜ್ನೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಅದಕ್ಕೆ ಪಾಲಿಕೆಗೆ ತುರ್ತು ನೋಟಿಸ್ ಜಾರಿಯಾಗಿದೆ. ಇಷ್ಟೆಲ್ಲಾ ಇದ್ದರೂ ಸಹ ಅನಧಿಕೃತವಾಗಿ ಕಸ ಸುರಿಯುವುದನ್ನು ಮಾತ್ರ ಬಿಟ್ಟಿಲ್ಲ. ಸರ್ಕಾರದ ಪೋಡಿಯಾಗಿರುವ ನಿರ್ದಿಷ್ಟ ಜಮೀನಿನಲ್ಲಿ ಕಸ ಸುರಿದುಕೊಳ್ಳಿ, ಆದರೆ ಸುಮಾರು 60ರಿಂದ 70 ಎಕರೆ ಜಾಗದಲ್ಲಿ ಕಸ ಸುರಿದಿರುವುದರಿಂದ ಗಣಿಗಾರಿಕೆಗೆ ತೊಂದರೆಯಾಗುತ್ತಿದೆ.
ಕಸದಿಂದ ಗಬ್ಬು ವಾಸನೆ ಬರುತ್ತಿರುವ ಕಾರಣ ಜನವಸತಿ ಪ್ರದೇಶದಲ್ಲಿ ವಾಸಿಸಲು ಸಾಧ್ಯವಾಗುತ್ತಿಲ್ಲ, ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ, ಸಾಕು ಪ್ರಾಣಿಗಳಿಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ಸಂಬಂಧಪಟ್ಟ ಇಲಾಖೆಯವರು ನಿಯೋಜನೆಗೊಂಡಿರುವ ಸ್ಥಳ ಬಿಟ್ಟು ಅನಧಿಕೃತವಾಗಿ ತ್ಯಾಜ್ಯವನ್ನು ಗಣಿ ಪ್ರದೇಶಗಳಲ್ಲಿ ಸುರಿಯದಂತೆ ಮನವಿ ಮಾಡಿಕೊಂಡರು. ಇಲ್ಲದಿದ್ದರೆ ಬೀದಿಗಿಳಿದು ಸಾರ್ವಜನಿಕರೊಂದಿಗೆ ಪಾಲಿಕೆ ಕಚೇರಿ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.